ಪೆರಿಯಾರ್ ವಿಗ್ರಹ ಧ್ವಂಸವನ್ನು ಕಟುವಾಗಿ ಖಂಡಿಸಿದ ಮೋದಿ
ನವದೆಹಲಿ, ಮಾರ್ಚ್ 07: ತ್ರಿಪುರ ಮತ್ತು ತಮಿಳುನಾಡಿನಲ್ಲಿ ನಡೆದ ವಿಗ್ರಹ ಧ್ವಂಸ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದಾರೆ ಎಂದು ಗ್ರಹ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತದ ಕೆಲವು ಕಡೆಗಳಲ್ಲಿ ವಿಗ್ರಹ ಧ್ವಂಸದ ಪ್ರಕರಣಗಳು ಕೇಳಿಬರುತ್ತಿವೆ. ಈ ಪ್ರಕರಣವನ್ನು ಗ್ರಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಗ್ರಹ ಸಚಿವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾತುಕತೆ ನಡೆಸಿದ್ದಾರೆ. ಮೋದಿಯವರು ಈ ಪ್ರಕರಣವನ್ನು ಕಟು ಶಬ್ದಗಳಿಂದ ವಿರೋಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ(ಮಾ.6) ತ್ರಿಪುರದಲ್ಲಿ ರಷ್ಯಾದ ಕ್ರಾಂತಿಕಾರಿ ಲೆನಿನ್ ವಿಗ್ರಹ ಮತ್ತು ತಮಿಳುನಾಡಿನ ವೆಲ್ಲೂರಿನಲ್ಲಿ ಮಾಜಿಕ ಹೋರಾಟಗಾರ, ಪೆರಿಯಾರ್ ಎಂದೇ ಪ್ರಸಿದ್ಧರಾದ ಇವಿಆರ್ ರಾಮಸಾಮಿ ಅವರ ವಿಗ್ರಹವನ್ನು ಧ್ವಂಸಗೊಳಿಸಲಾಗಿತ್ತು. ತ್ರಿಪುರದಲ್ಲಿ ಬಿಜೆಪಿ ಕಾರರ್ಯಕರ್ತರೇ ವಿಗ್ರಹ ಧ್ವಂಸ ಮಾಡಿದ್ದಾರೆಂಬುದು ಸಾಬೀತಾಗಿದ್ದು, ತಮಿಳುನಾಡಿನಲ್ಲೂ ಈ ಕೆಲಸ ಮಾಡಿದ್ದು ಬಿಜೆಪಿ ಸದಸ್ಯರೇ ಎಂಬ ಶಂಕೆ ದಟ್ಟವಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಮತ್ತು ಕಮ್ಯುನಿಸ್ಟ್ ಪಕ್ಷದ ಅವಸಾನದ ನಂತರ ಈ ಬೆಳವಣಿಗೆಗಳು ಕಂಡುಬರುತ್ತಿವೆ.
ಪೆರಿಯಾರ್ ವಿಗ್ರಹ ಧ್ವಂಸಕ್ಕೆ ಪ್ರತೀಕಾರ ಎಂಬಂತೆ ಇಂದು ತಮಿಳುನಾಡಿನ ಕೋಯಿಮತ್ತೂರಿನಲ್ಲಿರುವ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿಯಾಗಿದ್ದನ್ನು ಇಲ್ಲಿ ಉಲ್ಲೆಖಿಸಬಹುದು.












Click it and Unblock the Notifications