Get Updates
Get notified of breaking news, exclusive insights, and must-see stories!

Ayodhya: ಅಯೋಧ್ಯೆ ಶ್ರೀರಾಮ ಮಂದಿರದ ಶಿಖರ ಮೇಲೆ ಧ್ವಜಾರೋಹಣಕ್ಕೆ ಕ್ಷಣಗಣನೆ: ಪ್ರಧಾನಿ ಮೋದಿ ಆಗಮನ

PM Modi in Ayodhya: ಉತ್ತರ ಪ್ರದೇಶದ ಶ್ರೀ ಅಯೋಧ್ಯೆ ಶ್ರೀರಾಮ ಮಂದಿರದ ಕಾಮಗಾರಿ ಸಂಪೂರ್ಣಗೊಂಡಿದೆ. ಇದರ ಪ್ರಯುಕ್ತ ಇಂದು ಮಹತ್ವದ ಸಮಾರಂಭ ಜರುಗಲಿದೆ. ರಾಮ ಮಂದಿರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶೇಷ ಧ್ವಜಾರೋಹಣ ನವೆರವೇರಿಸಲಿದ್ದಾರೆ. ಅಪಾರ ಭಕ್ತಗಣ ಈ ಅದ್ಧೂರಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ. ಈ ಸಂಬಂಧ ಮಂಗಳವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆ ತಲುಪಿದರು.

ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ ಇಂದು ಮಧ್ಯಾಹ್ನ ವಿಶೇಷ ಧ್ವಜಾರೋಹಣ ನೆರವೇರಲಿದೆ. ಈ ಸಮಾರಂಭವು ಮಂದಿರ ನಿರ್ಮಾಣ ಪೂರ್ಣಗೊಳ್ಳುವಿಕೆಯನ್ನು ಸಂಕೇತಿಸುತ್ತದೆ. ಪುರೋಹಿತರು ಮತ್ತು ಪ್ರಧಾನಮಂತ್ರಿ ಅವರ ಕಚೇರಿ ತಿಳಿಸಿರುವಂತೆ, ಮಧ್ಯಾಹ್ನ ಅತ್ಯಂತ ಶುಭ ಸಮಯವೆಂದು ಪರಿಗಣಿಸಲಾದ ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ಮೋದಿಯವರು ವಿಶೇಷ ಧ್ವಜಾರೋಹಣ ನೆರವೇರಿಸಲಿದ್ದಾರೆ.

PM Modi to Hoist Special Flag at Ayodhya Ram Temple as Construction Reaches Completion

ಪ್ರಧಾನಿ ಮೋದಿಯವರು ಈಗಾಗಲೇ ಮಹರ್ಷಿ ವಾಲ್ಮಿಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ನಂತರ ಅವರು ಅಲ್ಲಿಂದ M-17 ಹೆಲಿಕಾಪ್ಟರ್ ನಲ್ಲಿ ಬರಲಿದ್ದಾರೆ. ಬಳಿಕ ಅವರು ಶ್ರೀ ರಾಮ ಜನ್ಮಭೂಮಿ ಅಯೋಧ್ಯ ದೇವಾಲಯ ಪ್ರವೇಶಿಸಿದರು. ಪುರೋಹಿತರು, ಪ್ರಮುಖ ರಾಜಕೀಯ ಗಣ್ಯರು ಸೇರಿದಂತೆ ಸುಮಾರು 8000 ಮಂದಿ ಈ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಧ್ವಜದ ವಿಶೇಷತೆ & ಏನನ್ನು ಸಂಕೇತಿಸುತ್ತದೆ?

ಅಯೋಧ್ಯೆ ಶ್ರೀರಾಮ ಮಂದಿರ ದೇಗುಲ 161 ಅಡಿ ಎತ್ತರದ ಗೋಪುರ ಮೇಲೆ ಈ ವಿಶೇಷ ಧ್ವಜ (ಭಗವಾಧ್ವಜ) ಹಾರಾಡಲಿದೆ. 22 ಅಡಿ ಉದ್ದ, 11 ಅಡಿ ಅಗಲ ಇರುವ ಭಾವುಟ ಇದಾಗಿದೆ. ದೇವಾಲಯದ ಮೇಲಿನ 42 ಅಡಿ ಎತ್ತರದ ಕಂಬದ ಮೇಲೆ ಹಾರಿಸಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಎಎನ್‌ಐಗೆ ತಿಳಿಸಿದ್ದಾರೆ.

ಧ್ವಜವು ಭಗವಾನ್ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ವಿಕಿರಣ ಸೂರ್ಯನ ಚಿತ್ರ ಸಂಕೇತಿಸುತ್ತದೆ. ಅದರ ಮೇಲೆ ಕೋವಿದರ ಮರದ ಚಿತ್ರದೊಂದಿಗೆ 'ಓಂ' ಎಂದು ಬರೆಯಲಾಗಿದೆ. ಪವಿತ್ರ ಕೇಸರಿ ಧ್ವಜವು ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸುವ ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಮಾಹಿತಿ ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+