Ration Card: ಉಚಿತ ಪಡಿತರ ರದ್ದು: ಯಾವಾಗಿನಿಂದ ಹಾಗೂ ಯಾರಿಗೆ?
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಸಹ ಒಂದಾಗಿದೆ. ಇದೀಗ ಈ ರೇಷನ್ ಕಾರ್ಡ್‌ಗೆ ಸಂಬಂಧಿಸಿದಂತೆ ಹೊಸ ನಿಯಗಳನ್ನು ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾದ್ರೆ ಯಾವಾಗಿನಿಂದ ಹಾಗೂ ಏನೆಲ್ಲಾ ಬದಲಾಣೆಗಳಾಗಲಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ಕರ್ನಾಕದಲ್ಲಿ ರಾಜ್ಯ ಸರ್ಕಾರವು ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಕಾರ್ಯಕ್ಕೆ ಮುಂದಾಗಿತ್ತು. ಅಲ್ಲದೆ, ಅನರ್ಹರನ್ನು ಎಪಿಎಲ್‌ಗೆ ಸೇರ್ಪಡೆ ಮಾಡುವ ಕೆಲಸವನ್ನು ಮಾಡಿತ್ತು. ಆದರೆ ಇದೀಗ ಕೇಂದ್ರ ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಪಡಿತರ ಚೀಟಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲು ಮುಂದಾಗಿದೆ.

ಕೇಂದ್ರ ಸರ್ಕಾರದಿಂದ ಬಡ ಜನರಿಗೆ ಸಹಾಯ ಆಗಲೆಂದು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಉಚಿತ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ, ಅರ್ಹರಲ್ಲದವರು ಉಚಿತ ಪಡಿತರ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಆದ್ದರಿಂದ ಹೊಸ ನಿಯಮ ಜಾರಿಗೆ ತಂದು ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ವರ್ಷ ಭಾರತ ಸರ್ಕಾರವು ಸರ್ಕಾರ ಪಡಿತರ ಚೀಟಿಗೆ ಸಂಬಂಧಪಟ್ಟ ನಿಯಮಗಳಲ್ಲಿ ಹಲವು ಬದಲಾವಣೆಯನ್ನು ಮಾಡಿದೆ. ಇದರ ಉದ್ದೇಶವೆಂದರೆ ಉಚಿತ ಪಡಿತರ ಪಡೆಯಲು ಅರ್ಹರಾಗಿರುವವರಿಗೆ ಮಾತ್ರ ನೀಡಬೇಕು. ಕಳೆದ ಕೆಲವು ವರ್ಷಗಳಲ್ಲಿ, ಆರ್ಥಿಕ ಸ್ಥಿತಿ ಸದೃಢವಾಗಿರುವ ಅನೇಕ ಜನರು ಸಹ ಈ ಯೋಜನೆಯ ಲಾಭ ಪಡೆಯುತ್ತಿರುವುದು ಕಂಡುಬಂದಿದೆ. ಆದ್ದರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಮೇ 21, 2025ರಿಂದ ಇದು ಇಡೀ ದೇಶದಲ್ಲಿ ಜಾರಿಗೆ ಬರಲಿದೆ.
ಈ ನಿಯಮ ಜಾರಿಗೆ ಬಂದರೆ, ತುಂಬಾ ಜನರಿಗೆ ಉಚಿತ ಪಡಿತರ ಕೈತಪ್ಪಿದಂತಾಗಲಿದ್ದು, ಅರ್ಹರಿಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗಿಂತ ಹೆಚ್ಚಿನ ಆದಾಯ ಅಥವಾ ಆಸ್ತಿಯಾಗಲಿ ಹೊಂದಿರುವವರಿಗೆ ಉಚಿತ ಪಡಿತರ ಕಟ್ ಆಗಲಿದೆ. ಈ ನಿಯಮಗಳಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಲಿದ್ದು, ಅರ್ಹರಿಗೆ ಮಾತ್ರ ಉಚಿತ ಪಡಿತರ ತಲುಪಲಿದೆ.
ಯಾರಿಗೆ ಉಚಿತ ಪಡಿತರ ಸಿಗುವುದಿಲ್ಲ?
* ಮಾಸಿಕ ಆದಾಯ 10,000 ರೂಪಾಯಿಗಿಂತ ಹೆಚ್ಚಿರುವವರಿಗೆ ಇನ್ಮುಂದೆ ಉಚಿತ ಪಡಿತರ ರದ್ದಾಗಲಿದೆ
* 5 ಹೆಕ್ಟೇರ್‌ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವವರ ಹೆಸರನ್ನು ಫಲಾನುಭವಿ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ
* ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತ ದೊಡ್ಡ ಮನೆಗಳನ್ನು ಹೊಂದಿರುವವರಿಗೂ ಉಚಿತ ಪಡಿತರ ರದ್ದು ಮಾಡಲಾಗುತ್ತದೆ.
* ಸರ್ಕಾರಿ ನೌಕರರನ್ನು ಹೊಂದಿರುವ ಕುಟುಂಬಗಳು ಇನ್ಮುಂದೆ ಉಚಿತ ಪಡಿತರಕ್ಕೆ ಅರ್ಹರಾಗಿರುವುದಿಲ್ಲ.
* ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಹೆಚ್ಚಿರುವವರು ಈ ಸೌಲಭ್ಯದಿಂದ ಹೊರಗಿಡಲಾಗುತ್ತದೆ.
ಹೊಸ ನಿಯಮಗಳ ಉದ್ದೇಶ ಮತ್ತು ಪ್ರಯೋಜನಗಳು
ಪ್ರಮುಖ ಸೂಚನೆಗಳು
* ಸಬ್ಸಿಡಿಯ ಸರಿಯಾದ ವಿತರಣೆ ಖಚಿತಪಡಿಸಿಕೊಳ್ಳಲಾಗುತ್ತದೆ
* ವಂಚನೆ ಮತ್ತು ಸುಳ್ಳು ಹಕ್ಕು ಸ್ಥಾಪನೆಗಳನ್ನು ನಿಷೇಧಿಸಬೇಕು
* ತುಂಬಾ ಸಂಪನ್ಮೂಲಗಳನ್ನು ಹೊಂದಿರುವವರು ಸ್ವಾವಲಂಬಿಗಳಾಗಬೇಕು
* ಸರ್ಕಾರಿ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು
* ಯೋಜನೆಯ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಾಗಬೇಕು
* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಫಲಾನುಭವಿಗಳನ್ನು ಸರಿಯಾಗಿ ಗುರುತಿಸಬೇಕು
ಯಾರ ಪಡಿತರ ಚೀಟಿ ರದ್ದಾಗುತ್ತದೆ?
* ಮಾಸಿಕ 10,000 ರೂಪಾಯಿಗಿಂತ ಆದಾಯ ಹೊಂದಿರುವವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ
* 5 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ
* ನಗರದಲ್ಲಿ 1,000 ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ
* ಸರ್ಕಾರಿ ನೌಕರರಿರುವ ಕುಟುಂಬಗಳ ಪಡಿತರ ಚೀಟಿ ರದ್ದುಪಡಿಸಲಾಗುತ್ತದೆ
* ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಹೆಚ್ಚಿರುವವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ
* 2 ಹೆಕ್ಟೇರ್‌ಗಿಂತ ಹೆಚ್ಚು ನೀರಾವರಿ ಭೂಮಿ ಹೊಂದಿರುವವರ ಪಡಿತರ ಚೀಟಿ ರದ್ದು ಮಾಡಲಾಗುತ್ತದೆ












Click it and Unblock the Notifications