Sundar Pichai: ಗೂಗಲ್ ಸಿಇಓಗೂ ಬೆಂಗಳೂರಿನ ಮಸಾಲೆ ದೋಸೆ ಅಂದ್ರೆ ತುಂಬಾ ಇಷ್ಟ!
ಭಾರತೀಯ ಮಸಾಲೆ ಪದಾರ್ಥಗಳಿಗೆ ಮಾರು ಹೋಗದವರೇ ಇಲ್ಲ. ವಿದೇಶಿಗರಿಗಂತೂ ಇವು ಅಚ್ಚು ಮೆಚ್ಚಿನ ತಿಂಡಿಗಳಲ್ಲಿ ಒಂದಾಗಿವೆ. ವಿದೇಶಿಗಳು ರಸ್ತೆಯಲ್ಲಿ ನಡೆಯುತ್ತಾ ಹೊರಾಟಗ ಆಗಲಿ, ಕಾರ್‌ನಲ್ಲಿ ಹೊರಟಾಗ ಆಗಲಿ ಇದರ ಪರಿಮಳ ಬಂದರೆ ಟೆಸ್ಟ್ ಮಾಡದೇ ಇರಲು ಚಾನ್ಸೇ ಇಲ್ಲ. ಅಷ್ಟರ ಮಟ್ಟಿಗೆ ಇವುಗಳ ಫೇಮಸ್..
ನಮ್ಮ ದೇಶದಲ್ಲಿ ಹುಟ್ಟಿ ಬೇರೆ ದೇಶಗಳಲ್ಲಿ ಕೆಲಸ ಮಾಡುವ ಜನರಿಗೆ ಕೇಳ ಬೇಕೆ ಈ ಪದಾರ್ಥಗಳನ್ನು ನೆನಿಸಿಕೊಂಡರೆ ಬಾಯಲ್ಲಿ ನೀರು ಬರುತ್ತದೆ. ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಭಾರತೀಯ ಬೀದಿ ಆಹಾರಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಸುಂದರ್ ಪಿಚೈ ಕೆಲವು ವಿಷಯದ ಬಗ್ಗೆ ಗಮನ ಹರಿಸಿದರು. ಆಗ ಭಾರತೀಯ ಆಹಾರಗಳ ಬಗ್ಗೆಯೂ ಮಾತನಾಡಿದ್ದಾರೆ.

ಭಾರತೀಯ ಖಾದ್ಯ ಇಷ್ಟ
ಭಾರತೀಯ ಮೂಲದ ಸುಂದರ್ ಪಿಚೈ ವಿಶ್ವದ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಗೂಗಲ್ ಹಾಗೂ ಅದರ ಮಾತ್ರು ಸಂಸ್ಥೆ ಆಲ್ಫಾಬೆಟ್‌ನ ಸಿಇಒ. ಇವರು ಅಮೆರಿಕದಲ್ಲಿದ್ದರೂ ಸಹ ಭಾರತೀಯ ಆಹಾರಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ. ಇತ್ತೀಚಿಗೆ ಯುಟ್ಯೂಬರ್‌ಗೆ ನೀಡಿದ ಸಂದರ್ಶನ ಒಂದರಲ್ಲಿ ಸುಂದರ್ ಪಿಚೈ ಭಾರತದಲ್ಲಿ ತಮಗೆ ಇಷ್ಟದ ಆಹಾರಗಳನ್ನು ತಿಳಿಸಿ ಎಂದು ಕೇಳಿದಾಗ, ಅವರು ಬರೀ ಆಹಾರವನ್ನು ಮಾತ್ರ ಹೇಳದೇ ಯಾವ ಪ್ರದೇಶದಲ್ಲಿ ಇದ್ದಾಗ ಏನು ತಿನ್ನುತ್ತೇನೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ದೋಸೆ
ಯೂಟ್ಯೂಬರ್ ವರುಣ್ ಮಾಯಾ ಸುಂದರ್ ಪಿಚೈ ಅವರೊಂದಿಗೆ ಒಂದು ಸಂದರ್ಶನ ನಡೆಸಿದರು. ಈ ಸಂದರ್ಶನದಲ್ಲಿ ನಿಮ್ಮ ನೆಚ್ಚಿನ ಭಾರತೀಯ ಆಹಾರಗಳು ಯಾವವು ಎಂದು ಸಂದರ್ಶಕ ಕೇಳಿದರು. ಸುಂದರ್ ಪಿಚೈ ಹೇಳಿದ ಖಾದ್ಯಗಳನ್ನು ಒಮ್ಮೆ ಕೇಳಿದರೆ ಬಾಯಲ್ಲಿ ನೀರು ಬರುವುದು ಗ್ಯಾರಂಟಿ. ಈ ಪ್ರಶ್ನೆಗೆ ಗೂಗಲ್ ಸಿಇಒ ಪ್ರಾಂತ್ಯವಾರು ಉತ್ತರ ನೀಡಿದ್ದಾರೆ.
ನಾನು ಬೆಂಗಳೂರಿನಲ್ಲಿದ್ದಾಗ, ನಾನು ಬಹುಶಃ ದೋಸೆ ತಿನ್ನುತ್ತೇನೆ. ಇದು ನನ್ನ ನೆಚ್ಚಿನ ಆಹಾರ. ದೆಹಲಿಯಾದರೆ ಚೋಲೆ ಬಟುರೆ. ಮತ್ತು ಮುಂಬೈ ಆಗಿದ್ದರೆ ನಾನು ಪಾವ್ ಭಾಜಿ ತಿನ್ನುತ್ತೇನೆ. ಅವಕಾಶ ಸಿಕ್ಕಾಗಲೆಲ್ಲ ಈ ಆಹಾರಗಳನ್ನು ತುಂಬಾ ಎಂಜಾಯ್ ಮಾಡುತ್ತೇನೆ ಎಂದು ಗೂಗಲ್ ಸಿಇಒ ಹೇಳಿದ್ದಾರೆ.

ಇನ್ನು ಇದೇ ಪ್ರಾಡಕಾಸ್ಟ್‌ನಲ್ಲಿ ಸುಂದರ್ ಪಿಚೈ, ಕೃತಕ ಬುದ್ಧಿಮತ್ತೆ (AI) ಮತ್ತು ಭಾರತದಲ್ಲಿನ ತಂತ್ರಜ್ಞಾನದ ಭವಿಷ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ ಇಂಜಿನಿಯರ್ ಗಳಿಗೂ ಟಿಪ್ಸ್ ಕೊಟ್ಟರು.












Click it and Unblock the Notifications