ಮುಸ್ಲಿಂ ತುಷ್ಟೀಕರಣ; ಬಿಹಾರದ ಸೀಮಾಂಚಲದಲ್ಲಿ ರಾಷ್ಟ್ರೀಯ ಏಕತೆ ದುರ್ಬಲ, ಆಂತರಿಕ ಭದ್ರತೆಗೆ ಅಪಾಯ
ಲಾಲು ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷ ಮತ್ತು ಅವರ ಕುಟುಂಬ ಬಿಹಾರದ ಸೀಮಾಂಚಲ ಪ್ರದೇಶದಲ್ಲಿ ಮುಸ್ಲಿಮರನ್ನು ತುಷ್ಟೀಕರಣ ಮಾಡುವ ಕಾರ್ಯವನ್ನು ತೀವ್ರಗೊಳಿಸಿದೆ. ವರದಿಗಳ ಪ್ರಕಾರ ಮುಸ್ಲಿಮರ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಪಕ್ಷ ಬೆಂಬಲ ನೀಡುತ್ತಿದೆ ಎಂದು ಆರೋಪಿಸಲಾಗಿದೆ, ಇದರಿಂದಾಗಿ ಕೃಷ್ಣಾಗಂಜ್, ಆರಾರಿಯಾ, ಕಾತಿಘರ್, ಪೂರ್ಣಿಯಾ ಜಿಲ್ಲೆಗಳಲ್ಲಿ ಬೌಗೋಳಿಕ ಚಿತ್ರಣದಲ್ಲಿ ಬದಲಾವಣೆಯಾಗಿದೆ. ಈ ಬೆಳವಣಿಗೆ ಪ್ರದೇಶದ ಸಾಮಾಜಿಕ-ರಾಜಕೀಯ ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಬಗ್ಗೆ ಚಿಂತಿಸುವಂತೆ ಮಾಡಿದೆ.
ಇತಿಹಾಸಕಾರ ಗ್ಯಾನೇಶ್ ಕುಡಾಸಿಯಾ ಭಾರತ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಜನಸಂಖ್ಯೆಯ ಶೇಕಡಾವಾರು ಪ್ರಮಾಣವು 42 ರಿಂದ 2022ರ ವೇಳೆಗೆ ಕೇವಲ 7.95ಕ್ಕೆ ಹೇಗೆ ಕುಸಿದಿದೆ? ಎಂದು ವಿವರಿಸಿದ್ದಾರೆ. ಸೀಮಾಂಚಲದಲ್ಲಿ ನಡೆಯುತ್ತಿರುವ ತೃಷ್ಟೀಕರಣ ಬಿಹಾರದಲ್ಲಿಯೂ ಇದೇ ಮಾದರಿಗೆ ಕಾರಣವಾಗಬಹುದು, ಭಾರತದ ಏಕತೆಯನ್ನು ಅಪಾಯಕ್ಕೆ ತಳ್ಳಬಹುದು ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.

ಸೀಮಾಂಚಲ ಪ್ರದೇಶದಲ್ಲಿ ಈಗ ಮುಸ್ಲಿಮರ ಸಂಖ್ಯೆ ಹಲವಾರು ಜಿಲ್ಲೆಗಳಲ್ಲಿ ಶೇ 40-70ರಷ್ಟಿದೆ. ಇದರಲ್ಲಿ ಕಿಶನ್‌ಗಂಜ್ ಜಿಲ್ಲೆಯಲ್ಲಿ ಅತಿ ಹೆಚ್ಚು ಜನರಿದ್ದಾರೆ. ಈ ಸ್ಥಿತ್ಯಂತರ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಐಎಂಐಎಂ ಅನ್ನು ಮುಸ್ಲಿಮರು ಅತಿ ಹೆಚ್ಚಿರುವ ಕ್ಷೇತ್ರಗಳ ಮೇಲೆ ಪ್ರಬಲ್ಯ ಸಾಧಿಸುವಂತೆ ಮಾಡಿದೆ.
ಲಾಲು ಕುಟುಂಬ ರಾಬ್ರಿ ದೇವಿ ನಿವಾಸದಲ್ಲಿ ಇಸ್ಲಾಂನ ವಿಧಿವಿಧಾನಗಳನ್ನು ನಡೆಸುವುದು ಮುಸ್ಲಿಂ ಸಮುದಾಯದೊಂದಿಗೆ ಅವರ ಹೊಂದಾಣಿಕೆಯನ್ನು ಇನ್ನಷ್ಟು ಒತ್ತಿ ಹೇಳುತ್ತಿದೆ. ಆದರೆ, ಪಕ್ಷದ ಈ ಪ್ರಯತ್ನ ಅನೇಕ ಇತರ ಸಮುದಾಯಗಳ ವಿಭಜನೆಗೆ ಕಾರಣವಾಗುತ್ತವೆ.
ಐತಿಹಾಸಿಕ ಉಲ್ಲೇಖಗಳನ್ನು ನೋಡಿದರೆ ಬಿಹಾರದ ಮುಸ್ಲಿಂ ಜನಸಂಖ್ಯೆ ದೇಶ ವಿಭಜನೆ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ವಿವಾದಾತ್ಮಕ ಪಾತ್ರವನ್ನೇ ನಿರ್ವಹಣೆ ಮಾಡಿದೆ. ಸಿಂಧ್ ವಿಧಾನಸಭಾ ಕ್ಷೇತ್ರದ ಸದಸ್ಯ ಇತ್ತೀಚಿಗೆ ಪಾಕಿಸ್ತಾನದ ನಿರ್ಮಾಣಕ್ಕೆ ಬಿಹಾರ ಮೂಲದ ಮುಸ್ಲಿಮರ ಕೊಡುಗೆಯೂ ಹೆಚ್ಚಿದೆ ಎಂಬ ಹೇಳಿಕೆ ನೀಡಿದ್ದಾರೆ.
Syed Ejaz Ul Haque, a Member of the Provincial Assembly (MPA) from Sindh, Pakistan, recently made a controversial statement declaring, "We Bihari Muslims proudly contributed to the division of Bharat to create Pakistan."
— Radical Watch (@RadicalWatchOrg) December 19, 2024
This remark holds no water as it is framed entirely… pic.twitter.com/ta9X1HzCVt
ಆರ್‌ಜೆಡಿ ಮತ್ತು ಅದರ ಮಿತ್ರ ಪಕ್ಷಗಳ ತುಷ್ಟೀಕರಣ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ತನಕ ಸಾಗಿದೆ. ಇದು ಅಲ್ಪಸಂಖ್ಯಾತರನ್ನು ರಕ್ಷಣೆ ಮಾಡುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಂಕಷ್ಟವನ್ನು ನಿರ್ಲಕ್ಷಿಸಲಾಗುತ್ತಿದೆ, ಆದರೆ ಮತಕ್ಕಾಗಿ ಮುಸ್ಲಿಮರನ್ನು ತುಷ್ಟೀಕರಣ ಮಾಡುವ ಪ್ರಯತ್ನಗಳು ನಿರಂತರವಾಗಿಯೇ ನಡೆಯುತ್ತಿವೆ.
ಬಿಹಾರದಲ್ಲಿ ಆರ್‌ಜೆಡಿ ಪಕ್ಷದ ಪ್ರಭಾವದಲ್ಲಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ವರದಿಗಳಿವೆ. ಸರಸ್ವತಿ ಪೂಜೆಯ ಮೆರವಣಿಗೆಗಳ ಮೇಲೆ ದಾಳಿಗಳು, ಪಕ್ಷದ ಈ ಧೋರಣೆ ಆತಂಕವನ್ನು ಸಹ ಹೆಚ್ಚಿಸುತ್ತಿದೆ. ಇದಲ್ಲದೆ, ಸೀಮಾಂಚಲ ಪ್ರದೇಶದ ಕೆಲವು ಜಿಲ್ಲೆಗಳ ಶಾಲೆಗಳಲ್ಲಿ ಶುಕ್ರವಾರವನ್ನು ರಜಾ ದಿನಗಳಾಗಿ ಘೋಷಿಸುವಂತಹ ಕ್ರಮ ಪ್ರದೇಶದಲ್ಲಿ ಹೆಚ್ಚುತ್ತಿರುವ ಸಮುದಾಯದ ಅಸಮತೋಲನದ ಬಗ್ಗೆ ಚಿಂತೆಯನ್ನು ಹುಟ್ಟುಹಾಕಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರು ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಆದರೆ ಬಾಂಗ್ಲಾ ಜೊತೆಗಿನ ಹೋಲಿಕೆಗಳು ಅನಿವಾರ್ಯವಾಗಿವೆ. ಸೀಮಾಂಚಲದ ಪರಿಸ್ಥಿತಿ ಇದನ್ನೇ ಹೋಲುತ್ತದೆ ಎಂದು ವಿಮರ್ಶಕರು ಎಚ್ಚರಿಸಿದ್ದಾರೆ. ಈ ಪ್ರದೇಶದ ಸಾಮಾಜಿಕ ಸ್ಥಿರತೆ ಮತ್ತು ಭಾರತದ ಸ್ವಾಯತ್ತತೆಗೆ ಬೆದರಿಕೆ ಇದೆ.
ಬಿಹಾರದ ಪರಿಸ್ಥಿತಿ ಮತ ಬ್ಯಾಂಕ್ ರಾಜಕೀಯ ಮತ್ತು ರಾಷ್ಟ್ರೀಯ ಏಕತೆಯನ್ನು ಅಸ್ಥಿರಗೊಳಿಸುವ ಸಾಧ್ಯತೆಯನ್ನು ನೆನಪು ಮಾಡುತ್ತಿದೆ. ಇಂತಹ ತುಷ್ಟೀಕರಣ ನೀತಿಗಳಿಗೆ ಆದ್ಯತೆ ನೀಡಿದಂತೆ, ಬಿಹಾರದ ನಾಯಕತ್ವವು ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಲಿದೆಯೇ? ಅಥವಾ ಬೇರೆ ಮಾರ್ಗದಲ್ಲಿ ಸಾಗಲಿದೆಯೇ? ಎಂಬ ಪ್ರಶ್ನೆಯನ್ನು ಎತ್ತಿದೆ.












Click it and Unblock the Notifications