Mumbai-London Air India flight: ಅಹಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ
Mumbai-London Air India flight: ಇಂದು (ಜೂನ್ 13) ಬೆಳಗ್ಗೆ ಮುಂಬೈ-ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮತ್ತೆ ಮುಂಬೈಗೆ ವಾಪಾಸ್ ಆಗಿದೆ ಎಂದು ವರದಿಯಾಗಿದೆ. ಗುರುವಾರ (ಜೂನ್ 12) ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತ ದುರಂತದ ನಂತರ ಈ ಬೆಳವಣಿಗೆ ನಡೆದಿದೆ. ಹಾಗಾದರೆ ಇದಕ್ಕೆ ಕಾರಣ ಏನು ಎನ್ನುವ ಮಾಹಿತಿ ತಿಳಿದುಬರಬೇಕಿದೆ.
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ (ಜೂನ್ 12) ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಈ ವೇಳೆ ವಿಮಾನದಲ್ಲಿ ಪ್ರಯಾಣ 242 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅವರೆಲ್ಲರೂ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದರು ಎಂದು ತಿಳಿದುಬಂದಿತ್ತು. ಈ ಘಟನೆ ನಡೆದ ಮಾರನೇ ದಿನವೇ ಅಂದರೆ ಇಂದು ಮುಂಬೈನಿಂದ ಲಂಡರ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮತ್ತೆ ಮುಂಬೈ ವಾಪಾಸ್ ಆಗಿರುವ ಘಟನೆ ನಡೆದಿದೆ.

AI-171 ಏರ್ ಇಂಡಿಯಾ ವಿಮಾನ ಪತನಕ್ಕೆ ಟಾಟಾ ಗ್ರೂಪ್ ಸಂತಾಪವನ್ನು ವ್ಯಕ್ತಪಡಿಸಿದೆ. ಈ ದುರಂತದಲ್ಲಿ ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ಸಾವನ್ನಪ್ಪಿಸಿದ್ದಾರೆ ಎಂದು ಮೂಕಗಳಿಂದ ತಿಳಿದುಬಂದಿದೆ. ಮಾಹಿತಿಯ ಪ್ರಕಾರ ಗುರುವಾರ ಮಧ್ಯಾಹ್ನ ಸುಮಾರು 1:50ಕ್ಕೆ ಈ ದುರಂತ ನಡೆದಿದೆ. ಇನ್ನೂ ಈ ವಿಮಾನದಲ್ಲಿ ಗುಜರಾತಿನ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಪ್ರಯಾಣಿಸುತ್ತಿದ್ದು, ಅವರೂ ಸಾವನ್ನಪ್ಪಿದ್ದಾರೆ ಅಂತಲೂ ತಿಳಿದುಬಂದಿತ್ತು.
ಘಟನೆ ನಡೆಯುತ್ತಿದ್ದಂತೆ ಗುಜರಾತ್ ಸಿಎಂ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ ನಡೆಸಿದ್ದರು. ವಿಮಾನ ಪತನಗೊಳ್ಳುತ್ತಿದ್ದಂತೆಯೇ ದಟ್ಟ ಹೊಗೆ ಆವರಿಸಿಕೊಂಡಿತ್ತು.
48 ಪ್ರಯಾಣಿಕರು ಸಾವು: ಮುಂಬೈ-ಲಂಡನ್ ಕೈರೋ ಮತ್ತು ಜಿನಿವಾ ಮೂಲಕ ಮುಂಬೈನಿಂದ ಲಂಡನ್‌ಗೆ ಹೊರಟಿದ್ದ ಎಲ್ಎಲ್ 749AC ವಿಮಾನ ಮಾಂಟ್ ಬ್ಲ್ಯಾಂಕ್ ಎನ್ನುವಲ್ಲಿ ಪತನಗೊಂಡಿತ್ತು. ನವೆಂಬರ್ 3, 1950ಕ್ಕೆ ಈ ದುರ್ಘಟನೆ ನಡೆದಿತ್ತು. ಈ ವೇಳೆ ವಿಮಾನದಲ್ಲಿದ್ದ ಎಲ್ಲಾ 48 ಪ್ರಯಾಣಿಕರು ಸಾವನ್ನಪ್ಪಿದ್ದರು.
ಮಲಬಾರ್ ಪ್ರಿನ್ಸಸ್ ಎನ್ನುವ ವಿಮಾನ ಇದಾಗಿತ್ತು. ಪ್ರತಿಕೂಲ ಹವಾಮಾನದ ಹಿನ್ನಲೆ ವಿಮಾನ ಪತನಗೊಂಡಿತ್ತು. ಬಾಂಬೆಯ ಸಹರಾ ವಿಮಾನ ನಿಲ್ದಾಣದಿಂದ ಲಂಡನ್ ಹೀತ್ರೋ ವಿಮಾನ ನಿಲ್ದಾಣಕ್ಕೆ ವಿಮಾನ ಪ್ರಯಾಣಿಸುದ್ದಾಗ ಈ ಘಟನೆ ನಡೆದಿತ್ತು.
117 ಪ್ರಯಾಣಿಕರು ಸಾವು: 24 ಜನವರಿ 1966 ಬೆಳಗ್ಗೆ 8 ಗಂಟೆಗೆ, ಬಾಂಬೆಯಿಂದ ಲಂಡನ್ ಹೀತ್ರೋ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿತ್ತು. ಜಿನಿವಾ ಮೂಲಕ ಬೋಯಿಂಗ್ 707-437, ಫ್ರಾನ್ಸ್ ದೇಶದಲ್ಲಿ ಪತನಗೊಂಡಿತ್ತು. ಇದರಲ್ಲಿ 117 ಪ್ರಯಾಣಿಕರು ಸಾವನ್ನಪ್ಪಿದ್ದರು. ಈ ವಿಮಾನ ದುರಂತದಲ್ಲಿ ಅಟೋಮಿಕ್ ಎನರ್ಜಿ ಕಮಿಷನ್ ಆಫ್ ಇಂಡಿಯಾದ ಸಂಸ್ಥಾಪಕ ಡಾ. ಹೊಮಿ ಜಹಾಂಗೀರ್ ಬಾಬಾ ಕೂಡಾ ಸಾವನ್ನಪ್ಪುತ್ತಾರೆ.
213 ಪ್ರಯಾಣಿಕರು ಸಾವು: ಏರ್ ಇಂಡಿಯಾ 855 ವಿಮಾನವು ಬಾಂಬೆಯಿಂದ ದುಬೈಗೆ ಪ್ರಯಾಣಿಸುತ್ತಿತ್ತು. 1978ರ ಹೊಸ ವರ್ಷದ ದಿನದಂದೇ ನಡೆದಿದ್ದ ಈ ದುರಂತದಲ್ಲಿ 213 ಪ್ರಯಾಣಿಕರು ಸಾವನ್ನಪ್ಪಿದ್ದರು. ಟೇಕ್ ಆಫ್ ಆದ ಎರಡೇ ನಿಮಿಷದಲ್ಲಿ ವಿಮಾನವು ಬಾಂದ್ರಾದಲ್ಲಿ ಅರಬ್ಬೀ ಸಮುದ್ರಕ್ಕೆ ಪತನಗೊಂಡಿತ್ತು. ಎಂಪರರ್ ಅಶೋಕ ಎನ್ನುವ ಹೆಸರನ್ನು ಈ ವಿಮಾನಕ್ಕೆ ಇಡಲಾಯಿತ್ತು.
-
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications