Parliament special session: ಜಿ-2Zeroದಲ್ಲಿ ಕಾಣುವುದು ಏನು? ಕಮಲದ ಬಗ್ಗೆ ಅಪಹಾಸ್ಯ ಮಾಡಿದ ಖರ್ಗೆ
ಸಂಸತ್ತಿನ ವಿಶೇಷ ಅಧಿವೇಶನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. ಈ ವಿಷಯಗಳನ್ನೇ ಅಸ್ತ್ರವಾಗಿಸಿಕೊಂಡು ಮೇಲ್ಮನೆ ಕಲಾಪದಲ್ಲಿ ರಾಜಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಚಿಹ್ನೆಯನ್ನು ಅಪಹಾಸ್ಯ ಮಾಡಿದ್ದಾರೆ.
ಕಲಾಪದಲ್ಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಖರ್ಗೆ 'ಚರ್ಚಿಸಬೇಕಾದ ವಿಷಯಗಳಿಗೆ ಉತ್ತರ ಕೊಡಿ. ನಾವು ಅದನ್ನು ಮಾಡಿದ್ದೇವೆ ಇದನ್ನು ಮಾಡಿದ್ದೇವೆ ಅಂತಾರೆ ಅದೆಲ್ಲಾ ಸರಿ. ಜಿ-2ನೂ ಒಕೆ. ಅನೇನು ಜಿ-2 ನಾ? ಏನು? ಅಂತ ಮಲ್ಲಿಖಾರ್ಜುನ ಖರ್ಗೆ ಕೇಳಿದಾಗ ಸಭೆಯಲ್ಲಿರುವವರು 'ಜಿ-20 ಸರ್' ಅಂದಾಕ್ಷಣ ಮಲ್ಲಿಕಾರ್ಜುನ ಖರ್ಗೆ ಆ ಝೀರೋದಲ್ಲಿ ಕಮಲದ ಹೂವೇ ಕಾಣಿಸುತ್ತದೆ. ಯಾವುದೇ ಜಾಹೀರಾತಿನಲ್ಲೇ ನೋಡಿ ಆ ಝೀರೋದಲ್ಲಿ ಕಮಲದ ಹೂವೇ ಕಾಣಿಸುತ್ತದೆ ಎಂದು ಅಪಹಾಸ್ಯ ಮಾಡಿದ್ದಾರೆ.

ಈ ಮಾತಿಗೆ ಸದನದಲ್ಲಿರುವ ಎಲ್ಲಾ ಸದಸ್ಯರು ಹೊಟ್ಟೆ ಹುಣ್ಣಾಗಿಸುವಷ್ಟು ನಗಾಡಿದ್ದಾರೆ. ಜಿ-2 ಸೊನ್ಹೆಯಲ್ಲಿ ಕಲಮದ ಹೂವೇ ಕಾಣಿಸುತ್ತದೆ ಅಂದರೆ ಕಮಲ Eನೂ ಮಾಡಿಲ್ಲ ಮಾಡಿದ್ದೇನು ಇಲ್ಲ ಎಂಬಾರ್ಥದಲ್ಲಿ ಖರ್ಗೆ ವ್ಯಂಗ್ಯ ಮಾಡಿರುವುದು ಕಂಡು ಬಂತು.
खट्टा-मीठा। 😂 #Kharge #SpecialParliamentSession #SpecialSession #SpecialSessionOfParliament pic.twitter.com/5se0gdaLfA
— Kartikeya (कार्तिकेय) (@KartikeyaBatra) September 18, 2023
ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪಾಧ್ಯಕ್ಷ ಜಗದೀಪ್ ಧನ್ಖರ್ ಅವರು ಮೇಲ್ಮನೆಯ ಕಲಾಪದಲ್ಲಿ ತಮಾಷೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡುತ್ತಿದ್ದಂತೆ ಸಂಸದರೊಬ್ಬರು ಅಲ್ಲಿಂದ ಎದ್ದು ಹೋದಾಗ, ಖರ್ಗೆ ಅವರ ಕೈ ಅವರಿಗೆ ತಾಗಿದೆ.
ನೀವು ಎಲ್ಲಿ ಹೋಗುತ್ತಿದ್ದೀರಿ ಎಂದು ಖರ್ಗೆ ಕೇಳಿದಾಗ ಸದನದಲ್ಲಿ ಇರುವವರು ನಗಾಡಿದರು. ಸಭಾಧ್ಯಕ್ಷರಾದ ಜಗದೀಪ್ ಧನ್ಖರ್ ಅವರು ಹಾಗೆ ಮಾಡುವುದು ಸಭೆಯ ಉಲ್ಲಂಘನೆ ಎಂದು ಹೇಳಿದಾಗ, ನೀವು ದೊಡ್ಡ ಮನಸ್ಸಿನವರು. ನೀವು ಸಭೆಯಲ್ಲಿ ಉಲ್ಲಂಘನೆ ಮಾಡಿದವರನ್ನು ಸಂಬಾಳಿಸುತ್ತೀರಿ. ನಾನು ಸಂಜಯ್ ಸಿಂಗ್ ಮತ್ತು ಚಡ್ಡಾ ಅವರನ್ನು ಕರೆಯಲು ಹೇಳಿದ್ದೆ ಎಂದಾಗ ಹಿಂದೆ ಕೂತ ಸಂಸದರು, ನೋಡಿ ಅವರು ಬಂದರು ಎಂದು ಹೇಳುತ್ತಿರುವದು ಕೇಳಿಸುತ್ತದೆ. ಎದ್ದು ಹೋಗಿದ್ದ ಸಂಸದ ವಾಪಸ್ ಬರುತ್ತಿರುವುದನ್ನು ನೋಡಿದ ಖರ್ಗೆ, ಸದ್ಯ ಅವರು ಬಂದರು, ಅವರು ಆ ಕಡೆ ಹೋದಾಗ ಸ್ವಲ್ಪ ಭಯ ಆಗಿ ಬಿಟ್ಟಿತು ಎಂದಾಗ ಸಭಾಪತಿ ಜೋರಾಗಿ ನಕ್ಕಿದ್ದಾರೆ.
ನಿಮ್ಮ ರಾಜಕೀಯ ಮಾಡುವ ವಿಧಾನವನ್ನು ಬದಲಿಸಿ, ಹೊಸ ಸಂಸತ್‌ಗೆ ನಾವು ಹೋದರೆ ಹೊಸದೇನೂ ಆಗುವುದಿಲ್ಲ ಎಂದು ಖರ್ಗೆ ಕುಟುಕಿದರು.
ಚಂದ್ರಯಾನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 'ಭಾರತ-ಇಂಡಿಯಾ'ದ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದ ಹೆಸರನ್ನು ಅಧಿಕೃತವಾಗಿ 'ಭಾರತ್' ಎಂದು ಬದಲಾಯಿಸಿದರೆ ಇಸ್ರೋವನ್ನು ಈಗ ಏನೆಂದು ಕರೆಯುತ್ತಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಲ್ಲದಿದ್ದರೆ ಏನು? ಈ ಭಾರತ, ಇಂಡಿಯಾ ಸಮಸ್ಯೆಯನ್ನು ಎಲ್ಲಿಂತರಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಬೇಕು, ಅಂತಹ ವಿಷಯಗಳಿಗೆ ಉತ್ತರ ಕೊಡಿ. ನಾವು ಅದನ್ನು ಮಾಡಿದ್ದೇವೆ ಇದನ್ನು ಮಾಡಿದ್ದೇವೆ ಅಂತಾರೆ ಅದೆಲ್ಲಾ ಸರಿ. ಜಿ-2ನೂ ಒಕೆ. ಅನೇನು ಜಿ-2 ನಾ? ಏನು? ಅಂತ ಮಲ್ಲಿಖಾರ್ಜುನ ಖರ್ಗೆ ಕೇಳಿದಾಗ ಸಭೆಯಲ್ಲಿರುವವರು 'ಜಿ-20 ಸರ್' ಅಂದಾಕ್ಷಣ ಮಲ್ಲಿಕಾರ್ಜುನ ಖರ್ಗೆ ಆ ಝೀರೋದಲ್ಲಿ ಕಮಲದ ಹೂವೇ ಕಾಣಿಸುತ್ತದೆ. ಯಾವುದೇ ಜಾಹೀರಾತಿನಲ್ಲೇ ನೋಡಿ ಆ ಝೀರೋದಲ್ಲಿ ಕಮಲದ ಹೂವೇ ಕಾಣಿಸುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಪಹಾಸ್ಯ ಮಾಡಿದ್ದಾರೆ.












Click it and Unblock the Notifications