ಫಲಿತಾಂಶಕ್ಕೆ ಮುನ್ನಾ ಚುನಾವಣಾ ಆಯೋಗಕ್ಕೆ ವಿರೋಧಪಕ್ಷಗಳ ದೂರು
ನವದೆಹಲಿ, ಮೇ 20: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುಂಚೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಭೇಟಿ ನೀಡಲಿದ್ದು, ಚುನಾವಣೆ ಬಗ್ಗೆ ದೂರು ನೀಡಲಿವೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್, ಟಿಡಿಪಿಯ ಚಂದ್ರಬಾಬು ನಾಯ್ಡು, ಆರ್‌ಜೆಡಿಯ ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ ಇನ್ನೂ ಹಲವು ವಿರೋಧ ಪಕ್ಷಗಳು ಒಟ್ಟುಗೂಡಿ ಚುನಾವಣಾ ಆಯೋಗದ ಆಯುಕ್ತರನ್ನು ಬುಧವಾರ ಭೇಟಿ ಮಾಡಲಿವೆ.
ಚುನಾವಣೆಯಲ್ಲಿ ನಡೆದ ಅಕ್ರಮಗಳು, ಇವಿಎಂ ಯಂತ್ರಗಳು, ಚುನಾವಣೆಯಲ್ಲಿ ಆದ ಗೊಂದಲಗಳು, ಏಕಪಕ್ಷೀಯ ನಿಲುವುಗಳು ಇನ್ನಿತರ ವಿಷಯಗಳ ಬಗ್ಗೆ ವಿರೋಧಪಕ್ಷಗಳು ಚುನಾವಣಾ ಆಯೋಗಕ್ಕೆ ನಾಳೆ ದೂರು ನೀಡಲಿವೆ.

ಮತದಾನೋತ್ತರ ಸಮೀಕ್ಷೆಯಲ್ಲಿ ಎನ್‌ಡಿಎಗೆ ಸುಲಭ ಜಯ ಈ ಬಾರಿಯೂ ಸಿಗಲಿದೆ ಎಂದು ವರದಿ ಬಂದ ಬಳಿಕ ವಿರೋಧ ಪಕ್ಷಗಳ ತೃತೀಯ ರಂಗ ಅಧಿಕಾರ ಹಿಡಿಯುವ ಆಸೆ ಕೈಜಾರಿದೆ ಎನ್ನಲಾಗಿದೆ, ಹಾಗಾಗಿಯೇ ನೆವಕ್ಕಾಗಿ ಅವು ಚುನಾವಣಾ ಆಯೋಗವನ್ನು ಭೇಟಿ ಮಾಡಲಿದೆ ಎನ್ನಲಾಗುತ್ತಿದೆ.












Click it and Unblock the Notifications