ರೈತರಿಗೆ ಭರ್ಜರಿ ಗುಡ್‌ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತು ಹಣ ಬಿಡುಗಡೆ ಯಾವಾಗ?

PM-Kisan Samman Nidhi: ರೈತರಿಗೆ ಅನುಕೂಲವಾಗುವಂತೆ ಸರ್ಕಾರಗಳು ಆಗಾಗ ಶುಭ ಸುದ್ದಿಯನ್ನು ನೀಡುತ್ತಲಿರುತ್ತವೆ. ಇದೀಗ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ 20ನೇ ಕಂತಿನ ಹಣ ಬಿಡುಗಡೆ ದಿನಾಂಕದ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಹಾಗಾದ್ರೆ ಯಾವಾಗ ರೈತರ ಖಾತೆಗೆ ಜಮೆಯಾಗುವ ಹಣ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಹೌದು.. ದೇಶದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 20ನೇ ಕಂತಿನ ಹಣ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಹಾಗಾದ್ರೆ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಕುತೂಹಲ ಬಹುತೇಕ ಮಂದಿಯ ತಲೆಯಲ್ಲಿರುತ್ತದೆ. ಇದೆಲ್ಲದಕ್ಕೂ ಉತ್ತರ ಇಲ್ಲಿ ನೀಡಲಾಗಿದೆ ತಿಳಿಯಿರಿ.

PM-Kisan Samman Nidhi Big update on 20th Installment

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಣವನ್ನು ವರ್ಗಾಯಿಸಲಿದ್ದಾರೆ. ಈ ಹಿಂದೆ 19ನೇ ಕಂತನ್ನು ಫೆಬ್ರವರಿ 2025ರಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಳಿಕ ವಿಳಂಬ ಆಗಿದ್ದು, ಇದೀಗ 20ನೇ ಕಂತಿನ ಹಣದ ಬಿಡುಗಡೆಗೊಳಿಸುವ ಬಗ್ಗೆ ಘೋಷಣೆ ಮಾಡಲಾಗಿದೆ.

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಈ ಬಗ್ಗೆ ಟ್ವೀಟ್‌ ಮಾಡಿದ್ದು, ಪಿಎಂ ಕಿಸಾನ್ ನಿಧಿಯ 20ನೇ ಕಂರಿನ ಆಗಸ್ಟ್ 2, 2025ರಂದು ಬಿಡುಗಡೆ ಆಗಲಿದೆ" ಎಂದು ತಿಳಿಸಿದೆ. ಇದನ್ನು ಪಡೆಯಬೇಕೆಂದ್ರೆ ಫಲಾನುಭವಿಗಳು, ಕೆವೈಸಿ ಮಾಡಿಸುವುದು ಮುಖ್ಯವಾಗಿದೆ. ಈ ಪ್ರಕ್ರಿಯೆ ಮುಗಿಯದಿದ್ರೆ, ಅಂತಹವರ ಖಾತೆಗೆ ಹಣ ಜಮೆ ಆಗುವುದಿಲ್ಲ.

ಕೇಂದ್ರ ಸರ್ಕಾರ 2019ರಲ್ಲಿ ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿಯಲ್ಲಿ ಪ್ರತಿ ವರ್ಷ ರೈತರಿಗೆ 6000 ರೂಪಾಯಿ ನೀಡಲಾಗುತ್ತದೆ. ಈ ಹಣವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ಪ್ರತಿ ಕಂತಿನಲ್ಲಿ 2000 ರೂಪಾಯಿನಂತೆ ರೈತರ ಖಾತೆಗೆ ಜಮಾ ಆಗುತ್ತದೆ. ಇದನ್ನು 4 ತಿಂಗಳಿಗೊಮ್ಮೆ ಅವರ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಯೋಜನೆಯಿಂದ ರೈತರಿಗೆ ತುಂಬಾ ಸಹಾಯ ಆಗಿದೆ.

ರೈತರಿಗೆ ಕೃಷಿ ಖರ್ಚೇನು ಕಡಿಮೆಯೇನು ಬರುವುದಿಲ್ಲ. ಬರೀ ಬೀಜ, ಗೊಬ್ಬ ಸೇರಿದಂತೆ ಇನ್ನಿತರ ಕೃಷಿ ಚಟುವಟಿಗೆ ಹಣ ಬೇಕೇ ಬೇಕಾಗುತ್ತದೆ. ಒಂದು ವೇಳೆ ಇಷ್ಟೆಲ್ಲ ವೆಚ್ಚ ಮಾಡಿ ಬೆಳೆಗಳನ್ನು ಬೆಳೆದರೂ ಫಸಲು ಬಾರದಿದ್ದರೆ, ರೈತರು ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ. ಇದನ್ನೆಲ್ಲವನ್ನು ಅರಿತುಕೊಂಡು ಕೇಂದ್ರ ಸರ್ಕಾರ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಹಣ ನೀಡುತ್ತಿರುವುದು ರೈತರಿಗೆ ತುಂಬಾ ಸಹಾಯ ಆಗುತ್ತಿದೆ.

ಕೆವೈಸಿ ಮಾಡಿಸುವ ವಿಧಾನಗಳು

* ಪಿಎಂ ಕಿಸಾನ್‌ನ ಅಧಿಕೃತ ವೆಬ್‌ಸೈಟ್ pmkisan.gov.inಗೆ ಭೇಟಿ ನೀಡಿ
* ಇ-ಕೆವೈಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಆಧಾರ್ ಸಂಖ್ಯೆಯನ್ನ ನಮೂದಿಸಿ
* ಆಧಾರ್ ಕಾರ್ಡ್‌ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ
* ಓಟಿಪಿ ಸಹಾಯದಿಂದ ಪರಿಶೀಲನೆ ಪೂರ್ಣಗೊಳಿಸಿ
* ಬಳಿಕ ನಿಮ್ಮ ಕೆವೈಸಿ ಪೂರ್ಣಗೊಳ್ಳುತ್ತದೆ

ಯೋಜನೆ ಹಾಗೂ ಹಣ ವರ್ಗಾವಣೆ ವಿಧಾನ

* ಯೋಜನೆ ಆರಂಭ: ಫೆಬ್ರವರಿ 2, 2019
* ರೈತರಿಗೆ ವಾರ್ಷಿಕ ಸಿಗುವ ಹಣ: ₹6,000
* ಎಷ್ಟು ತಿಂಗಳಿಗೊಮ್ಮೆ ವಿತರಣೆ: ನಾಲ್ಕು ತಿಂಗಳಿಗೊಮ್ಮೆ 3 ತಿಂಗಳ ಹಣ ವಿತರಣೆ
* ಪ್ರತಿ ಕಂತಿನಲ್ಲಿ ನೀಡಲಾಗುವ ಹಣ: 2,000 ರೂಪಾಯಿ
* ಹಣ ವರ್ಗಾವಣೆ ವಿಧಾನ: ನೇರ ಲಾಭ ವರ್ಗಾವಣೆ ಕಾರ್ಯವಿಧಾನದ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+