ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Rashtriya Bal Puraskar 2022: ಭಾರತದಲ್ಲಿ 61 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ ಗೌರವ

|
Google Oneindia Kannada News

ನವದೆಹಲಿ, ಜನವರಿ 25: ಭಾರತದ 2021 ಮತ್ತು 2022 ನೇ ಸಾಲಿನ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ವರ್ಚುವಲ್ ಸಂವಾದ ನಡೆಸಿದರು. ಈ ವೇಳೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಜುಬಿನ್ ಇರಾನಿ ಕೂಡ ಉಪಸ್ಥಿತರಿದ್ದರು.

ರಾಷ್ಟ್ರೀಯ ಬ್ಲಾಕ್‌ಚೈನ್ ಪ್ರಾಜೆಕ್ಟ್ ಅಡಿಯಲ್ಲಿ ಐಐಟಿ ಕಾನ್ಪುರ್ ಅಭಿವೃದ್ಧಿಪಡಿಸಿದ ಬ್ಲಾಕ್ ಚೈನ್ ಚಾಲಿತ ತಂತ್ರಜ್ಞಾನವನ್ನು ಬಳಸಿಕೊಂಡು 2021 ಮತ್ತು 2022 ಸಾಲಿನ 61 ರಾಷ್ಟ್ರೀಯ ಬಾಲ ಪುರಸ್ಕಾರ ವಿಜೇತರಿಗೆ ಪ್ರಧಾನಿ ಮೋದಿ ಡಿಜಿಟಲ್ ಪ್ರಮಾಣಪತ್ರ ನೀಡಿದರು. ಡಿಜಿಟಲ್ ಪ್ರಮಾಣಪತ್ರವನ್ನು ಸ್ವೀಕರಿಸುವವರ ಮೊಬೈಲ್ ನಲ್ಲಿರುವ ಡಿಜಿಟಲ್ ವ್ಯಾಲೆಟ್‌ಗಳಲ್ಲಿ ಸಂಗ್ರಹಿಸಲಾಯಿತು.

ಅಮೆರಿಕ ಕ್ರಿಕೆಟ್ ಅಂಗಳದಲ್ಲಿ ಕಾಫಿನಾಡು ಯುವಕನ ಕಮಾಲ್ಅಮೆರಿಕ ಕ್ರಿಕೆಟ್ ಅಂಗಳದಲ್ಲಿ ಕಾಫಿನಾಡು ಯುವಕನ ಕಮಾಲ್

ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪುರಸ್ಕೃತರಿಗೆ ಪ್ರಮಾಣಪತ್ರ ನೀಡಲು ಇದೇ ಮೊದಲ ಬಾರಿಗೆ ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಜಾಗತಿಕವಾಗಿ ಡಿಜಿಟಲ್ ಪ್ರಮಾಣಪತ್ರವನ್ನು ಪರಿಶೀಲಿಸಬಹುದಾದ, ಮರೆಯಲಾಗದ, ಆಯ್ದ ಹಾಗೂ ಬಹಿರಂಗಪಡಿಸಬಹುದಾದ ಸೂಕ್ಷ್ಮ ವಿಷಯವಾಗಿರುತ್ತದೆ.

Rashtriya Bal Puraskar 2022 Winners: Full list of children honoured by PM Modi in kannada

ಭಾರತದ 29 ಮಕ್ಕಳಿಗೆ ಬಾಲ ಪುರಸ್ಕಾರ:

ಬಾರತದಲ್ಲಿ 2022ನೇ ಸಾಲಿನಲ್ಲಿ ಒಟ್ಟು 29 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಭಾರತದಾದ್ಯಂತ ಎಲ್ಲಾ ಪ್ರದೇಶಗಳಲ್ಲಿ ಸಾಮಾಜಿಕ ಸೇವೆ, ಕ್ರೀಡೆ, ನಾವೀನ್ಯತೆ, ಶೌರ್ಯ, ಕಲೆ ಮತ್ತು ಸಂಸ್ಕೃತಿ ಮತ್ತು ಪಾಂಡಿತ್ಯದಲ್ಲಿ ತೋರಿದ ಅತ್ಯುತ್ತಮ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 29 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ನೀಡಲಾಗಿದೆ. ಈ ಪೈಕಿ 15 ಗಂಡು ಮಕ್ಕಳು, 14 ಹೆಣ್ಣು ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ. ದೇಶದ ಕೊವಿಡ್-19 ಪರಿಸ್ಥಿತಿಯಿಂದಾಗಿ ಪ್ರಶಸ್ತಿಗಳ ಸನ್ಮಾನ ಸಮಾರಂಭವು ವರ್ಚುವಲ್ ಆಗಿ ನಡೆಯಿತು. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಮತ್ತು ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸಮಾರಂಭವನ್ನು ನಡೆಸಲಾಯಿತು. ಈ ವೇಳೆ ಪ್ರಶಸ್ತಿ ಪುರಸ್ಕೃತರು ತಮ್ಮ ಜಿಲ್ಲಾ ಪ್ರಧಾನ ಕಛೇರಿಯಿಂದ ತಮ್ಮ ಪೋಷಕರು ಮತ್ತು ಸಂಬಂಧಪಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆಗೆ ಹಾಜರಾಗಿದ್ದರು.

ರಾಷ್ಟ್ರೀಯ ಬಾಲ ಪುರಸ್ಕಾರದ ಗೌರವ ಧನ:

ರಾಷ್ಟ್ರೀಯ ಬಾಲ ಪುರಸ್ಕಾರವು 1 ಲಕ್ಷ ರೂಪಾಯಿ ಮೌಲ್ಯದ ನಗದು ಬಹುಮಾನವನ್ನು ಹೊಂದಿರುತ್ತದೆ. ಇದನ್ನು ಪ್ರಧಾನಮಂತ್ರಿ ಮೋದಿ ಕಾರ್ಯಕ್ರಮದ ಸಮಯದಲ್ಲಿ ಆಯಾ ವಿಜೇತರ ಖಾತೆಗಳಿಗೆ ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗುತ್ತದೆ.

ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದವರ ಪಟ್ಟಿ:

ಹೆಸರು ರಾಜ್ಯ ಕ್ಷೇತ್ರ
ಗೌರಿ ಮಹೇಶ್ವರಿ ರಾಜಸ್ಥಾನ ಕಲೆ ಮತ್ತು ಸಂಸ್ಕೃತಿ
ರೆಮೋನಾ ಎವೆಟ್ಟೆ ಪಿರೇರಾ ಕರ್ನಾಟಕ ಕಲೆ ಮತ್ತು ಸಂಸ್ಕೃತಿ
ದೇವಿಪ್ರಸಾದ್ ಕೇರಳ ಕಲೆ ಮತ್ತು ಸಂಸ್ಕೃತಿ
ಸಯ್ಯದ್ ಫತಿ ಅಹ್ಮದ್ ಕರ್ನಾಟಕ ಕಲೆ ಮತ್ತು ಸಂಸ್ಕೃತಿ
ದೌಲಾಸ್ ಲಂಬಾಮಯೂಮ್ ಮಣಿಪುರ ಕಲೆ ಮತ್ತು ಸಂಸ್ಕೃತಿ
ದೃತಿಷ್ಮಾನ್ ಚಕ್ರಮೂರ್ತಿ ಅಸ್ಸಾಂ ಕಲೆ ಮತ್ತು ಸಂಸ್ಕೃತಿ
ಗುರುಗು ಹಿಮಪ್ರಿಯಾ ಆಂದ್ರ ಪ್ರದೇಶ ಶೌರ್ಯ
ಶಿವಾಂಗಿ ಕಾಳೆ ಮಹಾರಾಷ್ಟ್ರ ಶೌರ್ಯ
ಧೀರಜ್ ಕುಮಾರ್ ಬಿಹಾರ ಶೌರ್ಯ
ಶಿವಂ ರಾವತ್ ಉತ್ತರಾಖಂಡ್ ಆವಿಷ್ಕಾರ
ಶಿವಂ ರಾವತ್ ಉತ್ತರಾಖಂಡ್ ಆವಿಷ್ಕಾರ
ವಿಶಾಲಿನಿ ಎನ್ ಸಿ ತಮಿಳುನಾಡು ಆವಿಷ್ಕಾರ
ಜುವು ಅಭಿಜಿತ್ ಕೆಸ್ಕರ್ ಮಹಾರಾಷ್ಟ್ರ ಆವಿಷ್ಕಾರ
ಪುಹಬಿ ಚಕ್ರಮೂರ್ತಿ ತ್ರಿಪುರಾ ಆವಿಷ್ಕಾರ
ಆವಿಷ್ಕಾರ ತಮಿಳುನಾಡು ಆವಿಷ್ಕಾರ
ಬನಿಶಾ ದಾಶ್ ಒಡಿಶಾ ಆವಿಷ್ಕಾರ
ತನಿಶ್ ಸೇಠ್ ಹರಿಯಾಣ ಆವಿಷ್ಕಾರ
ಅವಿ ಶರ್ಮಾ ಮಧ್ಯಪ್ರದೇಶ ತರ್ಕಶಾಸ್ತ್ರ
ಮೀಧಾಂಶ್ ಕುಮಾರ್ ಗುಪ್ತಾ ಪಂಜಾಬ್ ಸಾಮಾಜಿಕ ಸೇವೆ
ಪಾಲ್ ಸಾಕ್ಷಿ ಬಿಹಾರ ಸಾಮಾಜಿಕ ಸೇವೆ
ಆಕರ್ಶ ಕೌಶಾಲ್ ಹರಿಯಾಣ ಸಾಮಾಜಿಕ ಸೇವೆ
ಅರುಷಿ ಕೊತ್ವಾಲ್ ಜಮ್ಮು ಕಾಶ್ಮೀರ ಕ್ರೀಡೆ
ತೇಲುಕುಂಟ ವಿರಾಟ್ ಚಂದ್ರ ತೆಲಂಗಾಣ ಕ್ರೀಡೆ
ಚಂದರಿ ಸಿಂಗ್ ಚೌಧರಿ ಉತ್ತರ ಪ್ರದೇಶ ಕ್ರೀಡೆ
ಉತ್ತರ ಪ್ರದೇಶ ಕ್ರೀಡೆ
ಸ್ವಯಂ ಪಾಟೀಲ್ ಮಹಾರಾಷ್ಟ್ರ ಕ್ರೀಡೆ
ತರುಷಿ ಗೌರ್ ಚಂಡೀಘರ್ ಕ್ರೀಡೆ
ಅನ್ವಿ ವಿಜಯ್ ಜಂಜಾರುಕಿಯಾ ಗುಜರಾತ್ ಕ್ರೀಡೆ

Recommended Video

BCCI ಕಾಂಟ್ರಾಕ್ಟ್ ನಲ್ಲಿ ರಾಹುಲ್ ಪಂತ್ ಗೆ ಬಂಪರ್ ಆದ್ರೆ ಪೂಜಾರಾ ರಹಾನೆಗೆ ಹಿಂಬಡ್ತಿ | Oneindia Kannada

English summary
Rashtriya Bal Puraskar 2022 Winners: Full list of children honoured by PM Modi in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X