ಚಂದ್ರನನ್ನು ಹಿಂದೂರಾಷ್ಟ್ರ ಎಂದು ಘೋಷಿಸಿ: ಈ ಸ್ಥಳ ರಾಜಧಾನಿಯಾಗಲಿ ಎಂದ ಸ್ವಾಮೀಜಿ
ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಬಾಹ್ಯಾಕಾಶ ನೌಕೆ ಚಂದ್ರನ ಅಂಗಳದಲ್ಲಿ ಸುರಕ್ಷಿತವಾಗಿ ಇಳಿದು, ಈಗಾಗಲೇ ಅಧ್ಯಯನ ಆರಂಭಿಸಿದೆ. ಈ ಮೂಲಕ ಚಂದ್ರನ ಅಂಗಳದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಿದ ನಾಲ್ಕನೇ ರಾಷ್ಟ್ರ ಎನಿಸಿಕೊಂಡಿದ್ದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎನಿಸಿಕೊಂಡಿದೆ.
ಇದೆಲ್ಲದರ ಮಧ್ಯೆಯೇ ಹಿಂದೂ ಸ್ವಾಮೀಜಿಯೊಬ್ಬರು ವಿಚಿತ್ರವಾದ ಬೇಡಿಕೆ ಇಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, ಚಂದ್ರನನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸಬೇಕು ಮತ್ತು ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಇಳಿದ ಸ್ಥಳವನ್ನು ಹಿಂದೂ ರಾಷ್ಟ್ರದ ರಾಜಧಾನಿಯನ್ನಾಗಿ ಮಾಡಬೇಕು ಎಂದು ಸ್ವಾಮಿ ಚಕ್ರಪಾಣಿ ಮಹಾರಾಜ್ ಬೇಡಿಕೆ ಇಟ್ಟಿದ್ದಾರೆ. ವಿಲಕ್ಷಣ ಹೇಳಿಕೆಗಳಿಗೆ ಕುಖ್ಯಾತ ವ್ಯಕ್ತಿಯಾಗಿದ್ದಾರೆ ಸ್ವಾಮಿ ಚಕ್ರಪಾಣಿ ಮಹಾರಾಜ್.

ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಚಕ್ರಪಾಣಿ ಮಹಾರಾಜ್, ಇತರ ಧರ್ಮಗಳು ಮಾಡುವ ಮೊದಲು ಭಾರತ ಸರ್ಕಾರವು ಚಂದ್ರನ ಮಾಲೀಕತ್ವವನ್ನು ಘೋಷಿಸಬೇಕು ಎಂದು ಕರೆ ನೀಡಿದರು ಮತ್ತು ಸಂಸತ್ತು ಈ ನಿಟ್ಟಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.
ಕಳೆದ ವಾರ ಇಸ್ರೋದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ, ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಸ್ಥಳ' ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
ಭಯೋತ್ಪಾದಕರು ಹೋಗದಂತೆ ಕ್ರಮ!
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್, "ಯಾವುದೇ ಭಯೋತ್ಪಾದಕ" ಅಲ್ಲಿಗೆ ತಲುಪದಂತೆ ಭಾರತ ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
"ಚಂದ್ರನನ್ನು ಸಂಸತ್ತು ಹಿಂದೂ ಸನಾತನ ರಾಷ್ಟ್ರ ಎಂದು ಘೋಷಿಸಬೇಕು. ಚಂದ್ರಯಾನ 3 ಇಳಿದಿರುವ ಸ್ಥಳವನ್ನು ಅದರ ರಾಜಧಾನಿ "ಶಿವಶಕ್ತಿ ಪಾಯಿಂಟ್" ಆಗಿ ಅಭಿವೃದ್ಧಿಪಡಿಸಬೇಕು, ಇದರಿಂದ ಜಿಹಾದಿ ಮನಸ್ಥಿತಿಯ ಯಾವುದೇ ಭಯೋತ್ಪಾದಕ ಅಲ್ಲಿಗೆ ತಲುಪಬಾರದು" ಎಂದು ಟ್ವೀಟ್ ಮಾಡಿರುವ ವೀಡಿಯೊದಲ್ಲಿ ಹೇಳಿದ್ದಾರೆ.
ಅನೇಕ ವಿವಾದಾತ್ಮಕ ಹೇಳಿಕೆ ನೀಡಿದ್ದ ಸ್ವಾಮೀಜಿ
ಚಕ್ರಪಾಣಿಯವರು ವಿಲಕ್ಷಣ ಹೇಳಿಕೆ ನೀಡುವುದು ಹೊಸದೇನಲ್ಲ. 2020 ರಲ್ಲಿ, ದೇಶವು ಕೊರೋನ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ, ಅವರು ರಾಷ್ಟ್ರ ರಾಜಧಾನಿಯಲ್ಲಿ "ಗೋಮೂತ್ರ ಸಭೆ" ಯನ್ನು ಆಯೋಜಿಸಿದರು, ಅಲ್ಲಿ ಅವರು ಮತ್ತು ಅವರ ಸಹವರ್ತಿ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ರೋಗವನ್ನು ನಿವಾರಿಸಲು ಗೋಮೂತ್ರವನ್ನು ಸೇವಿಸಿದ್ದರು.
"ಪ್ರಾಣಿಗಳನ್ನು ಕೊಂದು ತಿನ್ನುವ ಜನರಿಂದಾಗಿ ಕೊರೊನಾವೈರಸ್ ಬಂದಿದೆ. ನೀವು ಪ್ರಾಣಿಯನ್ನು ಕೊಂದಾಗ, ಅದು ಆ ಸ್ಥಳದಲ್ಲಿ ವಿನಾಶವನ್ನು ಉಂಟುಮಾಡುವ ಒಂದು ರೀತಿಯ ಶಕ್ತಿಯನ್ನು ಸೃಷ್ಟಿಸುತ್ತದೆ" ಎಂದು ಅವರು ಈ ಕಾರ್ಯಕ್ರಮದಲ್ಲಿ ಹೇಳಿದ್ದರು ಎಂದು ಪಿಟಿಐ ವರದಿ ಮಾಡಿತ್ತು.
"ಜಾಗತಿಕ ನಾಯಕರು ಭಾರತದಿಂದ ಗೋಮೂತ್ರವನ್ನು ಆಮದು ಮಾಡಿಕೊಳ್ಳಬೇಕು, ಏಕೆಂದರೆ ಸರ್ವಶಕ್ತನು ಭಾರತೀಯ ಹಸುಗಳಲ್ಲಿ ಮಾತ್ರ ವಾಸಿಸುತ್ತಾನೆ ಮತ್ತು ಯಾವುದೇ ವಿದೇಶಿ ತಳಿಯಲ್ಲಿ ಅಲ್ಲ." ಎಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.
2018 ರಲ್ಲಿ, ಕೇರಳದಲ್ಲಿ ವಿನಾಶಕಾರಿ ಪ್ರವಾಹದ ಸಂದರ್ಭದಲ್ಲಿ, ಸ್ವಾಮಿ ಚಕ್ರಪಾಣಿ ಅವರು ರಾಜ್ಯದಲ್ಲಿ ಗೋಮಾಂಸ ತಿನ್ನುವವರು ಯಾವುದೇ ಸಹಾಯ ಪಡೆಯಬಾರದು ಎಂದು ಹೇಳಿಕೆ ನೀಡಿದ್ದರು. 2023ರ ಆರಂಭದಲ್ಲಿ, ಅವರು ಹಿಂದೂ ಧರ್ಮವನ್ನು ಅವಮಾನಿಸುವ ಬಾಲಿವುಡ್ ಚಲನಚಿತ್ರಗಳು, ವೆಬ್‌ಸರಣಿ ಸಂಗೀತ ವೀಡಿಯೊಗಳು ಇತ್ಯಾದಿಗಳಲ್ಲಿನ ವಿಷಯವನ್ನು ಮೇಲ್ವಿಚಾರಣೆ ಮಾಡಲು "ಧರ್ಮ ಸೆನ್ಸಾರ್ ಮಂಡಳಿ" ಅನ್ನು ಸ್ಥಾಪಿಸಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications