ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಬಾಲ ಗೋರಕ್ಷಕನ ಬಂಧನ

ಮುಂಬೈ, ಏಪ್ರಿಲ್‌ 11: ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್‌ಗೆ ಫೋನ್ ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಮಂಗಳವಾರ ಅಪ್ರಾಪ್ತನೊಬ್ಬನನ್ನು ಬಂಧಿಸಿದ್ದಾರೆ.

ಏಪ್ರಿಲ್ 10 ರಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆದರಿಕೆ ಕರೆ ಬಂದಿದೆ ಎಂದು ಮುಂಬೈ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕರೆ ಮಾಡಿದವರು ರಾಜಸ್ಥಾನದ ಜೋಧ್‌ಪುರದ ರಾಕಿ ಭಾಯ್ ಎಂದು ಗುರುತಿಸಿಕೊಂಡಿದ್ದು, ತಾನು ಗೌ ರಕ್ಷಕ (ಹಸು ರಕ್ಷಕ) ಎಂದು ಹೇಳಿಕೊಂಡಿದ್ದಾನೆ. ಏಪ್ರಿಲ್ 30 ರಂದು ಕರೆ ಮಾಡಿದ್ದ ಅವನು ಸಲ್ಮಾನ್ ಖಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು.

Minor cow vigilante Arrest who threatened to kill Salman Khan

ಈ ಹಿನ್ನೆಲೆಯಲ್ಲಿ ಕರೆ ಮಾಡಿದವನು ಅಪ್ರಾಪ್ತ ವಯಸ್ಕ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಈಗಿರುವಂತೆ, ಕರೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ನಾವು ಭಾವಿಸುತ್ತೇವೆ. ಆದರೆ ಬಾಲಕನು ಏಕೆ ಈ ರೀತಿ ವರ್ತಿಸಿದನು ಎಂಬುದನ್ನು ನಾವು ತನಿಖೆ ಮಾಡುತ್ತಿದ್ದೇವೆ" ಎಂದು ಅಧಿಕಾರಿಯೊಬ್ಬರು ಹೇಳಿದರು.

ಮಾರ್ಚ್ 26 ರಂದು, ಸಲ್ಮಾನ್‌ಗೆ ಬೆದರಿಕೆ ಮೇಲ್ ಕಳುಹಿಸಿದ್ದಕ್ಕಾಗಿ ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಯಿತು. ಆತನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯು ತನ್ನ ಮೇಲ್‌ನಲ್ಲಿ, ಸಲ್ಮಾನ್‌ ಖಾನ್‌ಗೆ ಸಿಧು ಮೂಸೆವಾಲಾನ ರೀತಿ ಪರಿಣಾಮ ಎದುರಿಸುತ್ತಾನೆ ಎಂದು ಧಮಕಿ ಹಾಕಿದ್ದನು.

"ಸಲ್ಮಾನ್ ಖಾನ್ ಅವರನ್ನು ಕೊಲ್ಲುವ ಇಮೇಲ್ ಬೆದರಿಕೆಗೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬೈ ಪೊಲೀಸರು ಮತ್ತು ಲುನಿ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್‌ನನ್ನು ಹಿಡಿದಿವೆ" ಎಂದು ಜೋಧಪುರದ ಲುನಿ ಪೊಲೀಸ್ ಠಾಣೆಯ ಅಧಿಕಾರಿ ಈಶ್ವರ್ ಚಂದ್ ಪರೀಕ್ ಎಎನ್‌ಐಗೆ ತಿಳಿಸಿದ್ದಾರೆ.

Minor cow vigilante Arrest who threatened to kill Salman Khan

ಬೆದರಿಕೆ ಗ್ರಹಿಕೆಗಳನ್ನು ನಿರ್ಣಯಿಸಿದ ನಂತರ ಮುಂಬೈ ಪೊಲೀಸರು ಖಾನ್‌ಗೆ Y+ ವರ್ಗದ ಭದ್ರತೆಯನ್ನು ಒದಗಿಸಿದ್ದಾರೆ. ನಟ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಪತ್ರ ಬಂದ ನಂತರ ಮಹಾರಾಷ್ಟ್ರ ಸರ್ಕಾರ ಸೂಪರ್‌ಸ್ಟಾರ್‌ಗೆ ಭದ್ರತಾ ಬೆಂಗಾವಲುಗಳನ್ನು ನಿಯೋಜಿಸಿದೆ. ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್‌ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದರು.

ಬಾಲಿವುಡ್ ಸೂಪರ್‌ಸ್ಟಾರ್‌ಗೆ ಇತ್ತೀಚೆಗೆ ಹಲವಾರು ಬೆದರಿಕೆಗಳು ಬಂದಿದ್ದವು. ಇದೀಗ ದಬಾಂಗ್ ನಟನಿಗೆ ಮತ್ತೊಂದು ಕೊಲೆ ಬೆದರಿಕೆ ಬಂದಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 10 ರಂದು ರಾತ್ರಿ 9 ಗಂಟೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ ಬಂದಿದೆ. ಆರಂಭದಲ್ಲಿ ಕರೆ ಮಾಡಿದವರ ಗುರುತು ಪತ್ತೆಯಾಗಿರಲಿಲ್ಲ. ಸದ್ಯ ಪೊಲೀಸರು ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯ ಗುರುತು ಪತ್ತೆ ಮಾಡಿ ಕೊನೆಗೆ ಅವನನ್ನು ಬಂಧಿಸಿದ್ದಾರೆ.

ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ ಅವರಿಗೆ ಈ ಹಿಂದೆ ಬೆದರಿಕೆ ಇ-ಮೇಲ್ ಬಂದಿತ್ತು. ಈ ಬೆದರಿಕೆ ಇ-ಮೇಲ್ ಅನ್ನು ಪಾತಕಿ ಗೋಲ್ಡಿ ಬ್ರಾರ್ನ ಆಪ್ತ ಮೋಹಿತ್ ಗರ್ಗ್ ಕಳಿಸಿದ್ದಾನೆ ಎನ್ನಲಾಗಿದೆ. ಮೋಹಿತ್ ಗಾರ್ಗ್ ಕಳುಹಿಸಿದ ಇಮೇಲ್ ನಲ್ಲಿ, "ಗೋಲ್ಡಿ ಬ್ರಾರ್ನ ನಿನ್ನ ಬಾಸ್ (ಸಲ್ಮಾನ್ ಖಾನ್) ಜೊತೆ ಮಾತನಾಡಬೇಕಂತೆ. ಲಾರೆನ್ಸ್ ನ ಸಂದರ್ಶನ ನೋಡಿಯೇ ಇರಬೇಕು ಅವನು. ಸಂದರ್ಶನ ನೋಡಿಲ್ಲ ಎಂದಾದರೆ ತೋರಿಸು ಅವನಿಗೆ. ಈ ವಿಷಯ ಇಲ್ಲಿಗೆ ಮುಗಿಸಬೇಕು ಎಂದರೆ ಗೋಲ್ಡಿ ಬ್ರಾರ್ನ ಜೊತೆ ಮಾತಾಡಲು ಹೇಳು.'' ಎಂದು ಹೇಳಿ ಬರೆಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+