ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

New Year 2023: ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹೀಗಿತ್ತು

|
Google Oneindia Kannada News

ಬೆಂಗಳೂರು, ಜ. 01: ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾ ಸೇರಿದಂತೆ ದೇಶದಾದ್ಯಂತ ಇತರ ದೊಡ್ಡ ನಗರಗಳು 2023 ಅನ್ನು ಬೃಹತ್ ಆಚರಣೆಗಳ ಮೂಲಕ ಮೋಜು ಮಸ್ತಿಯಲ್ಲಿ ಸ್ವಾಗತಿಸಿವೆ. ಕೊರೊನಾ ನಿರ್ಬಂಧಗಳ ನಡುವೆಯೇ ಸುಮಾರು ಎರಡು ವರ್ಷಗಳಲ್ಲಿ ಇದೇ ಮೊದಲು ಇಂತಹ ಜನಸಾಗರವನ್ನು ನಗರಗಳು ಕಂಡಿವೆ.

ಚೀನಾದಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳಲ್ಲಿ ಆತಂಕಕಾರಿಯಾಗಿ ಉಲ್ಬಣಗೊಂಡಿದ್ದು, ದೇಶದಲ್ಲಿಯೂ ಆರೋಗ್ಯ ಇಲಾಖೆ ಮತ್ತು ಅಧಿಕಾರಿಗಳು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮಾಸ್ಕ್ ಸೇರಿ ಕೆಲವು ನಿಯಮಿತ ನಿರ್ಬಂಧಗಳನ್ನು ಮಾತ್ರ ಘೋಷಿಸಿದ್ದು, ಯಾವುದೇ ಪ್ರಮುಖ ನಿರ್ಬಂಧಗಳನ್ನು ಇನ್ನೂ ಘೋಷಿಸಲಾಗಿಲ್ಲ.

ಹೊಸ ವರ್ಷ 2023: ನಿಯಂತ್ರಣ ತಪ್ಪಿದ ಆಚರಣೆ ಬೆಂಗಳೂರಿನಲ್ಲಿ ಲಾಠಿ ಚಾರ್ಜ್ಹೊಸ ವರ್ಷ 2023: ನಿಯಂತ್ರಣ ತಪ್ಪಿದ ಆಚರಣೆ ಬೆಂಗಳೂರಿನಲ್ಲಿ ಲಾಠಿ ಚಾರ್ಜ್

ಸದ್ಯಕ್ಕೆ, ಚೀನಾ, ಸಿಂಗಾಪುರ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಥೈಲ್ಯಾಂಡ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರ ನಡುವೆಯೇ ನಡೆದ ಹೊಸ ವರ್ಷದ ಆಚರಣೆಗಳ ಮಾಹಿತಿ ಇಲ್ಲಿದೆ.

New Year 2023: Big cities like Delhi, Mumbai, Bengaluru, Kolkata see huge crowds

ದೆಹಲಿಯು ಐತಿಹಾಸಿಕ ಇಂಡಿಯಾ ಗೇಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬೃಹತ್ ಜನಸಂದಣಿ ಸೇರಿತ್ತು. ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ನಗರದಾದ್ಯಂತ ಸುಮಾರು 18,000 ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಪಿಟಿಐ ವರದಿ ಮಾಡಿದೆ.

ಹೊಸ ವರ್ಷದ ಮುನ್ನಾದಿನದ ಮೊದಲು, ರಾಜ್‌ಪಥ್ ಎಂದು ಕರೆಯಲ್ಪಡುವ ಕರ್ತವ್ಯ ಪಥದಲ್ಲಿ ಜನಸಂದಣಿಯನ್ನು ನಿರ್ವಹಿಸಲು ಬೃಹತ್ ಸಿದ್ಧತೆಗಳನ್ನು ಕೈಗೊಳ್ಳಲಾಯಿತು. 1,000 ಕ್ಕೂ ಹೆಚ್ಚು ಕಾರುಗಳು ಮತ್ತು 40 ಬಸ್‌ಗಳನ್ನು ನಿಲ್ಲಿಸಲು ಪಾರ್ಕಿಂಗ್ ಸೈಟ್‌ಗಳನ್ನು ನಾಗರಿಕ ಆಡಳಿತ ವ್ಯವಸ್ಥೆ ಮಾಡಿತ್ತು.

ಇನ್ನು, ಮುಂಬೈನ ಇತರ ಜನಪ್ರಿಯ ತಾಣಗಳ ನಡುವೆ ಮರೈನ್ ಡ್ರೈವ್‌ನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮುಂಜಾನೆಯ ದೃಶ್ಯಗಳಲ್ಲಿ ಐತಿಹಾಸಿಕ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬೆಳಗಿನ ಪ್ರಾರ್ಥನೆಗಾಗಿ ಜನರ ದಂಡು ಆಗಮಿಸಿತ್ತು.

New Year 2023: Big cities like Delhi, Mumbai, Bengaluru, Kolkata see huge crowds

ನಮ್ಮ ಬೆಂಗಳೂರಿನಲ್ಲಿ, ಬ್ರಿಗೆಡ್ ರೋಡ್, ಎಂಜಿ ರೋಡ್ ಮತ್ತು ಚರ್ಚ್ ಸ್ಟೀಡ್‌ಗಳಲ್ಲಿ ಭಾರಿ ಜನ ಸಮೂಹವಿತ್ತು. ರೆಸ್ಟೋರೆಂಟ್‌ಗಳು, ಪಬ್‌ಗಳು, ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಹೊಸ ವರ್ಷದ ಸಂಭ್ರಮಾಚರಣೆಗ ಅನುಮತಿ ನೀಡಲಾಗಿತ್ತು. ಆದರೆ, ಕಾರ್ಯಕ್ರಮ ಮುಗಿದರೂ ಸ್ಥಳದಿಂದ ಹೊರಡದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.

ರಾಜ್ಯ ಸರ್ಕಾರವು ಭಾನುವಾರದಂದು ಚೀನಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪುರ್ ಮತ್ತು ಥೈಲ್ಯಾಂಡ್ ದೇಶಗಳಿಂದ ಬರುವವರಿಗೆ ಅವರು ಆಗಮಿಸಿದ ದಿನಾಂಕದಿಂದ 7 ದಿನಗಳವರೆಗೆ ಹೋಂ ಕ್ವಾರಂಟೈನ್ ಆಗಿರಬೇಕು. ಸೋಂಕು ಕಾಣಿಸಿಕೊಂಡರೇ, ರಾಜ್ಯ ಕೋವಿಡ್ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು" ಮಾರ್ಗಸೂಚಿ ಹೊರಡಿಸಿದೆ.

ಇತ್ತ, ಉತ್ತರಾಖಂಡದ ಮಸ್ಸೂರಿಯ ಬೀದಿಗಳು ಮತ್ತು ಮನಾಲಿಯ ಮಾಲ್ ರೋಡ್ ಕೂಡ ತಡರಾತ್ರಿಯವರೆಗೂ ಸಂಭ್ರಮಾಚರಣೆಯಿಂದ ತುಂಬಿ ತುಳುಕುತ್ತಿತ್ತು. ಡಿಸೆಂಬರ್‌ನ ನೆಚ್ಚಿನ ಪ್ರವಾಸಿ ತಾಣ ಗೋವಾದಲ್ಲಿ ಭಾರಿ ಕಾಲ್ತುಳಿತ ಉಂಟಾಗಿದೆ. ಕೇರಳದ ಕೊಚ್ಚಿ ಕೊಚ್ಚಿನ್ ಕಾರ್ನಿವಲ್‌ನಲ್ಲಿ ಭಾರಿ ಜನರು ಭಾಗವಹಿಸಿದ್ದರು.

English summary
New Year 2023: Delhi, Mumbai, Bengaluru and Kolkata Big cities see huge crowds in New Year’s celebrations. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X