Get Updates
Get notified of breaking news, exclusive insights, and must-see stories!

Ratan Tata Cinema: ಟಾಟಾ ರತನ್‌ ಜೀವನ ಕುರಿತು ಬರುತ್ತಿದೆ ಅದ್ಭುತ ಸಿನಿಮಾ-ಯಾವಾಗ?

Ratan Tata Cinema: ಭಾರತದ ಖ್ಯಾತ ಉದ್ಯಮಿ ರತನ್‌ ಟಾಟಾ (86) ಅವರು ನಿಧನರಾಗಿದ್ದು, ಅವರಿಗಾಗಿ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಅಲ್ಲದೆ, ಅವರನ್ನು ಕಳೆದುಕೊಂಡು ದೇಶದ ಉದ್ಯಮ ಕ್ಷೇತ್ರ ಮಂಕಾಗಿದೆ. ಇನ್ನೂ ಟಾಟಾ ಅವರ ಜೀವನ ಚರಿತ್ರೆ ಕುರಿತು ಚಲನಚಿತ್ರ ಬರಲಿದೆ ಎನ್ನುವ ಮುನ್ಸೂಚನೆ ಸಿಕ್ಕಿದೆ.

ರತನ್‌ ಟಾಟಾ ಅವರು ಜೀವನದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ಸ್ವಲ್ಪನೂ ಅಹಂ ಇರಲಿಲ್ಲ. ಅಲ್ಲದೆ, ಎಲ್ಲರ ಜೊತೆ ಬೆರೆತು ಸರಳವಾಗಿ ಜೀವನ ನಡೆಸುವಂತಹ ಗುಣ ಅವರದ್ದಾಗಿತ್ತು. ಅವರು ಶ್ರೀಮಂತರ ಪಟ್ಟಿಯಲ್ಲಿ ಇಲ್ಲದಿರಬಹುದು. ಆದರೆ, ಅವರ ಶೇರಿನಲ್ಲಿ ಶೇಕಡ 66ನಷ್ಟು ಬಡವರಿಗಾಗಿಯೇ ಮೀಸಲಿಡುತ್ತಿದ್ದು, ಇದರಿಂದ ರತನ್‌ ಟಾಟಾ ಅವರು ಮಾನವೀಯತೆ ದೃಷ್ಟಿಯಿಂದ ನಿಜವಾದ ಶ್ರೀಮಂತರು ಎಂದರೆ ತಪ್ಪಾಗಲಾರದು.

Ratan Tata s Life Biography Cinema release Soon

ದೇಶ-ವಿದೇಶಗಳಲ್ಲೂ ನೂರಾರು ಕಂಪನಿಗಳನ್ನು ಹೊಂದಿದ್ದರೂ ಕೂಡ ಅವರು ಸರಳ ಜೀವನವನ್ನು ಮಾತ್ರ ಮರೆತಿರಲಿಲ್ಲ. ಇನ್ನೂ ಅವರ ನಿಧನಕ್ಕೆ ದೇಶ-ವಿದೇಶಗಳ ಗಣ್ಯರಿಂದ ಹಿಡಿದು ಕೆಳವರ್ಗದ ಜನರು ಕೂಡ ಸಂತಾಪ ಸೂಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ. ಅಷ್ಟರ ಮಟ್ಟಿಗೆ ರತನ್‌ ಟಾಟಾ ಅವರು ಸರಳ ಜೀವನ ಸಾಗಿಸುವವರಾಗಿದ್ದರು.

ಮತ್ತೊಂದೆಡೆ ಎಸ್‌ಎಲ್‌ ಗ್ರೂಪ್‌ನ ಅಧ್ಯಕ್ಷ ಮತ್ತು ಮಾಜಿ ರಾಜ್ಯಸಭಾ ಸಂಸದ ಆರ್.ಸುಭಾಷ್ ಚಂದ್ರ ಅವರು ದಿವಂಗತ ರತನ್ ಟಾಟಾ ಅವರಿಗೆ ಸಂತಾಪ ಸೂಚಿಸಿದರು. ಇನ್ನು ಅವರ ಜೀವನ ಕುರಿತು ಚಲನಚಿತ್ರವನ್ನು ನಿರ್ಮಿಸಲು ಜೀ ಎಂಟರ್‌ಟೈನ್ಮೆಂಟ್ ವಿಯಾನ್ನೊಂದಿಗೆ ಸಹಕರಿಸಲಿದೆ ಎಂದು ಡಾ.ಚಂದ್ರ ಅವರು ಘೋಷಣೆ ಮಾಡಿದರು.

ರತನ್ ಟಾಟಾ ಅವರ ಜೀವನದ ಬಗ್ಗೆ ಜೀ ಗ್ರೂಪ್ ಪೂರ್ಣ ಪ್ರಮಾಣದ ಚಲನಚಿತ್ರವನ್ನು ಮಾಡಲು ನಿರ್ಧರಿಸಿದೆ ಎಂದು ಅವರು ಘೋಷಣೆ ಮಾಡಿದರು. ಇದು ಜೀ 5 ಮತ್ತು ಜೀನ ಇತರ ಎಲ್ಲಾ ಚಾನೆಲ್‌ಗಳಲ್ಲಿ ವಿವಿಧ ಭಾಷೆಗಳೊಂದಿಗೆ ಪ್ರಸಾರ ಆಗಲಿದೆ. ರತನ್ ಟಾಟಾ ಅವರಂತಹ ರತ್ನದ ಜೀವನವನ್ನು ಜಗತ್ತಿಗೆ ತೋರಿಸಲು ನಾವು ಬಯಸಿದ್ದೇವೆ ಎಂದು ಹೇಳಿದರು. ಸಿನಿಮಾದ ಹೆಸರು ಹಾಗೂ ಯಾವಾಗ ಬಿಡುಗಡೆಯಾಗಲಿದೆ ಎಂದು ತಿಳಿದುಬರಬೇಕಿದೆ ಅಷ್ಟೇ.

ಇನ್ನು ಸಾಮಾಜಿಕ ಜಾಲತಾಣದ ಭಾಗವಾದ ಟ್ವಿಟರ್‌ ಖಾತೆಯಲ್ಲಿ ಡಾ.ಚಂದ್ರ ಅವರು, ರತನ್ ಟಾಟಾ ಅವರ ಸಾವಿನ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡರು. "ರತನ್‌ ಟಾಟಾ ಅವರ ನಿಧನದ ಬಗ್ಗೆ ತಿಳಿದು ನನಗೆ ತೀವ್ರ ದುಃಖವಾಗಿದೆ" ಎಂದು ಬರೆದುಕೊಂಡಿದ್ದಾರೆ.

ರತನ್‌ ಟಾಟಾ ಅವರು ಮಾಧ್ಯಮದ ಭಾಗವಾಗಿದ್ದರು ಮತ್ತು ಕೆಲವು ಸಲಹೆ ಬೇಕಾದಾಗ ಅವರ ಬಳಿಗೆ ಹೋಗುತ್ತಿದ್ದವು. ಆಗ ರತನ್ ಟಾಟಾ ಅವರು ನಮ್ಮ ಬಳಿ ತುಂಬಾ ಸರಳತೆಯಿಂದ ಚೆನ್ನಾಗಿ ಮಾತನಾಡುತ್ತಿದ್ದರು ಎಂದು ನೆನೆದರು.

ಅಲ್ಲದೆ, ಪ್ರಭಾವಿ ಕೈಗಾರಿಕೋದ್ಯಮಿ ರತನ್‌ ಟಾಟಾ ಅವರೊಂದಿಗಿನ ತಮ್ಮ ಸಂವಾದವನ್ನು ತೆರೆದಿಟ್ಟರು. ಟಾಟಾ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಭಾರತೀಯ ಉದ್ಯಮಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಪರಂಪರೆಯನ್ನು ಯಾವಾಗಲೂ ಗೌರವಿಸುತ್ತೇನೆ ಎಂದು ಹೇಳಿದರು.

ರತನ್ ಟಾಟಾ 1991ರಿಂದ 2012ರ ವರೆಗೆ ನಿವೃತ್ತರಾಗುವವರೆಗೆ ಟಾಟಾ ಗ್ರೂಪ್‌ನ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅಲ್ಲದದೆ, ಅವರಿಗೆ ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣವನ್ನು ನೀಡಲಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+