5 ದಿನದಲ್ಲಿ ಕೇರಳಕ್ಕೆ ನೈಋತ್ಯ ಮಾನ್ಸೂನ್: ಕರ್ನಾಟಕಕ್ಕೂ ಮಳೆ ಭರ್ಜರಿ ಗುಡ್‌ನ್ಯೂಸ್‌! Monsoon Rain in Karnataka

Monsoon Rain in Karnataka: ಬೆಂಗಳೂರು ಹಾಗೂ ಕರ್ನಾಟಕದ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರ ನಡುವೆ ನೈಋತ್ಯ ಮಾನ್ಸೂನ್‌ಗೆ ಸಂಬಂಧಿಸಿದಂತೆ ಭಾರತೀಯ ಹವಾಮಾನ ಇಲಾಖೆಯು ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ಅವಧಿಗೂ ಮುಂಚೆ ಈ ಬಾರಿ ರಾಜ್ಯಕ್ಕೆ ಮಾನ್ಸೂನ್‌ ಪ್ರವೇಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ. ಕರ್ನಾಟಕದ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿಯುತ್ತಿರುವ ಸಂದರ್ಭದಲ್ಲೇ ಐಎಂಡಿ ಗುಡ್‌ನ್ಯೂಸ್‌ ನೀಡಿದೆ. ಕರ್ನಾಟಕಕ್ಕೆ ಯಾವಾಗ ಮಾನ್ಸೂನ್ ಪ್ರವೇಶಿಸಲಿದೆ ಹಾಗೂ ದೇಶದ ಯಾವೆಲ್ಲಾ ಭಾಗದಲ್ಲಿ ಮಳೆಯಾಗುತ್ತಿದೆ ಎನ್ನುವ ವಿವರ ನೋಡೋಣ.

ಕರ್ನಾಟಕಕ್ಕೆ ಈ ಬಾರಿ ಮಾನ್ಸೂನ್ ಅವಧಿ ಪೂರ್ವ ಎಂಟ್ರಿ ಕೊಡಲಿದೆ ಎಂದು ಐಎಂಡಿ ರಿಪೋರ್ಟ್ ಉಲ್ಲೇಖಿಸಿದೆ. ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ನೈಋತ್ಯ ಮಾನ್ಸೂನ್ ಮೊದಲು ಕೇರಳಕ್ಕೆ ಪ್ರವೇಶ ಕೊಟ್ಟ ನಂತರ ಬರುತ್ತದೆ. ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ನೈಋತ್ಯ ಮಾನ್ಸೂನ್‌ ಕೇರಳಕ್ಕೆ ಬರುವುದು ವಾಡಿಕೆ. ಕೇರಳಕ್ಕೆ ಬಂದ 7ರಿಂದ 10 ದಿನಗಳಲ್ಲಿ ನೈಋತ್ಯ ಕರ್ನಾಟಕಕ್ಕೆ ಪ್ರವೇಶಿಸುತ್ತದೆ. ಆದರೆ, ಈ ಬಾರಿ ಅವಧಿ ಪೂರ್ವ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.

Monsoon Rain in Karnataka Southwest Monsoon to hit Kerala in 5 days Good news for Karnataka too

ಭಾರತ ಹವಾಮಾನ ಇಲಾಖೆ (IMD)ಯ ಪ್ರಕಾರ, ಕೇರಳಕ್ಕೆ ನೈಋತ್ಯ ಮಾನ್ಸೂನ್ ಅವಧಿ ಪೂರ್ವ ಬರಲಿದೆ. ಮೇ 27ರ ವೇಳೆಗೆ ನೈರುತ್ಯ ಮಾನ್ಸೂನ್ ಪ್ರವೇಶಿಸಲಿದೆ ಎಂದು ಹೇಳಲಾಗಿದೆ. ಇನ್ನು 2009ರಲ್ಲಿ ಮೇ 23ಕ್ಕೆ ನೈಋತ್ಯ ಮಾನ್ಸೂನ್‌ ಪ್ರವೇಶಿಸಿತ್ತು. ಇದಾದ ನಂತರ ಅವಧಿ ಪೂರ್ವ ಮಾನ್ಸೂನ್‌ ಪ್ರವೇಶ ವಿರಳವಾಗಿತ್ತು. ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮಾನ್ಸೂನ್ ಮಳೆ ಇರಲಿದೆ. ಈ ಬಾರಿ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಸಾಮಾನ್ಯ ಮಳೆಗಿಂತ ಹೆಚ್ಚಿನ ಮಳೆ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

ಈಗಾಗಲೇ ಮುಂಗಾರು ಪೂರ್ವ ಮಳೆಗೆ ರಾಜ್ಯದಲ್ಲಿ ಅವಾಂತರ ಸೃಷ್ಟಿಯಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಹೇಗಿರಲಿದೆ ಎನ್ನುವ ಸಣ್ಣ ಆತಂಕವೂ ಸಹ ಐಎಂಡಿ ರಿಪೋರ್ಟ್‌ನಿಂದ ಎದುರಾಗಿದೆ. ಈ ಬಾರಿ ಅವಧಿ ಪೂರ್ವ ಮಾನ್ಸೂನ್‌ ಮಾತ್ರವಲ್ಲ ಸರಾಸರಿಗಿಂತ ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ.

Monsoon Rain in Karnataka Southwest Monsoon to hit Kerala in 5 days Good news for Karnataka too

ದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ!

ಇನ್ನು ಮಂಗಳವಾರದಿಂದ ದೇಶದ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗದಲ್ಲಿ ಮಿಂಚು ಗುಡುಗು ಸಹಿತ ಧಾರಾಕಾರ ಮಳೆ ಮುಂದುವರಿದಿದೆ. ದಕ್ಷಿಣ ಭಾರತದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಮಧ್ಯ ಭಾರತದ ಭಾಗದಲ್ಲೂ ಮಳೆ ಮುಂದುವರಿದಿದೆ.

ಮುಂಬೈನಲ್ಲೂ ಧಾರಾಕಾರ ಮಳೆ ಮುಂದುವರಿದಿದೆ. ಮುಂಬೈ, ಥಾಣೆ, ರಾಯಗಢ ಸೇರಿದಂತೆ ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು. ನಾಳೆಯೂ ಈ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಉಳಿದಂತೆ ದೇಶದ ವಿವಿಧ ಭಾಗದಲ್ಲಿ ಮಳೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+