ಯಮಯಾತನೆ ಅನುಭವಿಸಿ ನಮ್ಮನ್ನಗಲಿದ 'ಶಕ್ತಿಮಾನ್'

Subscribe to Oneindia Kannada

ನವದೆಹಲಿ, ಮಾರ್ಚ್ 17: ಉತ್ತರಾಖಂಡದ ಬಿಜೆಪಿ ಮುಖಂಡರಿಂದ ಹಲ್ಲೆಗೊಳಗಾಗಿದ್ದ ಕುದುರೆ ಶಕ್ತಿಮಾನ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಸಾಮಾಜಿಕ ತಾಣಗಳಲ್ಲೂ ಅಗಲಿದ ಶಕ್ತಿಮಾನ್ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆ.

ಪ್ರಮೋದ್ ಬೋರಾ, ಗಣೇಶ್ ಜೋಶಿ ಸೇರಿದಂತೆ ಉತ್ತರಾಖಂಡದ ಬಿಜೆಪಿ ನಾಯಕರು ಪ್ರತಿಭಟನೆಯೊಂದರ ವೇಳೆ ಕುದುರೆ ಕಾಲನ್ನು ಮುರಿದು ಹಾಕಿದ್ದರು. ಅಂತಿಮವಾಗಿ ಶಕ್ತಿಮಾನ್ ತನ್ನ ಇಹಲೋಕ ಯಾತ್ರೆಯನ್ನು ಮುಗಿಸಿದೆ. 45 ದಿನ ಯಾತನೆ ಅನುಭವಿಸಿದ ಕುದುರೆ ಬುಧವಾರ ಸಂಜೆ ಸಾವನ್ನಪ್ಪಿದೆ.[ಪೊಲೀಸ್ ಕುದುರೆ ಕಾಲು ಮುರಿದ್ರೆ ಸುಮ್ನೆ ಬಿಟ್ಟಾರೆಯೆ?]

hourse

ಡೆಹರಾಡೂನ್ ನಲ್ಲಿ ಮಾರ್ಚ್ 14 ರಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಗಣೇಶ್ ಜೋಶಿ ಸೇರಿದಂತೆ ಅನೇಕರು ಪೊಲೀಸ್ ಕುದುರೆ ಮೇಲೆ ಅಮಾನವೀಯ ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ಕುದುರೆ ಗಂಭೀರ ಗಾಯಗೊಂಡಿತ್ತು.['ಕುದುರೆ ಕಾಲು ಮುರಿದಿದ್ರೆ, ನನ್ನ ಕಾಲು ಮುರಿಯಲಿ']

ನಡುರಸ್ತೆಯಲ್ಲಿ ಕುದುರೆ ಕಾಲು ಮುರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, 'ನಾನು ಯಾವ ತಪ್ಪು ಮಾಡಿಲ್ಲ, ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನನ್ನ ಕಾಲನ್ನು ಕಡಿದು ಹಾಕಿ' ಎಂದು ಜೋಶಿ ಅವರು ಬುಧವಾರ ಘೋಷಣೆ ಸಹ ಹಾಕಿದ್ದರು. ಇದೀಗ ಕುದುರೆ ಸಾವನ್ನಪ್ಪಿದ್ದು ಮುಖಂಡರ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕು.[ಜಗತ್ತಿನ ಹಿರಿಯ ಶ್ವಾನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Shaktimaan, the horse who was badly injured in Uttarakhand last month, succumbed to injuries on Wednesday, April 20.'Shaktiman', a police horse was allegedly beaten by BJP's Mussoorie MLA Ganesh Joshi during a protest march held in Dehradun on March 14. After the fatal injury, Shaktimaan underwent an emergency life-saving surgery that went on for at least 5 hours by a special team of ten veterinary doctors (six from Pantnagar and four district veterinary officers).
Please Wait while comments are loading...