ಒಕ್ಕಲೆಬ್ಬಿಸುವಾಗ ಒಡಲ ಕುಡಿ ಅವುಚಿಕೊಂಡ ಹೆಣ್ಣುಮಗಳ ದುಗುಡ...

Posted By:
Subscribe to Oneindia Kannada

ಇಸ್ರೇಲ್ ಪೊಲೀಸರು ವೆಸ್ಟ್ ಬ್ಯಾಂಕ್ ನಲ್ಲಿ ಜನರನ್ನು ತೆರವು ಮಾಡುತ್ತಿರುವ ಫೋಟೋವೊಂದಿದೆ. ಕೋರ್ಟ್-ಕಾನೂನು, ಸೈನ್ಯ ಎಲ್ಲದರ ಆಚೆಗೆ ಮಾನವೀಯತೆಯ ಮುಖ ತುಂಬ ಎತ್ತರದಲ್ಲಿ ನಿಲ್ಲುತ್ತದೆ. ಇಲ್ಲಿ ಯಾರದು ತಪ್ಪು-ಯಾರದು ಸರಿ ಎಂಬ ಬಗ್ಗೆ ವಿಮರ್ಶೆ ಮಾಡುವುದು ಉದ್ದೇಶವಲ್ಲ. ಆದರೆ ಆ ಮಹಿಳೆಯು ಕೈಲಿ ಮಗುವನ್ನು ಅವುಚಿಕೊಂಡಿರುವ ರೀತಿ ಹೃದಯ ಕಲಕುವಂತಿದೆ.

ಅಮೆರಿಕದಲ್ಲಿ ಏಲು ದೇಶಗಳ ಪ್ರಜೆಗಳಿಗೆ ಕೆಲ ತಿಂಗಳ ಮಟ್ಟಿಗಾದರೂ ಪ್ರವೇಶ ನಿರ್ಬಂಧಿಸಲಾಗಿದೆ. ಮುಂದೇನೋ ಹೇಗೋ ಎಂಬ ಆತಂಕ ಅಲ್ಲಿನ ವಲಸಿಗರನ್ನು ಕಾಡುತ್ತಿದೆ. ಮುಂದೆ ಇನ್ನೆಂಥ ಕಠಿಣ ನಿಯಮಗಳು ತರಬಹುದು ಎಂಬ ಬಗ್ಗೆಯೂ ದುಗುಡು ಇರಬಹುದು. ಆ ಕಾರಣಕ್ಕೆ ಪ್ರತಿಭಟನೆಗಳು ನಡೆಯುತ್ತಿವೆ.[ಪಾಕಿಸ್ತಾನ ಸೇರಿದಂತೆ 5 ದೇಶಗಳ ಪ್ರಜೆಗಳಿಗೆ ಕುವೈತ್ ಪ್ರವೇಶವಿಲ್ಲ]

ಇನ್ನುಳಿದಂತೆ ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಷನ್ ಸಪ್ತಾಹ, ಬದ್ರಿನಾಥ್ ಕೀ ದುಲ್ಹನಿಯಾ ಸಿನಿಮಾದ ಟ್ರೇಲರ್ ಬಿಡುಗಡೆ, ಗುಲ್ ಮಾರ್ಗ್ ನಲ್ಲಿ ಸ್ಕೀಯಿಂಗ್ ಆಡಿ, ಸಂಭ್ರಮಿಸುತ್ತಿರುವವರು... ಹೀಗೆ ವಿವಿಧ ಘಟನೆಗಳ ಚಿತ್ರಗಳು ನಿಮ್ಮ ಕಣ್ಣ ಮುಂದಿವೆ. ಇದೆಲ್ಲದರ ಜೊತೆಗೆ ಕಾನ್ಪುರದಲ್ಲಿ ನಿರ್ಮಾಣಾ ಹಂತದ ಕಟ್ಟಡ ಕುಸಿದು, ಅದರೊಳಗೆ ಸಿಲುಕಿದ್ದ ಮೂರು ವರ್ಷದ ಹೆಣ್ಣುಮಗುವನ್ನು ರಕ್ಷಿಸಿದ ನಂತರ ಆ ಮಗುವಿನ ತಂದೆಯ ಸಂಭ್ರಮ...ವಿವರಿಸುವುದಕ್ಕೆ ಫೋಟೋ ಇದೆಯಲ್ಲ...

ಲ್ಯಾಕ್ಮೆ ಫ್ಯಾಷನ್ ಸಪ್ತಾಹ

ಲ್ಯಾಕ್ಮೆ ಫ್ಯಾಷನ್ ಸಪ್ತಾಹ

ಮುಂಬೈನಲ್ಲಿ ಗುರುವಾರ ಆಯೋಜಿಸಿದ್ದ ಲ್ಯಾಕ್ಮೆ ಫ್ಯಾಷನ್ ಸಪ್ತಾಹದಲ್ಲಿ ರೂಪದರ್ಶಿಯರು ಕಂಡುಬಂದಿದ್ದು ಹೀಗೆ.

ಟ್ರೇಲರ್ ಬಿಡುಗಡೆ

ಟ್ರೇಲರ್ ಬಿಡುಗಡೆ

ಬದ್ರಿನಾಥ್ ಕೀ ದುಲ್ಹನಿಯಾ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ವರುಣ್ ಧವನ್ ಹಾಗೂ ಆಲಿಯಾ ಭಟ್

ತೆರವು ಕಾರ್ಯಾಚರಣೆ

ತೆರವು ಕಾರ್ಯಾಚರಣೆ

ಇಸ್ರೇಲ್ ಪೊಲೀಸರು ಆಫ್ರಾದ ವೆಸ್ಟ್ ಬ್ಯಾಂಕ್ ನಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಸ್ರೇಲ್ ಸುಪ್ರೀಂ ಕೋರ್ಟ್ ಅನ್ವಯ ಈ ಕಾರ್ಯಾಚರಣೆ ನಡೆಯುತ್ತಿದೆ.

ಜೀವ ಉಳಿದ ಸಂಭ್ರಮ

ಜೀವ ಉಳಿದ ಸಂಭ್ರಮ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿತ್ತು. ಅದರಡಿ ಸಿಲುಕಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಿದ ನಂತರ ಆಕೆಯ ತಂದೆ ಸಂಭ್ರಮಿಸಿದ ಪರಿ ಇದು.

ಚುನರಿ ಮನೋರಥ್

ಚುನರಿ ಮನೋರಥ್

ಚುನರಿ ಮನೋರಥ್ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಜಬಲ್ ಪುರ್ ನಲ್ಲಿ ನರ್ಮದಾ ನದಿಯ ಮೇಲ್ಭಾಗದಲ್ಲಿ 1100 ಅಡಿ ಉದ್ದದ ವುನರಿ ಹಿಡಿದು ನಿಂತಿದ್ದ ಭಕ್ತರು ಕಂಡುಬಂದಿದ್ದು ಹೀಗೆ.

ಗುಲ್ ಮಾರ್ಗ್ ನಲ್ಲಿ ಸ್ಕೀಯಿಂಗ್

ಗುಲ್ ಮಾರ್ಗ್ ನಲ್ಲಿ ಸ್ಕೀಯಿಂಗ್

ಶ್ರೀನಗರ ಗುಲ್ ಮಾರ್ಗ್ ನಲ್ಲಿ ಮಕ್ಕಳು ಸ್ಕೀಯಿಂಗ್ ಆಟವನ್ನು ಮನಸಾರೆ ಆನಂದಿಸಿದರು.

ನಿರ್ಬಂಧದ ವಿರುದ್ಧ ಪ್ರತಿಭಟನೆ

ನಿರ್ಬಂಧದ ವಿರುದ್ಧ ಪ್ರತಿಭಟನೆ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ದೇಶಗಳ ಪ್ರಜೆಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಈ ನಿರ್ಧಾರದ ವಿರುದ್ಧ ಯೆಮೆನ್ ದೇಶದ ಪ್ರಜೆಯೊಬ್ಬರು ಕೈಗೊಂಡ ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Various National and international events with a major theme Fashion week- America entry ban represent through PTI photos.
Please Wait while comments are loading...