ಶುಕ್ರವಾರದ ಬಿಸಿ ಬಿಸಿ ಸುದ್ದಿಗಳು: ಹಳ್ಳಿಯಿಂದ ದಿಲ್ಲಿವರೆಗೆ

Written By:
Subscribe to Oneindia Kannada

ನವದೆಹಲಿ, ಜೂನ್ 24: ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸವನ್ನು ಮುಗಿಸಿ ಉಜ್ಬೆಕಿಸ್ತಾನ ತಾಷ್ಕೆಂಟ್ ನ ಪ್ರಮುಖರನ್ನು ಭೇಟಿಯಾದರು. ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ನೇಮಕಗೊಂಡ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ತಮ್ಮ ನಿವಾಸದಲ್ಲಿ ಸಂತಸ ಹಂಚಿಕೊಂಡರು.

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಹಿಡುವಳಿದಾರರ ಪರವಾಗಿ ಹೋರಾಟಗಾರ ರವೀಂದ್ರ ನಾಯ್ಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದರು. ಸಚಿವರಾದ ಸಂತೋಷ್ ಲಾಡ್ ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಕಾರ್ಯಕರ್ತರಿಂದ ಭರಪೂರ ಸ್ವಾಗತ ಸಿಕ್ಕಿತು.[ಸ್ಟಾರ್ಟ್ ಅಪ್‌ಗೆ 10 ಸಾವಿರ ಕೋಟಿ, 18 ಲಕ್ಷ ಉದ್ಯೋಗ ಸೃಷ್ಟಿ]

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಪೆದ್ದೂರಿನಲ್ಲಿ ಜೂನ್ 25 ರಂದು ಆರಂಭವಾಗುವ ರಾಜ್ಯ ಮಟ್ಟದ 'ಜಾನಪದ ಸಂಭ್ರಮ' ಕಾರ್ಯಕ್ರಮದ ಅಂತಿಮ ಸಿದ್ಧತೆಗಳನ್ನು ನ್ಯಾಯಮೂರ್ತಿಗಳಾದ ಶ್ರೀ ವಿ. ಗೋಪಾಲಗೌಡ ಅವರು ವೀಕ್ಷಿಸಿದರು.[ಚಿಂತಾಮಣಿ ತಾಲ್ಲೂಕಿನ ಪೆದ್ದೂರಿನಲ್ಲಿ 'ಜನಪದ ಸಂಭ್ರಮ']

ಮತ್ತೆ ಬ್ಯಾಟ್ ಹಿಡಿದು ಅಂಗಣಕ್ಕೆ ಇಳಿದ ಭಾರತ ಕಂಡ ಅತ್ಯುತ್ತಮ ನಾಯಕ ಸೌರವ್ ಗಂಗೂಲಿ, ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ... ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ...(ಪಿಟಿಐ ಚಿತ್ರಗಳು)

ಲಾಲ್ ಬಹದ್ದೂರ್ ಶಾಸ್ತ್ರೀಗೆ ವಂದನೆ

ಲಾಲ್ ಬಹದ್ದೂರ್ ಶಾಸ್ತ್ರೀಗೆ ವಂದನೆ

ತಾಷ್ಕೆಂಟ್ ನಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಸಾಲು ಸಾಲು ಸಭೆಗಳ ನಡುವೆಯೂ ಮಾಜಿ ಪ್ರಧಾನಿ, ಮುತ್ಸದ್ಧಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ವಂದನೆ ಸಲ್ಲಿಸಿದರು.

ಪುಟಿನ್ ಭೇಟಿ

ಪುಟಿನ್ ಭೇಟಿ

ತಾಷ್ಕೆಂಟ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಪ್ರವಾಸ

ಪ್ರಧಾನಿ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ತಾಷ್ಕೆಂಟ್ ನಲ್ಲಿ ತಜಿಕ್ ಅಧ್ಯಕ್ಷ ಇಮೊಮಾಲಿ ರಹಮಾನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದಪ್ಪಾ ಫೋಟೋ

ಇದಪ್ಪಾ ಫೋಟೋ

ಟಿವಿ ವಾಹಿನಿಯೊಂದರ ರಿಪೋರ್ಟರ್ ಲಾಸ್ ಏಂಜಲಿಸ್ ನಲ್ಲಿ ಫೋಟೋ ತೆಗೆದುಕೊಂಡ ಪರಿ.

ಕಂದಾಯ ಸಚಿವರ ಭೇಟಿ

ಕಂದಾಯ ಸಚಿವರ ಭೇಟಿ

ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಹಕ್ಕು ಹಿಡುವಳಿದಾರರ ಪರವಾಗಿ ಹೋರಾಟಗಾರ ರವೀಂದ್ರ ನಾಯ್ಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆ ಮಾಡಿದರು.

ಹುಬ್ಬಳ್ಳಿಗೆ ಸಂತೋಷ್

ಹುಬ್ಬಳ್ಳಿಗೆ ಸಂತೋಷ್

ಸಚಿವರಾದ ಸಂತೋಷ್ ಲಾಡ್ ಹುಬ್ಬಳ್ಳಿಗೆ ಭೇಟಿ ನೀಡಿದ್ದ ವೇಳೆ ಕಾರ್ಯಕರ್ತರಿಂದ ಭರಪೂರ ಸ್ವಾಗತ ಸಿಕ್ಕಿತು.

ಶ್ರದ್ಧಾಂಜಲಿ

ಶ್ರದ್ಧಾಂಜಲಿ

ಪಾಕಿಸ್ತಾನದ ಜನಪ್ರಿಯ ಖವ್ವಾಲಿ ಗಾಯಕ ಅಮ್ಜದ್ ಸಬ್ರಿ ಹತ್ಯೆಗೆ ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದ ದೃಶ್ಯ ಕರಾಚಿಯದ್ದು.

ಜಾನಪದ ಸಂಭ್ರಮ

ಜಾನಪದ ಸಂಭ್ರಮ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಪೆದ್ದೂರಿನಲ್ಲಿ ಜೂನ್ 25 ರಂದು ಆರಂಭವಾಗುವ ರಾಜ್ಯ ಮಟ್ಟದ 'ಜಾನಪದ ಸಂಭ್ರಮ' ಕಾರ್ಯಕ್ರಮದ ಅಂತಿಮ ಸಿದ್ಧತೆಗಳನ್ನು ನ್ಯಾಯಮೂರ್ತಿಗಳಾದ ಶ್ರೀ ವಿ. ಗೋಪಾಲಗೌಡ ಅವರು ವೀಕ್ಷಿಸಿದರು

ಜಾನಪದ ಹಬ್ಬಕ್ಕೆ ಸಿದ್ಧ

ಜಾನಪದ ಹಬ್ಬಕ್ಕೆ ಸಿದ್ಧ

ಯುವ ಪೀಳಿಗೆಯಲ್ಲಿ ಜಾನಪದ ಕಲೆ, ಗ್ರಾಮೀಣ ಸಂಸ್ಕೃತಿ, ಪರಂಪರೆ ಕುರಿತು ಜಾಗೃತಿ ಮೂಡಿಸುವ ಜಾಣಪದ ಹಬ್ಬಕ್ಕೆ ನಾವು ಸಿದ್ಧ.

 15 ಸಾವಿರ ಜನ

15 ಸಾವಿರ ಜನ

ಜಾನಪದ ಸಂಭ್ರಮಕ್ಕೆ 15 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಪ್ರದೇಶ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನಪದ ಕಲಾ ತಂಡಗಳು ಭಾಗವಹಿಸಲಿವೆ.

 ಸ್ವಚ್ಛತಾ ಅಭಿಯಾನ

ಸ್ವಚ್ಛತಾ ಅಭಿಯಾನ

ರಾಷ್ಟ್ರೀಯ ವಾಣಿಜ್ಯ ಮಂಡಳಿ ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ 'ಸ್ವಚ್ಛಭಾರತ ಅಭಿಯಾನ' ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ ಪಾಟೀಲ್ ಅವರು ಭಾಗವಹಿಸಿದ್ದರು

ಸನ್ಮಾನ

ಸನ್ಮಾನ

ವಾಣಿಜ್ಯ ಮಂಡಳಿಯ ಸಾಧನೆ ಕಾರಣರಾದವರನ್ನು ಕೋಲ್ಕತಾದಲ್ಲಿ ಸನ್ಮಾನಿಸಲಾಯಿತು.

 ಕೊಹ್ಲಿ ಸೆಲ್ಫಿ

ಕೊಹ್ಲಿ ಸೆಲ್ಫಿ

ಗುರ್ ಗಾಂವ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಯೊಂದಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೆಲ್ಫಿ ಸಂಭ್ರಮ.

ಸ್ಪಿನ್ ಮಾಂತ್ರಿಕ

ಸ್ಪಿನ್ ಮಾಂತ್ರಿಕ

ಭಾರತ ತಂಡದ ನೀತನ ಕೋಚ್ ಆಗಿ ಆಯ್ಕೆಯಾದ ಅನಿಲ್ ಕುಂಬ್ಳೆ ತಮ್ಮ ಕುಟುಂಬದೊಂದಿಗೆ.

ಗಂಗೂಲಿ ಬ್ಯಾಟಿಂಗ್

ಗಂಗೂಲಿ ಬ್ಯಾಟಿಂಗ್

ಧರ್ಮಶಾಲಾದಲ್ಲಿ ನಡೆದ ಸೌಹಾರ್ದಯುತ ಪಂದ್ಯದಲ್ಲಿ ಬ್ಯಾಟ್ ಬೀಸಿದ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ದಾದಾ ಸೌರವ್ ಗಂಗೂಲಿ.

ಅಮಿತ್ ಶಾ ಭೇಟಿ

ಅಮಿತ್ ಶಾ ಭೇಟಿ

ಕೇರಳದ ಶಿವಗಿರಿ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ.

ಮಹಾಕುಸಿತ

ಮಹಾಕುಸಿತ

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದ ಪರಿಣಾಂ ಭಾರತದ ಷೇರು ಮಾರುಕಟ್ಟೆ ಅಪಾರ ಕುಸಿತ ಕಂಡಿತು. ಕುಸಿತದ ವೇಳೆ ಮುಂಬೈನಲ್ಲಿ ಹೂಡಿಕೆದಾರರು ಕಂಡದ್ದು ಹೀಗೆ...

ಇದು ಶ್ರೀನಗರ

ಇದು ಶ್ರೀನಗರ

ಶ್ರಿನಗರದಲ್ಲಿ ಪ್ರತಿಭಟನಾಕಾರರ ಆಟಾಟೋಪ ಮುಂದುವರಿದಿದ್ದು ಪೊಲೀಸರ ಮೇಲೆ ಕಲ್ಲಿ ಎಸೆಯಲು ಮುಂದಾಗಿರುವ ಯುವಕ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Prime Minister Narendra Modi shakes hands with Tajik President Emomali Rahmon in a meeting in Tashkent on Friday. Newly Appointed Indian Cricket Team Head Coach Anil Kumble with his wife and kids at his residence in Bengaluru.
Please Wait while comments are loading...