• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಥಳೀಯ ಭಾಷೆಯಲ್ಲಿ ಮೆಡಿಕಲ್ ಕಲಿಕೆಗೆ ಆಸ್ಪದ, ಮೋದಿ ಕನಸು

|

ಸೋನಿತ್ ಪುರ್, ಫೆಬ್ರವರಿ 7: ಪ್ರಧಾನಿ ಮೋದಿ ಅವರು ಫೆಬ್ರವರಿ 7ರಂದು ಅಸ್ಸಾಂನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಚುನಾವಣೆ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಎರಡು ಮೆಡಿಕಲ್ ಕಾಲೇಜುಗಳಿಗೆ ಶಂಕುಸ್ಥಾಪನೆ ಮಾಡಿದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಕನಸನ್ನು ತೆರೆದಿಟ್ಟರು.

ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದರೆ ತಾಯ್ನುಡಿಯಲ್ಲಿ ಮೆಡಿಕಲ್ ಹಾಗೂ ತಾಂತ್ರಿಕ ಪಠ್ಯ ವಿಷಯಗಳ ಕಲಿಕೆಗೆ ಸೂಕ್ತ ವೇದಿಕೆ ಒದಗಿಸುವುದಾಗಿ ಮೋದಿ ಘೋಷಿಸಿದರು. ಜೊತೆಗೆ ದೇಶದ ಪ್ರತಿ ರಾಜ್ಯಗಳಲ್ಲೂ ಕನಿಷ್ಠ ಮೆಡಿಕಲ್ ಕಾಲೇಜ್ ಹಾಗೂ ತಾಂತ್ರಿಕ ಕಾಲೇಜುಗಳನ್ನು ಸ್ಥಳೀಯ ಭಾಷೆಗಳಲ್ಲಿ ಕಲಿಸಲು ಅವಕಾಶ ಒದಗಿಸುವುದು ನನ್ನ ಬಹುಕಾಲದ ಕನಸು ಎಂದು ಅಸ್ಸಾಂನ ಸೋನಿತ್ ಪುರ್ ನಲ್ಲಿ ಮೋದಿ ಹೇಳಿದರು.

ಮೋದಿ ಅವರು ಛಾರಾಯಿದಿಯೋ ಹಾಗೂ ಬಿಸ್ವನಾಥ್ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಭೂಮಿ ಪೂಜೆ ನೆರವೇರಿಸಿದರು. ನಂತರ ಅಸ್ಸಾಂ ಮಾಲಾ ಯೋಜನೆಯಡಿಯಲ್ಲಿ ಹೆದ್ದಾರಿ ಮೇಲ್ದರ್ಜೆಗೇರಿಸಲು ಚಾಲನೆ ನೀಡಿದರು.

ಸುಮಾರು 15 ವರ್ಷ ಅವಧಿಯ ಈ ಯೋಜನೆಯು 5,000 ಕೋಟಿ ರು ವೆಚ್ಚದ್ದಾಗಿದ್ದು, ಆರಂಭಿಕ ಹಂತದಲ್ಲಿ 2,500 ಕಿ.ಮೀ ಕಾಮಗಾರಿ ಪೂರೈಸಲಾಗುತ್ತದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ಜೊತೆಗೆ ಅಸ್ಸಾಂ ಕೂಡಾ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿದೆ.ಮಾರ್ಚ್ -ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು ಬಿಜೆಪಿ ತನ್ನ ಪ್ರಚಾರವನ್ನು ಬಿರುಸುಗೊಳಿಸಿದೆ.

ಚಹಾ ತೋಟದ ಕಾರ್ಮಿಕರ ಬ್ಯಾಂಕ್ ಖಾತೆಗೆ ತಲಾ 3,000 ಹಣ ತುಂಬುವ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಅವರು ಚಾಲನೆ ನೀಡಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲೂ ಘೋಷಣೆಯಾಗಿದೆ. ಸುಮಾರು 8 ಲಕ್ಷ ಕಾರ್ಮಿಕರಿಗೆ ಇದರಿಂದ ಲಾಭವಾಗಲಿದೆ.

English summary
Assam Elections 2021: I promise to people of Assam that when we come to power after the election, we will establish a medical and technical college in local language said PM Narendra Modi in Assam's Sonitpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X