Ration Card: ಪಡಿತರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗೆ ಪ್ಲಾನ್
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಅಲ್ಲದೆ, ಈ ರೇಷನ್ ಕಾರ್ಡ್ ವಿಚಾರದಲ್ಲಿ ಆಗಾಗ ಹೊಸ ಹೊಸ ನಿಯಮಗಳು, ಬದಲಾವಣೆಗಳು ಜಾರಿಯಾಗುತ್ತಲೇ ಇರುತ್ತವೆ. ಹಾಗೆಯೇ ಇದೀಗ ದೇಶಾದ್ಯಂತ ಈ ಸಂಬಂಧ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ತಿಳಿದುಬಂದಿದೆ. ಹಾಗಾದರೆ, ಏನೆಲ್ಲಾ ಚೇಂಜಸ್ ಅಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಕರ್ನಾಟಕದಲ್ಲಿ ಅಕ್ರಮವಾಗಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ಸರ್ಕಾರವು ರದ್ದು ಪಡಿಸುತ್ತಿದ್ದು, ಅಂತಹವರನ್ನು ಎಪಿಎಲ್‌ಗೆ ವರ್ಗಾಹಿಸುವ ಕೆಲಸವನ್ನು ಕೂಡ ಮಾಡಿದೆ. ಮತ್ತೊಂದೆಡೆ ಸರ್ಕಾರ ಅರ್ಹರ ಬಳಿಯಿದ್ದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುತ್ತಿದೆ ಎನ್ನುವ ಆಕ್ರೋಶಗಳು ಭುಗಿಲೆದ್ದಿದ್ದವು. ಬಳಿಕ ಎಚ್ಚತ್ತ ಸರ್ಕಾರವು ಬಡವರಿಗೆ ಮತ್ತೆ ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಿ ಪಡಿತರವನ್ನು ತುಂಬಿಕೊಡಲಾಗುತ್ತದೆ ಎಂದು ಭರವಸೆ ನೀಡಿ ಹಾಗೆಯೇ ನಡೆದುಕೊಂಡಿತ್ತು.

ಶೀಘ್ರದಲ್ಲೇ ದೇಶಾದ್ಯಂತ ರೇಷನ್ ವ್ಯವಸ್ಥೆಗೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಯಾಗಲಿವೆ ಎಂದು ತಿಳಿದುಬಂದಿದೆ. ಮಹಾಮಾರಿ ಕೋವಿಡ್ ಸಮಯದಲ್ಲಿ ಬಡಜನರಿಗೆ ಸಹಾಕಾರ ಆಗಲೆಂದು ಕೇಂದ್ರ ಸರ್ಕಾರ ರೇಷನ್ ವಿತರಣೆಯನ್ನು ವಿಸ್ತರಿಸಿದ್ದು, ಅಂದಿನಿಂದ ಅದರ ಮೇಲೆ ಅನೇಕ ಬಡಜನರು ಅವಲಂಬಿತರಾಗಿದ್ದಾರೆ.
ಕೋವಿಡ್ ಮುಂಚೆಯೂ ಸಹ ರೇಷನ್ ವ್ಯವಸ್ಥೆ ಇದ್ದರೂ, ಅನೇಕ ಮಧ್ಯಮ ವರ್ಗದ ಜನರು ರೇಷನ್ ಪಡೆಯುತ್ತಿರಲಿಲ್ಲ. ಅದರ ಗುಣಮಟ್ಟವೂ ಸಾಧಾರಣವಾಗಿತ್ತು. ಇನ್ನು ಈ ಕೋವಿಡ್ ಬಂದಾಗಿನಿಂದಲೂ ಬಹುತೇಜ ಕುಟುಂಬಗಳು ಪಡಿತರದ ಮೇಲೆ ಅವಲಂಬಿತರಾಗಿ ಜೀವನ ಸಾಗಿಸುತ್ತಿವೆ. ಇದೀಗ ಈ ಪಡಿತರ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳಾಗಲಿವೆ ಎಂದು ತಿಳಿದುಬಂದಿದೆ.
ಪಡಿತರದ ಬದಲಿಗೆ ನಗದು ನೀಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರೇಷನ್ ಮೇಲೆ ಅವಲಂಬಿತರಾಗಿರುವ ಕುಟುಂಬಗಳಿಗೆ ನಗದು ನೀಡಿದರೆ ಹೇಗೆ ಉಪಯುಕ್ತ ಎಂಬುದನ್ನು ನೀತಿ ಆಯೋಗ್ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮೋದಿ ಸರ್ಕಾರದಲ್ಲಿ ನಗದು ವ್ಯವಹಾರಗಳು ಹೆಚ್ಚಾಗಿವೆ. ಈ ಹಿನ್ನೆಲೆ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಪಡಿತರ ಚೀಟಿಯ ಹೊಸ ನಿಯಮಗಳ ವಿವರ: ಈ ಹೊಸ ನಿಯಮಗಳ ಪ್ರಕಾರ, ಪಡಿತರ ಚೀಟಿದಾರರು ತಮ್ಮ ಕಾರ್ಡ್‌ಗಳನ್ನು ಅಪ್ಡೇಟ್ ಮತ್ತು ಕೆಲವು ಹೊಸ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಒಂದು ವೇಳೆ ಈ ನಿಯಮಗಳನ್ನು ಪಾಲಿಸದವರ ಪಡಿತರ ಚೀಟಿಯನ್ನು ರದ್ದುಗೊಳಿಸಬಹುದು. ಆದ್ದರಿಂದ, ಈ ಹೊಸ ನಿಯಮಗಳು ಯಾವುವು ಮತ್ತು ಅವು ನಿಮಗೆ ಹೇಗೆ ಅನ್ವಯ ಆಗುತ್ತವೆ ಎನ್ನುವುದನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
* ಕಡ್ಡಾಯ ಇ-ಕೆವೈಸಿ
1. ಎಲ್ಲಾ ಪಡಿತರ ಚೀಟಿದಾರರು ತಮ್ಮ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
2. ಇ-ಕೆವೈಸಿಗೆ ಕೊನೆಯ ದಿನಾಂಕ 31 ಡಿಸೆಂಬರ್ 2024 ಆಗಿದೆ.
3. ಇ-ಕೆವೈಸಿ ಮಾಡದವರ ಪಡಿತರ ಚೀಟಿಯನ್ನು ರದ್ದುಗೊಳಿಸಬಹುದು. *
ಆದಾಯ ಮಿತಿ ಬದಲಾವಣೆಗಳ ವಿವರ
1. ನಗರ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂಪಾಯಿ
2. ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿ 2 ಲಕ್ಷ ರೂಪಾಯಿ
ಪಡಿತರ ಚೀಟಿಯ ಪ್ರಯೋಜನಗಳೇನು
* ಅಗ್ಗದ ಧಾನ್ಯಗಳು: ಗೋಧಿ, ಅಕ್ಕಿ, ಸಕ್ಕರೆ ಇತ್ಯಾದಿಗಳು ಅಗ್ಗದ ಬೆಲೆಯಲ್ಲಿ ಲಭ್ಯವಿದೆ.
* ಸರ್ಕಾರದ ಇತರ ಯೋಜನೆಗಳ ಪ್ರಯೋಜನಗಳು: ಪಡಿತರ ಚೀಟಿಯು ಸರ್ಕಾರದ ಇತರ ಹಲವು ಯೋಜನೆಗಳಿಗೆ ಪ್ರಮುಖ ದಾಖಲೆಯಾಗಿದೆ.
* ಗುರುತಿನ ಪುರಾವೆ: ಇದು ಮಾನ್ಯ ಗುರುತಿನ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ.
* ಗ್ಯಾಸ್ ಸಬ್ಸಿಡಿ: ಎಲ್ಪಿಜಿ ಸಿಲಿಂಡರ್ ಮೇಲೆ ಸಬ್ಸಿಡಿ ಪಡೆಯಲು ಪಡಿತರ ಚೀಟಿ ಅಗತ್ಯ.
* ಆರೋಗ್ಯ ವಿಮೆ: ಸರ್ಕಾರದ ಅನೇಕ ಆರೋಗ್ಯ ವಿಮಾ ಯೋಜನೆಗಳಿಗೆ ಪಡಿತರ ಚೀಟಿಯ ಅಗತ್ಯವಿದೆ.
* ಪಡಿತರ ಪದಾರ್ಥಗಳಲ್ಲಿ ಬದಲಾವಣೆ: ಪಡಿತರ ಚೀಟಿಯಲ್ಲಿ ಲಭ್ಯವಿರುವ ಗೋಧಿ ಮತ್ತು ಅಕ್ಕಿಯ ಪ್ರಮಾಣವನ್ನು ಜನವರಿ 1, 2025ಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications