ಚಿತ್ರಗಳಲ್ಲಿ: ಜಾಗ್ವಾರ್ ಪತನ, ಜಾರ್ಜಿಯಾ ಪ್ರವಾಹ
ನವದೆಹಲಿ,
ಜೂ, 16: ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಮಂಗಳವಾರ ಪತನವಾದ ಜಾಗ್ವಾರ್ ಫೈಟರ್ ವಿಮಾನ. ಅಂತಾರಾಷ್ಟ್ರೀಯ ಯೋಗ ದಿನದ ಪೂರ್ವ ಸಿದ್ಧತೆಯಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ರಾಜನಾಥ್ ಸಿಂಗ್. ದೆಹಲಿಯಲ್ಲಿ ಮುಂದುವರಿದ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ. id="toptextpromo"> id='are-slot-1' class='oiad oi-axt oiadv'>ಸುಷ್ಮಾ
ಸ್ವರಾಜ್ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ, ಭೀಕರ ಪ್ರವಾಹಕ್ಕೆ ಸಿಲುಕಿದ ಜಾರ್ಜಿಯಾದ ದಾರುಣ ಸ್ಥಿತಿ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ಜಾಗ್ವಾರ್ ಯುದ್ಧ ವಿಮಾನ ಪತನ
ಉತ್ತರಪ್ರದೇಶ ಸಮೀಪದ ಅಲಹಾಬಾದ್ ಮಂಗಳವಾರ ಜಾಗ್ವಾರ್ ಫೈಟರ್ ವಿಮಾನ ಪತನವಾಗಿದೆ. ಅದೃಷ್ಟವಶಾತ್ ಇಬ್ಬರೂ ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪೊಲೀಸ್ ಪರಿಶೀಲನೆ
ಜಾಗ್ವಾರ್ ಫೈಟರ್ ವಿಮಾನ ಪತನವಾಗಿರಿವ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದರು. ತಾಂತ್ರಿಕ ದೋಷದಿಂದ ವಿಮಾನ ಪತನವಾಗಿದೆ ಎಂದು ಹೇಳಲಾಗಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಹೊತ್ತಿ ಉರಿದ ವಿಮಾನ
ನಿಯಂತ್ರಣ ಕಳೆದುಕೊಂಡು ಧರೆಗೆ ಉರುಳಿದ್ದ ಜಾಗ್ವಾರ್ ಫೈಟರ್ ಹೊತ್ತಿ ಉರಿದ ದೃಶ್ಯ. ಅತ್ತ ಚೆನ್ನೈ ಸಮುದ್ರ ತೀರದಲ್ಲಿ ನಾಪತ್ತೆಯಾಗಿರುವ ಯುದ್ಧ ವಿಮಾನದ ಅವಶೇಷಗಳು ಇನ್ನು ಪತ್ತೆಯಾಗಿಲ್ಲ.

ಸುಷ್ಮಾ ರಾಜೀನಾಮೆಗೆ ಆಗ್ರಹ
ಲಲಿತ್ ಮೋದಿ ವೀಸಾ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇಶಾದ್ಯಂತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆ ಮುಂದುರಿದೇ ಇದೆ.

ಧ್ವಜಾರೋಹಣ ಮಾಡಿದ ಸುಷ್ಮಾ ಸ್ವರಾಜ್
ಮಾನಸ ಸರೋವರ ಯಾತ್ರಿಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಿರುವ ಕೇಂದ್ರ ಸರ್ಕಾರ ಮಂಗಳವಾರ ಪ್ರಥಮ ತಂಡವನ್ನು ಕಳಿಸಿಕೊಟ್ಟಿತು. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಧವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭೀಕರ ಪ್ರವಾಹದ ನಂತರ
ಏಷ್ಯಾ ಯುರೋಪ್ ಗಡಿ ಭಾಗದ ಜಾರ್ಜಿಯಾದಲ್ಲಿ ವ್ಯಾಪಕ ಪ್ರವಾಹ ಉಂಟಾಗಿದ್ದು ಕೊಂಚ ತಗ್ಗಿದೆ. ಮಳೆ ನಿಂತ ಮೇಲೆ ತೇಲಿಕೊಂಡು ಹೋಗಿ ಅಡ್ಡಲಾಗಿ ನಿಂತಿರುವ ಲಾರಿ ಭೀಕರತೆಯ ಕತೆ ಹೇಳುತ್ತಿದೆ.

ನ್ಯಾಯಾಲಯಕ್ಕೆ ಹಾಜರಾದ ಮಧು ಕೋಡಾ
ಸಾವಿರಾರು ಕೋಟಿ ರು. ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದರು.

ಪ್ರತಿಭಟನೆ ತಡೆದ ಪೊಲೀಸರು
ದೆಹಲಿ ಸರ್ಕಾರ ನೀರು ಮತ್ತು ವಿದ್ಯುತ್ ನೀಡಲು ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆ ವಿಕೋಪಕ್ಕೆ ಹೋದಾಗ ಪೊಲೀಸರು ತಹಬದಿಗೆ ತಂದ ಪರಿ. ಪೂರ್ವ ದೆಹಲಿಯಲ್ಲಿ ಪೌರ ಕಾರ್ಮಿಕರು ಕೆಲಸ ಬಹಿಷ್ಕರಿಸಿ ಸರ್ಕಾರದ ವಿರುದ್ಧ ಧರಣಿ ಕುಳಿತಿದ್ದಾರೆ.

ಯೋಗ ದಿನ ಪೂರ್ವ ಸಿದ್ಧತೆ
ಅಂತಾರಾಷ್ಟ್ರೀಯ ಯೋಗ ದಿನವಾಗಿ ಜೂನ್ 21 ಕ್ಕೆ ಮಾನ್ಯತೆ ದೊರೆತಿದ್ದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಕ್ಯಾಬಿನೆಟ್ ಭಾಗಿಯಾಗಲಿದೆ. ಅದಕ್ಕೂ ಮುನ್ನ ಸಂಸತ್ ಭವನದ ಹೊರಗೆ ನಡೆದ ಪೂರ್ವ ಸಿದ್ಧತೆಯನ್ನು ವೀಕ್ಷಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್.












Click it and Unblock the Notifications