ದೇಶಕ್ಕೆ ಸಮರ್ಥ ನಾಯಕತ್ವ ಬೇಕು : ಮೋದಿ
ನವದೆಹಲಿ, ಸೆ.14 : ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹರ್ಯಾಣದಲ್ಲಿ ಭಾನುವಾರ ನಿವೃತ್ತ ಯೋಧರ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಮೂಲಕ ಅಧಿಕೃತವಾಗಿ 2014ರ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.
ತಮ್ಮ ನಿರರ್ಗಳ ಭಾಷಣದಲ್ಲಿ ನರೇಂದ್ರ ಮೋದಿ ಕೇಂದ್ರ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪಾಕಿಸ್ತಾನ ಸೇನೆ ಭಾರತದ ಯೋಧರ ತಲೆ ಕತ್ತರಿಸಿದಾಗ ಮೌನವಹಿಸಿದ್ದ ಸರ್ಕಾರವನ್ನು ಟೀಕಿಸಿದರು. ನಿವೃತ್ತ ಯೋಧರು ಗೌರವ ಪೂರ್ವಕವಾಗಿ ಬಾಳುವಂತಾಗಬೇಕು ಎಂದು ಹೇಳಿದರು.

ಹರ್ಯಾಣದ ರೆವಾರಿ ನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಇವರಲ್ಲಿ ಅರ್ಧದಷ್ಟು ಜನ ಮಾಜಿ ಸೈನಿಕರು ಭಾಗವಹಿಸಿದ್ದು ವಿಶೇಷವಾಗಿತ್ತು. ನಿವೃತ್ತ ಸೇನಾ ಮುಖ್ಯಸ್ಥೆ ವಿ.ಕೆ.ಸಿಂಗ್ ಸಹ ಸಮಾವೇಶದಲ್ಲಿ ಉಪಸ್ಥಿತರಿದ್ದರು.
ಭಾರತದಲ್ಲಿ ಭಯೋತ್ಪಾದನೆ ಮತ್ತು ನಕ್ಸಲ್ ಸಮಸ್ಯೆ ನಿವಾರಣೆ ಸವಾಲಾಗಿ ಪರಿಣಮಿಸಿದೆ. ಅದಕ್ಕಾರಿ ಬಲಿಷ್ಠ ನಾಯಕತ್ವದ ಅಗತ್ಯವಿದೆ. ಕೇಂದ್ರ ಸರ್ಕಾರದ ಮೌನ ಪ್ರತಿಭಟನೆಯಿಂದ ಸಮಸ್ಯೆ ನಿವಾರಣೆಯಾಗಗುವುದಿಲ್ಲ ಎಂದು ಟೀಕಿಸಿದರು.
ಮೋದಿ ಭಾಷಣದ ಮುಖ್ಯಾಂಶಗಳು
* ನಾನು ಪ್ರಧಾನಿ ಅಭ್ಯರ್ಥಿಯಾಗಿದ್ದಕ್ಕಿಂತಲೂ, ಯೋಧರ ಸಮಾವೇಶದಲ್ಲಿ ಪಾಲ್ಗೊಂಡಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ನನಗೆ ಭಾರತೀಯ ಸೇನೆ ಮತ್ತು ಸೈನಿಕರೆಂದರೆ ಆಪಾರ ಗೌರವ. ಸೇನೆಗೆ ಸೇರುವುದು ಅತ್ಯಂತ ಗೌರವದ ವಿಚಾರವಾಗಿದ್ದು, ನಿವೃತ್ತಿ ಬಳಿಕ ಸೈನಿಕರು ಗೌರವದಿಂದ ಜೀವಸುವಂತಾಗಬೇಕು.
* ನಿಜವಾದ ಜಾತ್ಯಾತೀತತೆ ಇರುವುದು ಸೇನೆಯಲ್ಲಿ ಮಾತ್ರ. ಸೇನೆಯಿಂದ ನಾವು ಜಾತ್ಯಾತೀತ ತತ್ವಗಳನ್ನು ಕಲಿಯಬೇಕಿದೆ. ಯೋಧರಿಗೆ ನೀವು ಗೌರವ ಸಲ್ಲಿಸದಿದ್ದರೂ ಪರವಾಗಿಲ್ಲ. ಆದರೆ ಅವರಿಗೆ ಅಪಮಾನ ಮಾಡಬೇಡಿ ಎಂದು ಕರೆ ನೀಡಿದರು.
* ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ಮುಂದೆ ಭಯೋತ್ಪಾದನೆ ನೆರವು ನೀಡುವುದು ಬಿಟ್ಟು, ದೇಶದ ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸುತ್ತದೆ ಎಂಭ ಭರವಸೆ ಇದೆ.
* ಪಾಕ್ ಸೈನಿಕರು ಭಾರತೀಯ ಯೋಧರ ತಲೆ ಕಡಿದಿಲ್ಲ. ಪಾಕ್ ಸೇನೆಯ ಸಮವಸ್ತ್ರ ಧರಿಸಿದವರು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದ ರಕ್ಷಣಾ ಸವಚಿವರ ಹೇಳಿಕೆಯಿಂದ ನೋವಾಗಿದೆ. ಇಂತಹ ಹೇಳಿಕೆ ನೀಡುವ ಮೂಲಕ ಹುತಾತ್ಮರಿಗೆ ಕೇಂದ್ರ ಸರ್ಕಾರ ಅಗೌರವ ಸಲ್ಲಿದೆ.
* ಜ್ಯಾತ್ಯಾತೀತೆಯ ಸೋಗಿನಲ್ಲಿ ಸಮಾಜವನ್ನು ಕೆಲವರು ತುಂಡರಿಸುತ್ತಿದ್ದಾರೆ. ದೇಶದಲ್ಲಿ ವೋಟ್‌ಬ್ಯಾಂಕ್ ರಾಜಕಾರಣ ರಾರಾಜಿಸುತ್ತಿದೆ. ದೇಶಕ್ಕೆ ಪ್ರಬಲ ನಾಯಕತ್ವದ ಅವಶ್ಯತೆ ಇದ್ದು, ನೆರೆಯ ದೇಶಗಳನ್ನು ಹತ್ತಿಕ್ಕಲು ಸಮರ್ಥ ನಾಯಕತ್ವ ಬೇಕು.
* ದೇಶದ ಸೇನಾ ಯೋಧರ ಬಗ್ಗೆ ನನಗೆ ವಿಶೇಷ ಗೌರವವಿದೆ. ಭಾರತೀಯ ಸೇನೆಯನ್ನು ಆಧುನೀಕರಣಗೊಳಿಸಬೇಕು. ಯುವ ತೇಜಸ್ಸುಗಳನ್ನು ಸೇನೆಗೆ ಸೇರಿಸಬೇಕು. ಸೇನೆ ಸೇರುವುದು ದೇಶವಾಸಿಗಳ ಪಾಲಿಗೆ ಗೌರವದ ವಿಚಾರವಾಗಬೇಕು ಎಂದು ಹೇಳಿದರು.
* ಶಸ್ತ್ರಾಸ್ತ್ರಕ್ಕಾಗಿ ನಾವು ವಿದೇಶಗಳನ್ನು ಅವಲಂಭಿಸಿದ್ದೇವೆ. ಪ್ರತಿವರ್ಷ ನಾವು ಶಸ್ತ್ರಾಸ್ತ್ರ ಖರೀದಿಗಾಗಿ ಅಪಾರ ಪ್ರಮಾಣದ ಬಂಡವಾಳವನ್ನು ತೊಡಗಿಸುತ್ತಿದ್ದೇವೆ. ಇದರಿಂದ ದೇಶಕ್ಕೆ ಬಹಳ ನಷ್ಟವಾಗಿ, ಆರ್ಥಿಕವಾಗಿ ಹೊರೆಯಾಗುತ್ತಿದೆ.
* ಭಾರತ ಬೇರೆ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಂತಾಗಬೇಕು. ಭಾರತೀಯ ವಿಜ್ಞಾನಿಗಳು ಹಾರಿಸಿದ ಅಗ್ನಿ-5 ಕ್ಷಿಪಣಿಯ ಪ್ರಾಯೋಗಿಕ ಹಾರಾಟ ಸತತ ಎರಡನೇ ಬಾರಿಗೆ ಯಶಸ್ವಿಯಾಗಿದ್ದು, ಅದರಲ್ಲಿ ಪಾಲ್ಗೊಂಡಿದ್ದ ಎಲ್ಲ ವಿಜ್ಞಾನಿಗಳಿಗೆ ಮೋದಿ ಭಾಷಣದಲ್ಲಿ ಅಭಿನಂದನೆ ಸಲ್ಲಿಸಿದರು.
* ಪಾಕಿಸ್ತಾನ ಮತ್ತು ಚೀನಾ ಗಡಿ ಪ್ರದೇಶಗಳನ್ನು ಒತ್ತಮಾಡಿ ಮಾಡಿಕೊಳ್ಳುತ್ತಿವೆ. ನೆರೆಯ ದೇಶಗಳಿಗೆ ಸರಿಯಾದ ಎಚ್ಚರಿಕೆ ನೀಡದ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯ ಇದಕ್ಕೆ ಕಾರಣ. ಗಡಿಯೊಳಗಿನಿಂದ ದೇಶಕ್ಕೆ ಬರುವ ಭಯೋತ್ಪಾದಕರು ಶಾಂತಿಭಂಗ ಉಂಟು ಮಾಡಿತ್ತಿದ್ದಾರೆ. ದೇಶದ ಪ್ರತಿ ಹಳ್ಳಿಯಲ್ಲೂ ಶಾಂತಿ ನೆಲೆಸಬೇಕು ಎಂದು ನಾವು ಬಯಸುತ್ತೇವೆ. ಆದರೆ, ಕೇಂದ್ರ ಸರ್ಕಾರ ಅಂತಹಕ್ರಮಗಳನ್ನು ಕೈಗೊಂಡಿಲ್ಲ.
* ನಮ್ಮ ದೇಶದಲ್ಲಿ ಯಾವ ಸೈನಿಕರು ದುರ್ಬಲವಾಗಿಲ್ಲ. ಕೇಂದ್ರ ಸರ್ಕಾರ ಅತ್ಯಂತ ದುರ್ಬಲವಾಗಿದೆ. ಆದ್ದರಿಂದ ಕಳೆದ 10 ವರ್ಷಗಳಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ದೇಶಕ್ಕೆ ಯೋಧರ ಕೊಡುಗೆ ಅಪಾರ.












Click it and Unblock the Notifications