ಎಷ್ಟು ಕಾರ್ಮಿಕ ದಿನಾಚರಣೆಗಳು ಬಂದರೂ ಕಾರ್ಮಿಕನ ಬದುಕು ಹೀಗೆಯೇ!
ನವದೆಹಲಿ, ಮೇ.2: ವಿಶ್ವದ ಎಲ್ಲಾ ಶ್ರಮಜೀವಿಗಳನ್ನು ನೆನೆದು ವಿಶ್ವ ಕಾರ್ಮಿಕ ದಿನವನ್ನು ಆಚರಣೆಯೇನೋ ಮಾಡುತ್ತೇವೆ. ಆದರೆ ಕಾರ್ಮಿಕರು ಯಾವ ಸ್ಥಿತಿಯಲ್ಲಿದ್ದಾರೆ. ಅವರ ಕಷ್ಟಗಳೇನು ಎಂದು ನೋಡಿದಾಗ ಕಣ್ಣಿಂದ ನೀರು ಬರದೆ ಇರಲಾರದು.
ಅವರ ಹಕ್ಕನ್ನು ದಕ್ಕಿಸಿಕೊಡಲು ಎಷ್ಟು ಜನ ಪ್ರಯತ್ನ ಪಡುತ್ತಿದ್ದಾರೆ ?ಇಡೀ ದಿನ ದಣಿವೆನ್ನದೆ ದುಡಿದು, ರಾತ್ರಿ ವಿಶ್ರಾಂತಿಗೆ ಜಾಗವಿಲ್ಲದೆ, ತಿನ್ನಲು ಮೂರು ಹೊತ್ತು ಊಟವಿಲ್ಲದೆ ಅಲೆದಾಡುವ ಕಾರ್ಮಿಕರನ್ನೂ ನೋಡಿದ್ದೇವೆ. ಕೇವಲ ಕಾರ್ಮಿಕ ದಿನಾಚರಣೆ ಆಚರಣೆಗಷ್ಟೇ ಸೀಮಿತವಾಯಿತೇ, ಅವರ ಪರವಾಗಿ ನಮ್ಮ ಮನಸ್ಸಿನಲ್ಲಿ ಯಾವುದೇ ಭಾವನೆಗಳಿಲ್ಲವೇ?
ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ 1889 ಮೇ 1 ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ ಓವೆನ್ ಸೂಚಿಸಿದ್ದ. 1889ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ 1 ನೇ ದಿನಾಂಕವನ್ನು ರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಆಚರಿಸಬೇಕೆಂದು ನಿರ್ಧರಿಸಲಾಯಿತು.
ಈ ದಿನದ ಆಚರಣೆಯ ಮೂಲ ಇರುವುದು ಅಮೆರಿಕಾದಲ್ಲಿ 19ನೇ ಶತಮಾನದಲ್ಲಿ ನಡೆದ ಕಾರ್ಮಿಕ ಚಳವಳಿಗಳಲ್ಲಿ. ಕೆಲಸದ ಅವಧಿಯನ್ನು ದಿನಕ್ಕೆ 8 ಗಂಟೆ ನಿಗದಿ ಪಡಿಸಲು, ದುಡಿಯುವ ಪರಿಸರದಲ್ಲಿ ಮೂಲಸೌಕರ್ಯ ಒದಗಿಸಲು ಮತ್ತು ಕಾರ್ಮಿಕರ ಹಿತರಕ್ಷಣೆ ಕಾನೂನುಗಳನ್ನು ರೂಪಿಸಲು ಪಟ್ಟುಹಿಡಿದ ಕಾರ್ಮಿಕ ಒಕ್ಕೂಟದ ಸದಸ್ಯರು, ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಧರಣಿ ಹೂಡಿದ್ದರು.
ಭಾರತದಲ್ಲಿ ಮೇ ದಿನವೇ ಕಾರ್ಮಿಕರ ದಿನ. 20 ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘ ಚಳುವಳಿಯ ಪ್ರಭಾವ ಹೆಚ್ಚಿಸಿದಾಗಿನಿಂದ ಇದರ ಆಚರಣೆ ಆರಂಭವಾಯಿತು.
ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನೊಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.
ದಿನದ 24 ಗಂಟೆಗಳಲ್ಲಿ 8 ಗಂಟೆ ಕೆಲಸಕ್ಕೆ, 8 ಗಂಟೆ ಮನೋಲ್ಲಾಸಕ್ಕೆ ಮತ್ತು 8 ಗಂಟೆ ವಿಶ್ರಾಂತಿಗೆ ಮೀಸಲಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯವಾಗಿತ್ತು. ಭಾರತದಲ್ಲಿ 1923 ಮೇ 1ರಂದು ಚೆನ್ನೈನಲ್ಲಿ(ಮದ್ರಾಸ್) ಮೊದಲಿಗೆ ಈ ದಿನ ಆಚರಿಸಲಾಯಿತು. ಅಂದಿನ ಹಿಂದೂಸ್ತಾನ್ ಕಿಸಾನ್ ಪಕ್ಷವು ಈ ಆಚರಣೆಗೆ ನಾಂದಿಹಾಡಿತು.
ಈ ದಿನವನ್ನು ರಾಷ್ಟ್ರೀಯ ರಜಾ ದಿನವೆಂದು ಘೋಷಿಸಲು ಪಕ್ಷವು ಅಂದೇ ಒತ್ತಾಯಿಸಿತ್ತು. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಮೇ 1ನ್ನು ಕಾರ್ಮಿಕ ದಿನಾಚರಣ ಪ್ರಯುಕ್ತ ಸಾರ್ವಜನಿಕ ರಜೆ ಇರುತ್ತದೆ. 1923ರ ಇದೇ ದಿನದಂದು, ಲೇಬರ್ ಕಿಸಾನ್ ಪಕ್ಷ ಮೊದಲ ಬಾರಿಗೆ ಭಾರತದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಿತ್ತು.
ವಿವಿಧ ವೃತ್ತಿರಂಗದ ಕಾರ್ಮಿಕರು ಬಳಸುವ ಸಲಕರಣೆ-ಸಾಧನಗಳ ಚಿತ್ರಗಳನ್ನು ಡೂಡಲ್‌ನಲ್ಲಿ ಬಿಂಬಿಸಿದೆ. ಕಾರ್ಮಿಕರಿಗೆ ಗೌರವ ಸೂಚಕವಾಗಿ ಆಚರಿಸುವ ಈ ದಿನಕ್ಕೆ 'ಮೇ ಡೇ' ಎಂತಲೂ ಕರೆಯುತ್ತಾರೆ.

ಕಾಂಕ್ರೀಟ್ ಸ್ಲ್ಯಾಬ್ ಈ ಕಾರ್ಮಿಕನಿಗೆ ಆಶ್ರಯ ತಾಣ
ವಿಶ್ವ ಕಾರ್ಮಿಕರ ದಿನದಂದು ಮೋರಾದಾಬಾದ್‌ನಲ್ಲಿ ರೈಲ್ವೆ ಗೋಡಾನ್‌ನ ಕಾರ್ಮಿಕರೊಬ್ಬರು ಕಾಂಕ್ರೀಟ್ ಸ್ಲ್ಯಾಬ್ ಮೇಲೆ ಮಲಗಿ ವಿಶ್ರಾಂಥಿ ಪಡೆಯುತ್ತಿರುವ ದೃಶ್ಯ ಕಂಡುಬಂತು. ಇದನ್ನು ನೋಡಿದಾಗ ಕಾರ್ಮಿಕನ ಸ್ಥಿತಿ ಹೇಗಿದೆ ಎನ್ನುವುದು ಅರ್ಥವಾಗದೇ ಇರಲಾರದು.

ಮುಂಬೈ ಇಂಡಿಯನ್ಸ್ ಮಣಿಸಿದ ಆರ್‌ಸಿಬಿ
ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 14 ರನ್‌ಗಳಿಂದ ಆರ್‌ಸಿಬಿಯನ್ನು ಮಣಿಸಿತು. ಆರ್‌ಸಿಬಿ ಗೆಲುವಿನ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಸಂಭ್ರದ ನಗು.

ಕ್ಯೂಬಾದಲ್ಲಿ ನದಿಯಂತೆ ಕಂಡ ಕಾರ್ಮಿಕರ ಮೆರವಣಿಗೆ
ಹವಾನಾದ ಕ್ಯೂಬಾದಲ್ಲಿ ಮಂಗಳವಾರ ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕಾರ್ಮಿಕರು, ಕ್ಯೂಬನ್ಸ್ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ನೆರೆದಿದ್ದ ಜನರು ಒಂದು ನಂದಿಯಂತೆ ಗೋಚರಿಸುತ್ತಿತ್ತು.

ಮರಳಿನ ಮೇಲೆ ನೃತ್ಯ ಚಮತ್ಕಾರ
ಮುಂಬೈನ ಸಮುದ್ರವೊಂದರ ದಡದಲ್ಲಿ ಮರಳಿನ ಮೇಲೆ ಯುವಕನೊಬ್ಬನು ನೃತ್ಯ ಮಾಡಿ ಎಲ್ಲರ ಗಮನ ಸೆಳೆದನು. ನೃತ್ಯಕ್ಕೆ ವೇಳೆ, ಜಾಗವೆನ್ನುವುದಿಲ್ಲ, ಮನಸ್ಸಿಗೆ ಸಂತೋಷ ಸಿಕ್ಕರೆ ಸಾಕೆಂದು ಡ್ಯಾನ್ಸ್ ಮಾಡುತ್ತಾ, ಅಲ್ಲಿದ್ದವರ ಗಮನ ಸೆಳೆದನು.

ಹೂವಿಗಾಗಿ ನಿಂತ ಮಹಿಳೆಯರು
ರಾಂಚಿಯಲ್ಲಿ ಮಂದ ಪೂಜಾ ಹಬ್ಬದ ಕೊನೆಯ ದಿನವಾದ ಮಂಗಳವಾರ ಭೋಕ್ತಾದಿಂದ ಬೀಳುವ ಹೂವಿಗಾಗಿ ಗಂಟೆಗಟ್ಟಲೆ ಕಾದುನಿಂತ ಮಹಿಳೆಯರು,
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications