ಹಿಂದು ಮಹಾಸಾಗರದ ಅಲೆಗೆ ಸಿಕ್ಕ ಅಭಿಲಾಶ್ ರಕ್ಷಣೆಗೆ ಶತಪ್ರಯತ್ನ
ಕೊಚ್ಚಿ, ಸೆಪ್ಟೆಂಬರ್ 22: ಹಿಂದು ಮಹಾಸಾಗರದಲ್ಲಿ ನಡೆಯುತ್ತಿರುವ ಗೋಲ್ಡ್ ನ ಗ್ಲೋಬ್ ರೇಸ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಅಭಿಲಾಶ್ ಟಾಮಿ ಅವರು ಬಲವಾದ ಅಲೆಗಳ ಹೊಡತಕ್ಕೆ ಸಿಕ್ಕಿದ್ದು, ಅವರ ರಕ್ಷಣಾ ಕಾರ್ಯ ನಡೆಯುತ್ತಿದೆ.
ಭಾರತೀಯ ನೌಕಾಸೇನೆಯ ಕಮಾಂಡರ್ ಆಗಿರುವ ಅಭಿಲಾಶ್ ಅವರ ಹಾಯಿದೋಣಿ 'ಥುರಿಯಾ' ಬಲವಾದ ಅಲೆಗೆ ಸಿಕ್ಕ ಪರಿಣಾಮ ದೋಣಿಯ ಹಿಂಭಾಗ ಜಖಂಗೊಂಡಿತ್ತು. ಅಲೆಯ ರಭಸ ಅವರನ್ನು ಬಹು ದೂರಕ್ಕೆ ಎಸೆದಿರುವ ಸಂಭವವಿದ್ದು, ಅವರು ಆಸ್ಟ್ರೇಲಿಯದ ಪರ್ಥ್ ಬಳಿ ಸಿಕ್ಕಿಹಾಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.
Rescue efforts led by Australian Defence Forces are underway off Perth to find 39-year old Indian Golden Globe Race skipper Abhilash Tomy. He is a serving Indian Naval Flying Officer. Golden Globe Race is a sailing race around the world that started on 1 July from France. pic.twitter.com/3tsgTGaBr9
— ANI (@ANI) September 22, 2018
ಭಾರತೀಯ ಸೇನೆಯೂ ರಕ್ಷಣಾ ಕಾರ್ಯಕ್ಕೆ ಸಿಬ್ಬಂದಿಗಳನ್ನು ಕಳಿಸಿದ್ದು, ಆಸ್ಟ್ರೇಲಿಯಾ ಸರ್ಕಾರವೂ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಅತಿಯಾದ ಗಾಳಿ ಮತ್ತು ಅಲೆಯ ರಭಸಕ್ಕೆ ಅವರು ಯಾವುದೋ ದೂರದ ಸ್ಥಳಕ್ಕೆ ಹೋಗಿ ಬಿದ್ದಿದ್ದಾರೆ. 39 ವರ್ಷ ವಯಸ್ಸಿನ ಅಭಿಲಾಶ್ ಅವರ ಏಕಾಂಗಿಯಾಗಿ ಸ್ಪರ್ಧಿಸುತ್ತಿರುವ ಎರಡನೆಯ ಹಾಯಿದೋಣಿ ಸ್ಪರ್ಧೆ ಇದಾಗಿದೆ.

2013 ರಲ್ಲಿ ಹಾಯಿದೋಣಿಯ ಮೂಲಕ ವಿಶ್ವ ಪರ್ಯಟನೆ ಮಾಡಿದ ಏಕೈಕ ಭಾರತೀಯ ಎಂಬ ಕೀರ್ತಿಗೆ ಅಭಿಲಾಶ್ ಪಾತ್ರರಾಗಿದ್ದಾರೆ.












Click it and Unblock the Notifications