School Holiday: ಮಾರ್ಚ್ 21ರಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ
School Holiday: ವರ್ಷದ ಆರಂಭದಿಂದಲೂ ಇಲ್ಲಿವರೆಗೆ ಕಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇದೀಗ ಮತ್ತೆ ಮಾರ್ಚ್ 21ರಂದು ಈ ಭಾಗದ ಶಾಲಾ-ಕಾಲೇಜು, ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಕರ್ನಾಟಕದಲ್ಲಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಪ್ರತಿಭಟನೆ ಹಾಗೂ ವಿಶೇಷ ಕಾರ್ಯಕ್ರಮಗಳ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನ ಬಡಿಸಿದಂತಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿಯಲಿದ್ದು, ಬಳಿಕ ಬೇಸಿಗೆ ರಜೆ ಸಿಗಲಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಕರ್ನಾಕಟಕಕ್ಕೆ ಹೋಲಿಕೆ ಮಾಡಿದ್ರೆ ವಿವಿಧ ಕಾರಣಗಳಿಂದಾಗಿ ಹೆಚ್ಚು ರಜೆಗಳನ್ನು ನೀಡಲಾಗಿದೆ.

ಶಾಲೆಗಳಿಗೆ ಬೇಸಿಗೆ ರಜೆಗಳ ಪಟ್ಟಿ ಈಗಾಗಲೇ ಬಂದಿದೆ. ಈ ನಡುವೆಯೂ ಈ ಭಾಗದಲ್ಲಿ ಮಾರ್ಚ್ 21ರಂದು ಶಾಲಾ-ಕಾಲೇಜುಗಳು ಹಾಗೂ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ವಾಸ್ತವವಾಗಿ, ಶಾಲೆಗಳಿಗೆ ಕೇವಲ ಒಂದು ದಿನ ರಜೆ ಇರುತ್ತದೆ. ಆದರೆ, ಶನಿವಾರ ಅರ್ಧ ದಿನ ಹಾಗೂ ಮಾರನೇ ದಿನ ಭಾನುವಾರ ಆದ್ದರಿಂದ ಸತತ ಮೂರು ದಿನಗಳ ಕಾಲ ವಿದ್ಯಾರ್ಥಿಗಳಿಗೆ ರಜೆ ಸಿಕ್ಕಾಂತಾಗಲದೆ.
ಸೀತಾಳ ಅಷ್ಟಮಿ ಹಿನ್ನೆಲೆ ಮಾರ್ಚ್ 21ರಂದು ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇನ್ನು ಮಾರ್ಚ್ 22 ರ ಶನಿವಾರ ಮತ್ತು ಮಾರ್ಚ್ 23ರ ಭಾನುವಾರ ಸೇರಿ ಶಾಲೆಗಳಿಗೆ ಸತತ ಮೂರು ದಿನಗಳ ರಜೆ ಇರುತ್ತದೆ. ಶೀತಲ್ ಅಷ್ಟಮಿಯ ಸಂದರ್ಭದಲ್ಲಿ ಜೈಪುರ ಕಲೆಕ್ಟರ್ ರಜೆ ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ..
ಕಳೆದ ವರ್ಷ ಜೈಪುರ ಕಲೆಕ್ಟರ್ ಆಗಿದ್ದ ಜಿತೇಂದ್ರ ಸೋನಿ ನವೆಂಬರ್ 27ರಂದು ಈ ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆ ಸೀತಾಳ ಅಷ್ಟಮಿಯ ದಿನವಾದ ಮಾರ್ಚ್ 21ರಂದು ಶಾಲೆಗಳಿಗೆ ರಜೆ ನೀಡಲಾಯಿತು. ಶೀತಲ್ ಅಷ್ಟಮಿಯನ್ನು ಮುಖ್ಯವಾಗಿ ಚಕ್ಸು ಮತ್ತು ಜೈಪುರ ಪ್ರದೇಶಗಳಲ್ಲಿ ವೈಭವದಿಂದ ಆಚರಣೆ ಮಾಡಲಾಗುತ್ತದೆ.
ಮತ್ತೊಂದೆಡೆ ತೀಜ್ ಹಬ್ಬ ಹಿನ್ನೆಲೆ ಮಾರ್ಚ್ 19ರಂದು ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು, ಬ್ಯಾಂಕ್‌ಗಳು ಮತ್ತು ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೋಳಿ ರಜೆಯ ನಂತರ, ಮಧ್ಯಪ್ರದೇಶ ಸರ್ಕಾರವು ಮಾರ್ಚ್ 19ರಂದು ರಜೆಯನ್ನು ಘೋಷಿಸಿತ್ತು.
ಅಲ್ಲದೆ, ಈ ದಿನ ರಾಜ್ಯಾದ್ಯಂತ ರಂಗಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್, ಆರ್ಥಿಕ ರಾಜಧಾನಿ ಇಂದೋರ್ ಮತ್ತು ಉಜ್ಜಯಿನಿಯಲ್ಲಿ ಆಚರಣೆ ಮಾಡಲಾಗುತ್ತದೆ.
ಇಂದೋರ್‌ನಲ್ಲಿ ರಂಗಪಂಚಮಿ ಹಬ್ಬವನ್ನು ಗೆರ್ ಹೆಸರಿನಲ್ಲಿ ಆಚರಿಸಲಾಗುತ್ತದೆ. ಇಲ್ಲಿನ ಜನರು ತಮ್ಮ ಮನೆಗಳಿಂದ ಹೊರಬಂದು ಬೀದಿಗಳಲ್ಲಿ ಹೋಳಿ ಆಡುತ್ತಾರೆ. ಆದ್ದರಿಂದ ಈ ದಿನ ನಗರದ ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಲಾಗಿದೆ. ಇದೇ ವೇಳೆ ಉಜ್ಜಯಿನಿಯಲ್ಲಿಯೂ ಜನರು ತಮ್ಮ ಮನೆಗಳಲ್ಲಿ ಹೋಳಿ ಆಡುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.












Click it and Unblock the Notifications