Jharkhand Exit Poll 2024: ಎಕ್ಸಿಟ್ ಪೋಲ್‌ನಲ್ಲಿ ಬಿಜೆಪಿಗೆ ಪೂರ್ಣ ಬಹುಮತದ ಭವಿಷ್ಯ
ಜಾರ್ಖಂಡ್‌ನಲ್ಲಿ ಇಂದು ವಿಧಾನಸಭೆ ಚುನಾವಣೆ ಮುಗಿದಿದೆ. ಇದರ ಬೆನ್ನಲ್ಲೇ ವಿವಿಧ ಸಂಸ್ಥೆಗಳು ಚುನಾವಣೋತ್ತರ ಫಲಿತಾಂಶ ( Exit poll) ಪ್ರಕಟಿಸಿವೆ. ಜಾರ್ಖಂಡ್‌ನಲ್ಲಿ ಈ ಬಾರಿ ಬಿಜೆಪಿ ಪಕ್ಷವೇ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಪೀಪಲ್ ಪಲ್ಸ್ ಸಂಸ್ಥೆ ಹೇಳಿದೆ.
ಪೀಪಲ್ ಪಲ್ಸ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳನ್ನು ಗಮನಿಸಿದರೆ, ಬಿಜೆಪಿ 42-48 ಸ್ಥಾನಗಳನ್ನು ಪಡೆಯಲಿದೆ. ಉಳಿದಂತೆ ಜೆಎಂಎಂ 16-23, ಐಎನ್‌ಸಿ 8-14, ಇತರೆ 6-10, ಎಜೆಎಸ್‌ಯು 2-5 ಸ್ಥಾನಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ. ಒಟ್ಟು 81 ಸ್ಥಾನಗಳ ಜಾರ್ಖಂಡ್ ವಿಧಾನಸಭೆಗೆ 41 ಸ್ಥಾನಗಳು ಮ್ಯಾಜಿಕ್ ನಂಬರ್ ಆಗಲಿವೆ.

ಪಕ್ಷವಾರು ಮತ ಹಂಚಿಕೆ ಗಮನಿಸುವುದಾದರೆ...ಬಿಜೆಪಿಗೆ (ಶೇ 42.1), ಜೆಎಂಎಂ (ಶೇ 20.08), ಐಎನ್‌ಸಿ (ಶೇ 16.2), ಇತರೆ (ಶೇ 16.3), ಜೆಎಸ್‌ಯು (ಶೇ 4.6) ಮತಗಳನ್ನು ಸೆಳೆದಿವೆ ಎಂದು ಪೀಪಲ್ ಪಲ್ಸ್ ಅಂಕಿ ಅಂಶ ಬಿಡುಗಡೆ ಮಾಡಿದೆ.
ಇನ್ನು ಜಾರ್ಖಂಡ್ JVC ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದ್ದು, ಅದರ ಪ್ರಕಾರ ಬಿಜೆಪಿಗೆ 40ರಿಂದ 44 ಸೀಟುಗಳು, ಜೆಎಂಎಂ ಕಾಂಗ್ರೆಸ್ ಮೈತ್ರಿಗೆ 30ರಿಂದ 40ಸೀಟುಗಳು ಬರಲಿವೆ. ಇತರ ಪಕ್ಷಗಳಿಗೆ 1 ಸ್ಥಾನ ಬರಲಿವೆ ಎಂದು ಹೇಳಿದೆ. ಸಿ-ವೋಟರ್ ಎಕ್ಸಿಟ್ ಪೋಲ್ ಫಲಿತಾಂಶ ಕೂಡ ಬಿಡುಗಡೆ ಆಗಿದೆ. ಜಾರ್ಖಂಡ್‌ನ ಒಟ್ಟು ಸೀಟುಗಳಲ್ಲಿ ಬಿಜೆಪಿ 34 ಸೀಟುಗಳು, ಕಾಂಗ್ರೆಸ್‌ಗೆ 26 ಹಾಗೂ ಇತರ ಪಕ್ಷಗಳಿಗೆ 01 ಸ್ಥಾನ ಬರಬಹುದು ಎಂದು ತಿಳಿಸಿದೆ.

ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿಗಳು ಇಲ್ಲ, ನಿಮ್ಮ (ಬಿಜೆಪಿ) ಅಡಿಯಲ್ಲಿ ಕೇಂದ್ರೀಯ ಸಂಸ್ಥೆಗಳಿವೆ, ಹಾಗಾದರೆ ನೀವು ಏನು ಮಾಡುತ್ತಿದ್ದೀರಿ? ಮೊದಲು ಅವರು 'ಪಾಕಿಸ್ತಾನ್, ಪಾಕಿಸ್ತಾನ' ಎಂದು ಹೇಳುತ್ತಿದ್ದರು. ಈಗ ಅವರು 'ಬಾಂಗ್ಲಾದೇಶಿ, ಬಾಂಗ್ಲಾದೇಶಿ' ಎನ್ನುತ್ತಿದ್ದಾರೆ ಎಂದು ಜಾರ್ಖಂಡ್ ಸಚಿವ ಮತ್ತು ಜೆಎಂಎಂ ನಾಯಕ ಹಫೀಜುಲ್ ಹಸನ್ ತಿರುಗೇಟು ನೀಡಿದ್ದಾರೆ.
ನಮ್ಮ ಜಾರ್ಖಂಡಿ ಎಕ್ಸಿಟ್ ಪೋಲ್ ನಮಗೆ 50ಕ್ಕೂ ಹೆಚ್ಚು ಸ್ಥಾನಗಳ ಭವಿಷ್ಯ ನುಡಿದಿದೆ. ಬೇರೆ ಯಾವುದೇ ಎಕ್ಸಿಟ್ ಪೋಲ್ ಅನ್ನು ನಾವು ನಂಬುವುದಿಲ್ಲ. ಹೇಮಂತ್ ಸೊರೆನ್ ಮತ್ತು ಕಲ್ಪನಾ ಸೊರೆನ್ ಅವರು ನಾಯಕತ್ವ ವಹಿಸಿದ ಸ್ಟಾರ್ ಪ್ರಚಾರಕರು. ಇಲ್ಲಿ ಬಾಂಗ್ಲಾದೇಶಿಗಳ ಸಂಖ್ಯೆ ಹೆಚ್ಚಿದೆ ಎಂದು ಹಿಂದೂಗಳು ಹೇಳಿದ್ದಾರಾ? ಇಲ್ಲಿ ಸರ್ಕಾರ ರಚಿಸಲು 4 ಬಾರಿ ಪ್ರಯತ್ನಿಸಿದರೂ ಅವರಿಗೆ ಸಾಧ್ಯವಾಗಲಿಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ.
ಬಿಜೆಪಿಯ ಜಾರ್ಖಂಡ್ ಚುನಾವಣಾ ಉಸ್ತುವಾರಿ ಶಿವರಾಜ್ ಸಿಂಗ್ ಚೌಹಾಣ್, ಜಾರ್ಖಂಡ್‌ನಲ್ಲಿ ನಮಗಿಂತ ದೊಡ್ಡ ಸರ್ವೇಯರ್ ಯಾರಿರಬಹುದು? ನಾವು ಕಳೆದ 3 ತಿಂಗಳಿಂದ ಜಾರ್ಖಂಡ್‌ನಲ್ಲಿದ್ದೇವೆ. ಜನರು ಹೇಗೆ ಬದಲಾವಣೆಯನ್ನು ಬಯಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಜನರು ಅದನ್ನು ಹೊಂದಿದ್ದಾರೆ ಎಂದು ನನಗೆ ಖಾತ್ರಿಯಿದೆ. ಬಿಜೆಪಿ-ಎನ್‌ಡಿಎಗೆ ಮತ ನೀಡಿ ಭಾರಿ ಜನಾದೇಶದೊಂದಿಗೆ ಸರ್ಕಾರ ರಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications