ಧಾರ್ಮಿಕ ಸಾಹಿತ್ಯ ನಿಧಿ ಗೀತಾ ಪ್ರೆಸ್ ಉಳಿಸಿ ಅಭಿಯಾನ
ಗೋರಖ್ ಪುರ್, ಆಗಸ್ಟ್ 28: ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಸೇರಿದಂತೆ ಧಾರ್ಮಿಕ ಸಾಹಿತ್ಯವನ್ನು ಪ್ರಕಟಿಸುವ ಗೀತಾ ಪ್ರೆಸ್ ಮುಚ್ಚುವ ಹಂತ ತಲುಪಿದೆ ಎಂಬ ಸುದ್ದಿ ಬಂದಿದೆ. 1923ರಿಂದ ಧಾರ್ಮಿಕ ಸಾಹಿತ್ಯ ಭಂಡಾರವಾಗಿರುವ ಗೀತಾ ಪ್ರೆಸ್ ಉಳಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
1923 ರಲ್ಲಿ ಬಾಡಿಗೆಯ ಕೋಣೆಯೊಂದರಲ್ಲಿ ಕೇವಲ ಮೂರು ಮುದ್ರಣ ಯಂತ್ರಗಳ ಮೂಲಕ ಅರಂಭವಾದ ಗೀತಾ ಪ್ರೆಸ್ ಹಲವು ಬಾರಿ ಕಾರ್ಮಿಕರು ಹಾಗೂ ಆರ್ಥಿಕ ಸಮಸ್ಯೆ ಎದುರಿಸುತ್ತಾ ಬಂದಿದೆ.
1955 ರಲ್ಲಿ ಗೀತಾ ಪ್ರೆಸ್ ಗೆ ನೂತನ ಕಟ್ಟಡವನ್ನು ನಿರ್ಮಿಸಿ ರಾಷ್ಟ್ರದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ರವರಿಂದ ಉದ್ಘಾಟನೆ ಕಂಡಿತು. ವಿಶ್ವದಲ್ಲಿಯೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಗುಣಮಟ್ಟದ ಭಗವದ್ಗೀತೆಯ ಪ್ರತಿಗಳನ್ನು ಮುದ್ರಿಸುವ ಈ ಮುದ್ರಣಾಲಯ ಗೋರಖ್ ಪುರ ನಗರ ರೈಲ್ವೇ ನಿಲ್ದಾಣದಿಂದ ನಾಲ್ಕು ಕಿ.ಮೀ ದೂರವಿದ್ದು ಪ್ರತಿದಿನ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಸಾಂಸ್ಕೃತಿಕ, ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವ ಧಾರ್ಮಿಕ ಸಾಹಿತ್ಯವನ್ನು ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಮುದ್ರಿಸಿ ಪ್ರಕಟಿಸುವ ಗೀತಾ ಪ್ರೆಸ್ ಈಗ ಸಂಕಷ್ಟದಲ್ಲಿದೆ. ಗೀತಾ ಪ್ರೆಸ್ ಅಭಿಮಾನಿಗಳು, ಪ್ರಕಟಣೆಗಳನ್ನು ಖರೀದಿಸಿ ನೆರವಾಗಬಹುದು. ಆನ್ ಲೈನ್ ನಲ್ಲೂ ಹಣ ರವಾನೆ, ಖರೀದಿಗೆ ಸೌಲಭ್ಯ ಒದಗಿಸಲಾಗಿದೆ., ಹೆಚ್ಚಿನ ವಿವರಗಳಿಗೆ ಗೀತಾ ಪ್ರೆಸ್ ವೆಬ್ ಸೈಟ್ ನೋಡಬಹುದು. ಸದ್ಯಕ್ಕೆ #SaveGitaPress ಮೂಲಕ ನಡೆದಿರುವ ಚರ್ಚೆ ವಿವರ ಮುಂದೆ ನೋಡಿ...

ಗೀತಾ ಪ್ರೆಸ್ ಉಳಿಸಲು ಅಭಿಯಾನ
ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಸೇರಿದಂತೆ ಧಾರ್ಮಿಕ ಸಾಹಿತ್ಯವನ್ನು ಪ್ರಕಟಿಸುವ ಗೀತಾ ಪ್ರೆಸ್ ಮುಚ್ಚುವ ಹಂತ ತಲುಪಿದೆ ಎಂಬ ಸುದ್ದಿ ಬಂದಿದೆ. 1923ರಿಂದ ಧಾರ್ಮಿಕ ಸಾಹಿತ್ಯ ಭಂಡಾರವಾಗಿರುವ ಗೀತಾ ಪ್ರೆಸ್ ಉಳಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ಆರಂಭವಾಗಿದೆ.
|
ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡ ಜನತೆ
ಪ್ರಧಾನಿ ಮೋದಿಗೆ ಮನವಿ ಮಾಡಿಕೊಂಡ ಜನತೆ, ಈ ವಿಷಯದಲ್ಲಿ ನಿಮ್ಮ ನೆರವು ಬೇಕಿದೆ ಎಂದು ಕೋರಿದ್ದಾರೆ.
|
ಸರ್ಕಾರಿ ಗ್ರಂಥಾಲಯ ಸ್ಥಾಪಿಸಿ
ಸರ್ಕಾರಿ ಗ್ರಂಥಾಲಯ ಸ್ಥಾಪಿಸಿ ನೆರವಾಗುತ್ತೇವೆ. ಟ್ರೆಂಡ್ ಮಾಡುವುದರಿಂದ ಏನು ಪ್ರಯೋಜನ.
|
ಗೀತಾ ಪ್ರೆಸ್ ಉಳಿಸಿದರೆ ಹಿಂದೂ ಧರ್ಮ ಉಳಿಸಿದಂತೆ
ಗೀತಾ ಪ್ರೆಸ್ ಉಳಿಸಿದರೆ ಹಿಂದೂ ಧರ್ಮ ಉಳಿಸಿದಂತೆ, ಎಲ್ಲರೂ ಕೈ ಜೋಡಿಸಿ.
|
ಹೆಚ್ಚು ಹೆಚ್ಚು ಪುಸ್ತಕಗಳನ್ನು ಖರೀದಿಸಿ
ಹೆಚ್ಚು ಹೆಚ್ಚು ಪುಸ್ತಕಗಳನ್ನು ಖರೀದಿಸಿ, ಆನ್ ಲೈನ್ ಮೂಲಕವೂ ಖರೀದಿ ಮಾಡಿ. ಪ್ರೆಸ್ ಉಳಿಸಿ.
|
ಅಮೂಲ್ಯ ಕೃತಿಗಳ ಭಂಡಾರ ಗೀತಾ ಪ್ರೆಸ್
ಅಮೂಲ್ಯ ಕೃತಿಗಳ ಭಂಡಾರ ಗೀತಾ ಪ್ರೆಸ್ ನಲ್ಲಿ 3,500ಕ್ಕೂ ಅಧಿಕ ತಾಳೆಗರಿ ಗ್ರಂಥಗಳಿವೆ. ಎಲ್ಲವನ್ನು ಉಳಿಸಬೇಕಿದೆ.












Click it and Unblock the Notifications