'ಇಂದು ಸರ್ಕಾರ್' ಚಿತ್ರಕ್ಕೆ ಸುಪ್ರೀಂ ಹಸಿರು ನಿಶಾನೆ; ನಾಳೆ ರಿಲೀಸ್

Posted By:
Subscribe to Oneindia Kannada

ನವದಹೆಲಿ, ಜುಲೈ 27: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು, ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ 'ತುರ್ತು ಪರಿಸ್ಥಿತಿ'ಯ ರಾಜಕೀಯ ಸನ್ನಿವೇಶವನ್ನು ಆಧರಿಸಿ ನಿರ್ಮಿಸಲಾಗಿರುವ 'ಇಂದು ಸರ್ಕಾರ್' ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ್ದು, ಜುಲೈ 28ರಂದು ಆ ಚಿತ್ರ ರಾಷ್ಟ್ರಾದ್ಯಂತ ಬಿಡುಗಡೆಯಾಗಲಿದೆ.

'ಕಾಂಗ್ರೆಸ್ ಗೂಂಡಾಗಿರಿ ಅನುಮೋದಿಸ್ತೀರಾ?' ರಾಹುಲ್‌ಗೆ ಮಧುರ್ ಪ್ರಶ್ನೆ

ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿಯವರ ಮಗಳು ಎಂದು ಹೇಳಿಕೊಂಡಿರುವ ಪ್ರಿಯಾ ಸಿಂಗ್ ಪಾಲ್ ಎಂಬ ಮಹಿಳೆಯೊಬ್ಬರು ಚಿತ್ರದ ಬಿಡುಗಡೆ ವಿರುದ್ಧ ಬಾಂಬೆ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ಅವರ ಅರ್ಜಿಗೆ ಪುರಸ್ಕಾರ ಸಿಕ್ಕಿರಲಿಲ್ಲ. ಹಾಗಾಗಿ, ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಇಂದಿರಾಗಿತ್ತೆ ನೆಹರೂ ಸೆಕ್ರೆಟರಿ ಜೊತೆ ಸೀಕ್ರೆಟ್ ಸಂಬಂಧ?

SC clears way for Indu Sarkar, film to hit screens as per schedule

ಈ ಹಿನ್ನೆಲೆಯಲ್ಲಿ, ಚಿತ್ರದ ನಿರ್ದೇಶಕ ಮಧುರ್ ಭಂಡಾರ್ಕರ್ ಅವರು, ಸುಪ್ರೀಂ ಕೋರ್ಟ್ ಗೆ ತಮ್ಮ ವಕೀಲರ ಮೂಲಕ ಸಲ್ಲಿಸಿದ ಸ್ಪಷ್ಟನೆಯ ವಿಚಾರಣೆ ನಡೆಸಿದ ನ್ಯಾ. ದೀಪಕ್ ಮಿಶ್ರಾ, ನ್ಯಾ. ಅಮಿತಾವ ರಾಯ್ ಹಾಗೂ ಎ.ಎಂ. ಖಾನ್ವಿಳ್ಕರ್ ನೇತೃತ್ವದ ವಿಭಾಗೀಯ ಪೀಠ, ಚಿತ್ರವು ಕಲಾತ್ಮಕವಾಗಿ ಮೂಡಿಬಂದಿದ್ದು ಯಾವುದೇ ಆಕ್ಷೇಪಾರ್ಹ ಅಂಶವಿಲ್ಲವೆಂದ ಮೇಲೆ ಚಿತ್ರದ ಬಿಡುಗಡೆಯನ್ನು ತಡೆ ಹಿಡಿಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court on Thursday cleared the decks for the release of Bollywood movie 'Indu Sarkar' on Friday by dismissing a plea of a woman, who claims to be the biological daughter of late Sanjay Gandhi, for a stay on its screening.
Please Wait while comments are loading...