ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಕಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೊಳಿಸಿದ ಎನ್ ಡಿಎ

By Mahesh
|
Google Oneindia Kannada News

ನವದೆಹಲಿ, ಸೆ. 05: ನಿವೃತ್ತ ಯೋಧರ ನಾಲ್ಕು ದಶಕಗಳ ಬೇಡಿಕೆಗೆ ಕೊನೆಗೂ ಬೆಲೆ ಸಿಕ್ಕಿದೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಏಕಶ್ರೇಣಿ ಏಕ ಪಿಂಚಣಿ(OROP) ಯೋಜನೆ ಜಾರಿಗೊಳಿಸಿ ಶನಿವಾರ ಮಧ್ಯಾಹ್ನ ಪ್ರಕಟಣೆ ಹೊರಡಿಸಿದೆ. ರಕ್ಷಣಾ ಸಚಿವ ಮನೋಹರ್ ಪಾರಿಕ್ಕಾರ್ ಅವರು ಈ ಬಗ್ಗೆ ನೀಡಿದ ಘೋಷಣೆಗೆ ಪ್ರತಿಭಟನಾ ನಿರತ ನಿವೃತ್ತ ಯೋಧರು ಸಮ್ಮತಿಸಿದ್ದಾರೆ.

ನಿವೃತ್ತ ಯೋಧರು ಆ.14 ರಿಂದ ಪಟ್ಟು ಹಿಡಿದು ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಅವರ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ರಕ್ಷಣಾ ಸಚಿವ ಮನೋಹರ್ ಅವರು ಶನಿವಾರ ಬೆಳಗ್ಗೆ ನಿವೃತ್ತ ಯೋಧರ ಜೊತೆಗೆ ಸಮಾಲೋಚನೆ ನಡೆಸಿ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೊಳಿಸಿದ್ದಾರೆ. ಕೇಂದ್ರ ಸರ್ಕಾರ 2014ರ ಜುಲೈನಿಂದ ಅನ್ವಯವಾಗುವಂತೆ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದೆ.

NDA Govt announces 'One Rank One Pension' Manohar Parrikar

ಪ್ರತಿ ಎರಡು ವರ್ಷಗಳಿಗೆ ಪಿಂಚಣಿ ಪರಿಷ್ಕರಣೆಯಾಗಬೇಕು ಎಂಬುದು ಯೋಧರ ವಾದವಾಗಿದ್ದರೆ, ಸರ್ಕಾರ ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಣೆ ಮಾಡುವುದಾಗಿ ಹೇಳಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಪೆನ್ಷನ್ ಪರಿಷ್ಕೃತ ಮಾಡುವ ಒಪ್ಪಂದಕ್ಕೆ ಆರ್‌ಎಸ್‌ಎಸ್ ಬಿಜೆಪಿ ಹಾಗೂ ಸಂಘ ಪರಿವಾರದ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೊಂಡಿರುವುದರಿಂದ ಸುಮಾರು 22 ಲಕ್ಷ ನಿವೃತ್ತ ಯೋಧರು ಹಾಗೂ 6 ಲಕ್ಷಕ್ಕೂ ಅಧಿಕ ಹುತಾತ್ಮ ಯೋಧರ ಪತ್ನಿಯರಿಗೆ ಪಿಂಚಣಿ ಸಿಗಲಿದೆ.

One Rank One Pension

ಏಕಶ್ರೇಣಿ- ಏಕ ಪಿಂಚಣಿ ಈ ದಿನದ ಬೆಳವಣಿಗೆ:
* ಈ ಒಂದು ಯೋಜನೆಯ ಜಾರಿಗಾಗಿಯೇ ಸರ್ಕಾರಿ ಬೊಕ್ಕಸಕ್ಕ್ಕೆ 10,000 ದಿಂದ 12,000 ಕೋಟಿ ರೂಪಾಯಿ ಹೊರೆ ಬೀಳಲಿದೆ ಹಾಗಾಗಿ ಯೋಜನೆ ಜಾರಿ ವಿಳಂಬವಾಯಿತು.
* 'ರಕ್ಷಣಾ ಖಾತೆಯಲ್ಲಿ ವಿಆರ್​ಎಸ್​ನಂಥ (ಸ್ವಯಂ ನಿವೃತ್ತಿ ಯೋಜನೆ) ಇಲ್ಲ, ವಿಆರ್ ಎಸ್ ಪಡೆದವರಿಗೆ ಏಕಶ್ರೇಣಿ- ಏಕ ಪಿಂಚಣಿ ಯೋಜನೆ ಪ್ರಯೋಜನ ಸಿಗುವುದಿಲ್ಲ.
* ಸಶಸ್ತ್ರ ಪಡೆಗಳ ನಿವೃತ್ತ ಸೇನಾ ಸಿಬ್ಬಂದಿ ಜಂತರ್ ಮಂತರ್​ನಲ್ಲಿ ನಡೆಸುತ್ತಿರುವ ಚಳವಳಿ ಶನಿವಾರ 83ನೇ ದಿನ ಪ್ರವೇಶಿಸಿದೆ.
* ನಿವೃತ್ತ ಯೋಧರು ಸರ್ಕಾರದ ಮುಂದಿಟ್ಟಿದ 6 ಬೇಡಿಕೆಗಳ ಪೈಕಿ ಕೆಲವು ಸರ್ಕಾರದ ಒಪ್ಪಿಗೆ ಸಿಗದ ಕಾರಣ ಪ್ರತಿಭಟನೆ ಮುಂದುವರೆಯುವ ಸಾಧ್ಯತೆ ಕಂಡು ಬಂದಿದೆ.

English summary
The government announces the implementation of the long-awaited One Rank One Pension or OROP this afternoon. Protesting veterans said Defence Minister Manohar Parrikar, at a meeting today, told them that the government had broadly accepted the concept of OROP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X