ಸಚಿನ್ ತೆಂಡೂಲ್ಕರ್ ಗೆ ಸ್ಮರಣಿಕೆ

Posted By:
Subscribe to Oneindia Kannada

ಕೋಳಿಕ್ಕೋಡ್, ಫೆಬ್ರವರಿ 3: ನೂತನವಾಗಿ ನಿರ್ಮಾಣಗೊಂಡಿರವ ಕ್ರೀಡಾ ಸೌಕರ್ಯ, ತರಬೇತಿ ಕೇಂದ್ರವಾದ ಆಸ್ಟರ್ ಎಂಐಎಂಎಸ್ ಕಟ್ಟಡವನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕ ಡಾ. ಆಜಾದ್ ಮೂಪೆನ್ ಅವರು ಸಚಿನ್ ತೆಂಡೂಲ್ಕರ್ ಅವರಿಗೆ ಸ್ಮರಣಿಕೆಯೊಂದನ್ನು ನೀಡಿ ಗೌರವಿಸಿದರು.

ನೂತನ ಕೇಂದ್ರದಲ್ಲಿ, ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡಾ ತರಬೇತಿ ನೀಡಲಾಗುವುದಲ್ಲದೆ, ಫಿಟ್ನೆಸ್ ತರಗತಿಗಳು, ಗಾಯಾಳು ಕ್ರೀಡಾಳುಗಳ ರಿಹಬಿಲೇಷನ್ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಈ ಸಂಸ್ಥೆ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಸಮಾರಂಭ ಹೊರತುಪಡಿಸಿದರೆ, ದೇಶದಲ್ಲಿ ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಹಲವಾರು ಸಭೆ, ಸಮಾರಂಭಗಳು ನಡೆದಿವೆ. ಅಹ್ಮದಾಬಾದ್ ನಲ್ಲಿ ನಡೆದ ಜಾಲಿ ಎಲ್ ಎಲ್ ಬಿ 2 ಚಿತ್ರದ ಪ್ರಚಾರದಲ್ಲಿ ನಟ ಅಕ್ಷಯ್ ಕುಮಾರ್ ಹಾಜರಾಗಿ ಗಮನ ಸೆಳೆದರು. ಪಂಜಾಬ್ ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಮ್ಮ ಪಕ್ಷದ ಪರವಾಗಿ ಮತ ಯಾಚಿಸಿದರು.

ಕಚ್ಛಾ ತೈಲದ ಬಣ್ಣ ತೆಗೆಯಲು ಕಾರ್ಯಾಚರಣೆ

ಕಚ್ಛಾ ತೈಲದ ಬಣ್ಣ ತೆಗೆಯಲು ಕಾರ್ಯಾಚರಣೆ

ಇತ್ತೀಚೆಗೆ ಸಂಭವಿಸಿದ್ದ ತೈಲ ಸೋರಿಕೆಯಿಂದಾಗಿ ಕಪ್ಪಾಗಿದ್ದ ತಮಿಳುನಾಡಿನ ಎನ್ನೋರ್ ನಲ್ಲಿರುವ ಕಾಮರಾಜ ಬಂದರಿನ ದಡದಲ್ಲಿರುವ ಪ್ಲಾಟ್ ಫಾರಂ ಅನ್ನು ಶುಕ್ರವಾರ ಕೋಸ್ಟ್ ಗಾರ್ಡ್ ಗಳು, ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಸ್ವಯಂ ಸೇವಕರ ನೆರವಿನಿಂದಾಗಿ ಸ್ವಚ್ಛಗೊಳಿಸಲಾಯಿತು.

ಸರಸ್ವತಿ ವಿಸರ್ಜನೆ ನಿಮಿತ್ತ ಆಚರಣೆ

ಸರಸ್ವತಿ ವಿಸರ್ಜನೆ ನಿಮಿತ್ತ ಆಚರಣೆ

ಶುಕ್ರವಾರ ಪಾಟ್ನಾದ ಮಗಧ ಮಹಿಳಾ ಕಾಲೇಜಿನಲ್ಲಿ ನಡೆದ ಬಸಂತ್ ಪಂಚಮಿ ಆಚರಣೆ ಹಿನ್ನೆಲೆಯಲ್ಲಿ ಸರಸ್ವತಿ ವಿಸರ್ಜನೆ ಹಮ್ಮಿಕೊಳ್ಳಲಾಯಿತು. ಆ ವೇಳೆ ವಿದ್ಯಾರ್ಥಿನಿಯರು ಹೋಲಿ ಆಚರಿಸಿ ಸೆಲ್ಫಿಗೆ ಮುಖವೊಡ್ಡಿದ ಚಿತ್ರ.

ಚಿತ್ರ ಪ್ರಚಾರಕ್ಕಾಗಿ ಬಂದ ಆ್ಯಕ್ಷನ್ ಹೀರೋ

ಚಿತ್ರ ಪ್ರಚಾರಕ್ಕಾಗಿ ಬಂದ ಆ್ಯಕ್ಷನ್ ಹೀರೋ

ಶೀಘ್ರದಲ್ಲೇ ತೆರೆಕಾಣಲಿರುವ ತಮ್ಮ ಚಿತ್ರವಾದ ಜಾಲಿ ಎಲ್ ಎಲ್ ಬಿ 2 ರ ಪ್ರಚಾರಕ್ಕಾಗಿ ಅಹ್ಮದಾಬಾದ್ ಗೆ ಆಗಮಿಸಿದ್ದ ಅಕ್ಷಯ್ ಕುಮಾರ್ ಅವರು ಪತ್ರಿಕಾ ಛಾಯಾಗ್ರಾಹಕರಿಗೆ ಕಂಡಿದ್ದು ಹೀಗೆ.

ಎಲ್ಲೆಲ್ಲೂ ಬೆಳ್ಳಿ ಮಂಜು

ಎಲ್ಲೆಲ್ಲೂ ಬೆಳ್ಳಿ ಮಂಜು

ಜಮ್ಮು ಕಾಶ್ಮೀರದಲ್ಲಿ ಹಿಮಪಾತವಾಗುತ್ತಲೇ ಇದೆ. ಪ್ರಸಿದ್ಧ ಯಾತ್ರಾ ಸ್ಥಳವಾದ ಮನಾಲಿಯಲ್ಲಿ ಸೊಲಾಂಗ್ ವ್ಯಾಲಿಯ ರೆಸಾರ್ಟ್ ನಲ್ಲಿ ಮುಂಭಾಗದಲ್ಲಿ ಕಂಡುಬಂದ ದೃಶ್ಯ.

ಜನರ ಬಳಿಗೆ ಸಿಕ್ಸರ್ ಸಿಧು

ಜನರ ಬಳಿಗೆ ಸಿಕ್ಸರ್ ಸಿಧು

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್ ನ ಮುಖ್ಯಮಂತ್ರಿ ಅಭ್ಯರ್ಥಿ ಮನ್ ಪ್ರೀತ್ ಸಿಂಗ್ ಬಾದಲ್ ಪರವಾಗಿ ಪ್ರಚಾರ ಬಾತಿಡಾದಲ್ಲಿ ಪ್ರಚಾರ ನಿರತ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Thursday, former cricketer Sachin Tendulkar inaugurates Sports rehabilitation center in Kozhikode. And Bollywood super star Akshay Kumar participates in promotion event of his forthcoming film Jolly LLB 2 in Ahmedabad
Please Wait while comments are loading...