ಲಂಕಾ ಅಧ್ಯಕ್ಷರನ್ನು ಭೇಟಿ ಮಾಡಿದ ಸುಷ್ಮಾ ಸ್ವರಾಜ್
ಶ್ರೀಲಂಕಾ ಅಧ್ಯಕ್ಷರಾದ ಸಿರಿಸೇನಾ ಅವರನ್ನು ಭೇಟಿ ಮಾಡಿದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಎರಡು ದಿನಗಳ ಭಾರತ ಸಾಗರ ಸಮ್ಮೇಳನಕ್ಕಾಗಿ ಶ್ರೀಲಂಕಾಕ್ಕೆ ತೆರಳಿರುವ ಸುಷ್ಮಾ ಸ್ವರಾಜ್.
ಕೊಲಂಬೋ, ಸೆಪ್ಟಂಬರ್ 1: ಭಾರತೀಯ ಸಾಗರ ಸಮಾವೇಶಕ್ಕಾಗಿ ಶ್ರೀಲಂಕಾಕ್ಕೆ ಆಗಮಿಸಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಶುಕ್ರವಾರ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಭೇಟಿ ಮಾಡಿದರು.
ಭೇಟಿಯ ವೇಳೆ, ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ ಅವರು, ಏಷ್ಯಾ ಮಟ್ಟದ ರಾಜಕೀಯ ವಿಚಾರಗಳಲ್ಲಿ ಭಾರತ, ಶ್ರೀಲಂಕಾ ನಡುವಿನ ಸ್ನೇಹವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿರುವ ಬಗ್ಗೆ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಸಿರಿಸೇನಾ ಅವರ ಭೇಟಿಗೂ ಮುನ್ನ ಸುಷ್ಮಾ ಅವರು ಶ್ರೀಲಂಕಾದ ವಿದೇಶಾಂಗ ಸಚಿವರಾದ ತಿಲಕ್ ಮಾರಾಪನಾ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಂದಹಾಗೆ, ಭಾರತ ಸಾಗರ ಸಮಾವೇಶವು ಎರಡು ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಸುಷ್ಮಾ ಸ್ವರಾಜ್ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ.












Click it and Unblock the Notifications