Mahua Moitra: ಕೇಂದ್ರ ಸರ್ಕಾರ ಸಂಸದರ 'ಮೊಬೈಲ್-ಇಮೇಲ್ ಹ್ಯಾಕ್' ಮಾಡುತ್ತಿದಿಯೇ?

ನವದೆಹಲಿ, ಅಕ್ಟೋಬರ್ 30: ಕೇಂದ್ರ ಬಿಜೆಪಿ ಸರ್ಕಾರ ತನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ ಅವರು ಆರೋಪ ಮಾಡಿದ್ದಾರೆ. ಈ ಕುರಿತ ಮಾಹಿತಿಯನ್ನು ಅವರು ಮಂಗಳವಾರ ಹಂಚಿಕೊಂಡಿದ್ದಾರೆ.

ತಮ್ ಫೋನ್ ಹ್ಯಾಕ್ ಮಾಡುವ ಪ್ರಯತ್ನ ನಡೆಯುತ್ತಿದೆ. ಆ ಬಗ್ಗೆ ನಾನು ಆಪಲ್‌ ಐಫೋನ್‌ನಿಂದ ಎಚ್ಚರಿಕೆ ಸ್ವೀಕರಿಸಿದ್ದೇನೆ ಎಂದು ಎಚ್ಚರಿಕೆ ಸಂದೇಶದ ಸ್ಕ್ರೀನ್‌ಶಾಟ್‌ಗಳನ್ನು ಸಂಸದೆ ಮಹುವಾ ಮೊಯಿತ್ರಾ ತಮ್ಮ X ನಲ್ಲಿ ಪೋಸ್ಟ್ ಮಾಡಿದ್ದಾರೆ.

tmc-mp-mahua-moitra

ಕೇಂದ್ರ ಸರ್ಕಾರ ನನ್ನ ಫೋನ್ ಮತ್ತು ಇಮೇಲ್ ಅನ್ನು ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ಎಚ್ಚರಿಕೆ ನೀಡುವ ಸಂದೇಶ ಹಾಗೂ ಇಮೇಲ್ ಅನ್ನು ನಾನು ಸ್ವೀಕರಿಸಿದ್ದೇನೆ. ಅದಾನಿಯಂತವರ ಮತ್ತು ಪ್ರಧಾನಮಂತ್ರಿ ಕಚೇರಿಗಳಿಂದ (ಪಿಎಂಒ) ಭಯಗೊಂಡಿದ್ದು, ನೀವೆ ರಕ್ಷಣೆ ಕರುಣಿಸಬೇಕು ಎಂದು ಅವರು ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.

ಸ್ವೀಕೃತ ಸಂದೇಶದಲ್ಲಿ ಏನಿದೆ?

ಐಫೋನ್ ಸಂದೇಶವು 'ಎಚ್ಚರಿಕೆ: ರಾಜ್ಯ ಪ್ರಾಯೋಜಿತ ದಾಳಿಕೋರರು ನಿಮ್ಮ ಐಫೋನ್‌ ಅನ್ನು ಗುರಿಯಾಗಿಸಬಹುದು'' ಎಂಬ ಸಂದೇಶ ಸ್ವೀಕರಿಸಿದ್ದೇವೆ. ಶಿವಸೇನೆ ಸಂಸದ ಪ್ರಿಯಾಂಕಾ ಚತುರ್ವೇದಿ ಮತ್ತು ಇತರ ಕೆಲವು ಭಾರತೀಯ ಮೈತ್ರಿಕೂಟದ ನಾಯಕರಿಗೂ ಇದೇ ರೀತಿ ಎಚ್ಚರಿಕೆಗಳು ಬಂದಿವೆ. ಅಂದರೆ ಅವರ ಫೋನ್ ಸಹ ಹ್ಯಾಕ್ ಮಾಡಲು ಯತ್ನಿಸಲಾಗುತ್ತಿದೆ ಎಂದಬುದು ಇದರಿಂದ ಅರ್ಥವಾಗುತ್ತದೆ ಎಂದು ಮಹುವಾ ತಿಳಿಸಿದ್ದಾರೆ.

tmc-mp-mahua-moitra

ಕಾಂಗ್ರೆಸ್ ಹಿರಿಯ ಸಂಸದ ಶಶಿ ತರೂರ್ ಅವರು ತಮ್ಮ ಫೋನ್ ಮತ್ತು ಇಮೇಲ್ ಅನ್ನು ಗುರಿಯಾಗಿಸಿಕೊಂಡು ಆಪಲ್‌ನಿಂದ ಅದೇ ಎಚ್ಚರಿಕೆಯನ್ನು ನಾನು ಸಹ ಸ್ವೀಕರಿಸಿದ್ದೇನೆ ಎಂದು ಅವರು ಸಹ ಸಾಮಾಜಿಕ ಜಾಲತಾಣ X ನಲ್ಲಿ ಖಚಿತಪಡಿಸಿದ್ದಾರೆ.

ತನಿಖೆ ಎದುರಿಸುತ್ತಿರುವ ಮೊಯಿತ್ರಾ

ತಮ್ಮ ಪೋಸ್ಟ್ ನಲ್ಲಿ ಪಿಎಂಒ ಇಂಡಿಯಾ ಪೇಜ್‌ಗೆ ಟ್ಯಾಗ್ ಮಾಡಿರುವ ತರೂರ್ ಅವರು, ನನ್ನಂತರವರ ತೆರಿಗೆ ಹಣದಲ್ಲಿ ಅಧಿಕಾರಿಗಳನ್ನು ಕಾರ್ಯನಿರತವಾಗಿಟ್ಟಿದ್ದಕ್ಕೆ ಧನ್ಯವಾದಗಳು, ಇದರ ಹೊರತು ನಿಮಗೆ ಮುಖ್ಯವಾದುದು ಏನೂ ಇಲ್ಲವೇ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಸದ್ಯ ನಗದು ವಿಚಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮಹುವಾ ಅವರು ಪ್ರಸ್ತುತ ಸಂಸತ್ತಿನ ನೈತಿಕ ಸಮಿತಿಯಿಂದ ತನಿಖೆ ಎದುರಿಸುತ್ತಿದ್ದಾರೆ. ಉದ್ಯಮಿ ಗೌತಮ್ ಅದಾನಿ ಅವರ ಪರ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದಕ್ಕಾಗಿ ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಜ್ಞೆಯ ಮೇರೆಗೆ ಟಿಎಂಸಿ ನಾಯಕರು ನಗದು ಸ್ವೀಕರಿಸಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+