ಉಗ್ರರಿಂದ ಬಸ್ ಮೇಲೆ ದಾಳಿ, ಪೊಲೀಸ್ ಸಾವು, ನಾಲ್ವರಿಗೆ ಗಾಯ
ಶ್ರೀನಗರ್, ಸೆಪ್ಟೆಂಬರ್ 1: ಶ್ರೀನಗರ್ ಪಂಥಾ ಚೌಕ್ ನಲ್ಲಿ ಶುಕ್ರವಾರ ಬಸ್ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದು, ಒಬ್ಬ ಪೊಲೀಸ್ ಹುತಾತ್ಮರಾಗಿ, ನಾಲ್ವರು ಗಾಯಗೊಂಡಿದ್ದಾರೆ. ರಾತ್ರಿ ಎಂಟು ಗಂಟೆ ಹೊತ್ತಿಗೆ ದಾಳಿ ನಡೆದಿದೆ.
ಆ ಬಸ್ಸು ಬೆಮಿನಾದಿಂದ ಜೇವನ್ ಗೆ ತೆರಳುತ್ತಿತ್ತು. ಈ ಪ್ರದೇಶದಲ್ಲಿ ಈಗ ಉಗ್ರಗಾಮಿಗಳಿಗಾಗಿ ಹುಡುಕಾಟ ನಡೆದಿದೆ. ಇದಕ್ಕೂ ಮೊದಲು ಶೋಪಿಯಾನ್ ಜಿಲ್ಲೆಯ ಬಾರ್ ಬಗ್ ನಲ್ಲಿ ಸಬ್ ಇನ್ ಸ್ಪೆಕ್ಟರ್ ವೊಬ್ಬರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ವೊಬ್ಬರಿಗೆ ಗಾಯವಾಗಿತ್ತು.

ಶೋಪಿಯಾನ್ ಜಿಲ್ಲೆಯಲ್ಲೇ ಆಗಸ್ಟ್ ಇಪ್ಪತ್ತರಂದು ಉಗ್ರಗಾಮಿಗಳ ದಾಳಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆಗಸ್ಟ್ ಹದಿನೈದರಂದು ಶ್ರೀನಗರದ ಟೆಂಗ್ ಪೂರ್ ಬೈಪಾಸ್ ನಲ್ಲಿ ಭಯೋತ್ಪಾದಕರು ಪೊಲೀಸ್ ಬಂಕರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಬಂಡಿಪೋರ್ ನ ಹಜೀನ್ ಪ್ರದೇಶದಲ್ಲಿ ಆಗಸ್ಟ್ ಹದಿಮೂರರಂದು ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು.












Click it and Unblock the Notifications