ಠಾಣಾಧಿಕಾರಿ ಆಸನದಲ್ಲಿ ಸ್ವಘೋಷಿತ ದೇವಮಹಿಳೆ ರಾಧೆ ಮಾ
ನವದೆಹಲಿ, ಅಕ್ಟೋಬರ್ 5: ವಿವಾದಿತ ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ಅಲಿಯಾಸ್ ಸುಖ್ವಿಂದರ್ ಖೌರ್ ಠಾಣಾಧಿಕಾರಿ ಆಸನದಲ್ಲಿ ಕುಳಿತ ಚಿತ್ರ ಬಹಿರಂಗವಾಗಿದ್ದು ವಿವಾದ ಹುಟ್ಟು ಹಾಕಿದೆ.
ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಆಸನದಲ್ಲಿ ರಾಧೆ ಮಾ ಕುಳಿತಿರುವ ಚಿತ್ರ ಈಗ ಎಲ್ಲೆಡೆ ಹರಿದಾಡುತ್ತಿದೆ.

ರಾಧೆ ಮಾ ಪಕ್ಕದಲ್ಲೇ ಠಾಣಾಧಿಕಾರಿ ಸಂಜಯ್ ಶರ್ಮಾ ಲಜ್ಜೆ ಬಿಟ್ಟು ಕೆಂಪು ಶಲ್ಯ ಹೊದ್ದು, ಕೈ ಜೋಡಿಸಿಕೊಂಡು ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿವೇಕ್ ವಿಹಾರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಸಂಜಯ್ ಶರ್ಮಾರನ್ನು ವರ್ಗಾವಣೆ ಮಾಡಲಾಗಿದೆ.
#WATCH Policemen seen singing with self styled god woman Radhe Ma in Delhi's GTB Enclave pic.twitter.com/XOIAr2vKHf
— ANI (@ANI) October 5, 2017












Click it and Unblock the Notifications