Shah Rukh Khan: ದಿಢೀರ್ ಆಸ್ಪತ್ರೆಗೆ ದಾಖಲಾದ ಶಾರುಖ್ ಖಾನ್
ಮಂಗಳವಾರ ಕೆಕೆಆರ್ ಪಂದ್ಯವನ್ನು ನೋಡಲು ಅಹಮದಾಬಾದ್‌ಗೆ ಆಗಮಿಸಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಹೀಟ್ ಸ್ಟ್ರೋಕ್‌ನಿಂದ ದಿಢೀರ್ ಎಂದು ಆಸ್ಪತ್ರೆಗೆ ದಾಖಲಾಗಿದ್ದರು.
ನಿರ್ಜಲೀಕರಣದ ಕಾರಣ ಶಾರುಖ್ ಖಾನ್ ಮಂಗಳವಾರ, ಮೇ 21 ರಂದು ಅಹಮದಾಬಾದ್‌ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಕೆಡಿ ಆಸ್ಪತ್ರೆಯ ವೈದ್ಯರ ಪ್ರಕಾರ, ಶಾರುಖ್ ಖಾನ್ ನಿರ್ಜಲೀಕರಣದಿಂದ ಬಳಲುತ್ತಿದ್ದರು. ಮಂಗಳವಾರ ಅಹಮದಾಬಾದ್‌ನಲ್ಲಿ ಕೆಕೆಆರ್ ಮತ್ತು ಎಸ್‌ಆರ್‌ಎಚ್ ನಡುವಿನ ಪ್ಲೇ-ಆಫ್ ಪಂದ್ಯ ನಡೆದಿತ್ತು. ಈ ಪಂದ್ಯಕ್ಕಾಗಿ ಎಸ್‌ಆರ್‌ಕೆ ಎರಡು ದಿನಗಳ ಹಿಂದೆ ಅಹಮದಾಬಾದ್‌ಗೆ ಆಗಮಿಸಿದ್ದರು.
ಪಂದ್ಯ ಮುಗಿದ ನಂತರ, ಎಸ್‌ಆರ್‌ಕೆ ತಂಡದೊಂದಿಗೆ ಅಹಮದಾಬಾದ್‌ನ ಐಟಿಸಿ ನರ್ಮದಾ ಹೋಟೆಲ್‌ಗೆ ತಡರಾತ್ರಿ ತಲುಪಿದರು, ಅಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆಯಿತು.
ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟ ನಂತರ, ಶಾರುಖ್ ಖಾನ್ ಅವರನ್ನು ಮಧ್ಯಾಹ್ನ 1 ಗಂಟೆಗೆ ಕೆಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ.
ಅಹಮದಾಬಾದ್ ಸೇರಿದಂತೆ ಉತ್ತರ ಭಾರತದ ಅನೇಕ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದೆ. ಗುಜರಾತ್‌ನ ರಾಜಧಾನಿಯಲ್ಲಿ 45 ಡಿಗ್ರಿಗಳಷ್ಟು ತಾಪಮಾನವಿದ್ದು, ಹವಾಮಾನ ಇಲಾಖೆ ನಗರದಲ್ಲಿ ಬಿಸಿಗಾಳಿಯ ರೆಡ್ ಅಲರ್ಟ್ ಘೋಷಿಸಿದೆ.












Click it and Unblock the Notifications