ಭಾರತೀಯ ಮುಸ್ಲಿಮರು ರಾಮನ ಪರಂಪರೆಯವರು: ಗಿರಿರಾಜ್ ಸಿಂಗ್
ಭಾರತೀಯ ಮುಸ್ಲಿಮರು ರಾಮನ ಪರಂಪರೆಯವರೇ. ಆದ್ದರಿಂದ ರಾಮ ಮಂದಿರ ನಿರ್ಮಾಣಕ್ಕೆ ನೆರವಾಗುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, "ನಾವು ಹಾಗೂ ಮುಸ್ಲಿಮರು ಒಂದೇ ವಂಶಜರು. ಇಲ್ಲಿನ ಮುಸ್ಲಿಮರು ಏನಿದ್ದರೆ ಅವರು ಬಾಬರನ ವಂಶದವರಲ್ಲ, ರಾಮನ ಪರಂಪರೆಯವರು. ನಮ್ಮಿಬ್ಬರ ಧಾರ್ಮಿಕ ಪದ್ಧತಿಗಳು ಬೇರೆ-ಬೇರೆ ಇರಬಹುದು. ಆದರೆ ನಮ್ಮ ಪೂರ್ವಜರು ಒಬ್ಬರೇ" ಎಂದು ಅವರು ತಿಳಿಸಿದರು.

ನಾವು (ಹಿಂದೂಗಳು) ಹಾಗೂ ಮುಸ್ಲಿಮರು ಒಂದೇ ಸಾಲಿನಿಂದ ಬಂದವರು. ಇಲ್ಲಿನ ಯಾವ ಮುಸ್ಲಿಮರು ಬಾಬರನ (ಮೊಘಲ್ ದೊರೆ) ಮಕ್ಕಳಲ್ಲ. ಇಲ್ಲಿನ ಮುಸ್ಲಿಮರು ರಾಮನ ಮಕ್ಕಳು. ನಮ್ಮ ಧಾರ್ಮಿಕ ವಿಧಾನಗಳು ಬೇರೆ ಇರಬಹುದು. ಆದರೆ ನಮ್ಮ ಪೂರ್ವಜರು ಒಬ್ಬರೇ ಎಂದರು.
ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ ಶಿಯಾ ಮುಸ್ಲಿಮರ ಬಗ್ಗೆ ಗಿರಿರಾಜ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದರು. ಸುನ್ನಿ ಮುಸ್ಲಿಮರೂ ಮಂದಿರ ನಿರ್ಮಾಣಕ್ಕೆ ನೆರವಾಗಲು ಮುಂದಾಗಬೇಕು. ನಾವು ಒಂದು ಇಟ್ಟಿಗೆ ಇಟ್ಟರೆ, ಅದೇ ರೀತಿ ಮುಸ್ಲಿಂ ಸಹೋದರರು ಒಂದು ಇಟ್ಟಿಗೆ ಇಡಬೇಕು. ಏಕೆಂದರೆ ನಾವಿದನ್ನು ಮಾಡುತ್ತಿರುವುದು ನಮ್ಮ ಪೂರ್ವಜರಿಗಾಗಿ ಎಂದು ಅವರು ಹೇಳಿದರು.












Click it and Unblock the Notifications