ಅಧಿಕೃತ : ಬಿಜೆಪಿ ತೊರೆದ ನವಜೋತ್ ಸಿಂಗ್ ಸಿಧು ದಂಪತಿ

Posted By:
Subscribe to Oneindia Kannada

ನವದೆಹಲಿ/ ಅಮೃತಸರ, ಸೆ. 14: ಮಾಜಿ ಕ್ರಿಕೆಟರ್, ಕಾಮೆಂಟೆಟರ್, ಮಾಜಿ ಸಂಸದ ನವಜ್ಯೋತ್ ಸಿಂಗ್ ಸಿಧು ಹಾಗೂ ಅವರ ಪತ್ನಿ ನವಜ್ಯೋತ್ ಕೌರ್ ಅವರು ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಬುಧವಾರ(ಸೆಪ್ಟೆಂಬರ್ 14) ಅಧಿಕೃತವಾಗಿ ತೊರೆದಿದ್ದಾರೆ.

ಸಿಧು ಅವರು ಗುರುವಾರ (ಸೆಪ್ಟೆಂಬರ್ 08)ದಂದು ಹೊಸ ರಾಜಕೀಯ ಪಕ್ಷ ಅವಾಜ್ ಇ ಪಂಜಾಬ್ ಗೆ ನಾಂದಿ ಹಾಡಿದ್ದರು. ಈಗ ಸಿಧು ಅವರ ಪತ್ನಿ ನವಜ್ಯೋತ್ ಕೌರ್ ಅವರು ಪಂಜಾಬಿನ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. [ರಾಜ್ಯಸಭೆಗೆ ಗುಡ್ ಬೈ ಹೇಳಿದ ನವಜ್ಯೋತ್ ಸಿಂಗ್ ಸಿಧು]

Navjot Singh Sidhu and wife Navjot Kaur formally quit BJP

'ನಾನು ಒಬ್ಬ ವ್ಯಕ್ತಿ, ನನ್ನ ವಲಯದ ವಿಷಯಗಳನ್ನು ಮಾತ್ರ ನಾನು ಎತ್ತಿಕೊಳ್ಳುತ್ತಿದ್ದೆ. ಇದಕ್ಕೂ ಪಕ್ಷ ಅವಕಾಶ ನೀಡಲಿಲ್ಲ. ಇದು ಪ್ರಜಾಪ್ರಭುತ್ವವಲ್ಲ, ಸರ್ವಾಧಿಕಾರ. ನಾನು ಸಾಮಾಜಿಕ ವಿಷಯಗಳನ್ನು ಪ್ರಸ್ತಾಪಿಸಿದರೆ ಅದು ಹೇಗೆ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ?' ಎಂದು ರಾಜೀನಾಮೆ ನೀಡಿದ ಬಳಿಕ ನವಜೋತ್ ಕೌರ್ ಸಿಧು ಪ್ರಶ್ನಿಸಿದ್ದಾರೆ.

ಆದರೆ, ಮಾಜಿ ಹಾಕಿ ಕ್ಯಾಪ್ಟನ್ ಪರಗತ್ ಸಿಂಗ್ ಮತ್ತು ಪಂಜಾಬಿನ ಶಾಸಕರಾದ ಸಿಮರ್​ಜಿತ್ ಸಿಂಗ್ ಬೈನ್ಸ್ ಮತ್ತು ಬಲವಂತ ಸಿಂಗ್ ಬೈನ್ಸ ಅವರು ಸಿಧು ಬೆನ್ನಿಗೆ ನಿಂತಿದ್ದಾರೆ. [ನವಜ್ಯೋತ್ ಸಿಧು ಹೊಸ ಇನ್ನಿಂಗ್ಸ್, ಅವಾಜ್ ಇ ಪಂಜಾಬ್ ಪಕ್ಷಕ್ಕೆ ಉದಯ]

ಸಿಧು ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ತಮ್ಮ ಅಮೃತಸರ್ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಬಿಜೆಪಿ ಸಂಸತ್ ಸ್ಥಾನದಿಂದ ಕೆಳಗಿಳಿದಿರುವ ಸಿಧು ಅವರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಸೇರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಜತೆಗೆ ಕಾಂಗ್ರೆಸ್ ನಿಂದಲೂ ಸಿಧುಗೆ ಆಹ್ವಾನ ಬಂದಿತ್ತು. ಆದರೆ, ಇದೆಲ್ಲ ಸುದ್ದಿಯನ್ನು ಬದಿಗೊತ್ತಿ ಅವಾಜ್ ಇ ಪಂಜಾಬ್ ಪರ ಸಿಧು ಬ್ಯಾಟಿಂಗ್ ಆರಂಭಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer-turned-politician Navjot Singh Sidhu's wife Former Bharatiya Janta Party (BJP) MLA, also announced her resignation from the BJP
Please Wait while comments are loading...