6 ಜನರನ್ನು ಕೊಂದ ಮಹಾರಾಷ್ಟ್ರದ ವೈದ್ಯ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 16 : 'ವೈದ್ಯೋ ನಾರಾಯಣೋ ಹರಿ' ಅಂದರೆ ವೈದ್ಯರು ದೇವರಿಗ ಸಮಾನ ಎಂಬ ಮಾತಿದೆ. ಆದರೆ, ಮಹಾರಾಷ್ಟ್ರದ ವೈದ್ಯನೊಬ್ಬ 6 ಜನರನ್ನು ಕೊಂದು, ತೋಟದ ಮನೆಯಲ್ಲಿ ಶವಗಳನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.

ಸತಾರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 6 ಜನರನ್ನು ಹತ್ಯೆ ಮಾಡಿದ ವೈದ್ಯ ಸಂತೋಷ್ ಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಅಪಹರಣದ ಪ್ರಕರಣದಲ್ಲಿ ಡಾ.ಪಾಲ್ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಇನ್ನೂ 5 ಜನರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.[ವೈದ್ಯಕೀಯ ಶಿಕ್ಷಣದಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ]

Maharashtra doctor killed 6, buried them on his farmhouse

ನಾಲ್ವರು ಮಹಿಳೆಯರು ಸೇರಿದಂತೆ 6 ಜನರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಡಾ.ಪಾಲ್ (41) ಆರೋಪಿ. ಮೃತ ವ್ಯಕ್ತಿಗಳೆಲ್ಲರೂ 2003ರಿಂದ ನಾಪತ್ತೆಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಹತ್ಯೆ ಬಗ್ಗೆ ಡಾಕ್ಟರ್ ತಪ್ಪೊಪ್ಪಿಕೊಂಡಿದ್ದಾನೆ. ಪಾಲ್‌ಗೆ ಸೇರಿದ ತೋಟದ ಮನೆಯಲ್ಲಿ ಶವಗಳ ಅವಶೇಷಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.[ವಿಡಿಯೋ: ಅಪ್ಪನನ್ನು ಕೊಲ್ಲಲು ಯತ್ನಿಸಿದ 'ಡಾಕ್ಟರ್' ಮಗಳು]

ಜನರನ್ನು ಹತ್ಯೆ ಮಾಡಿದ ಬಳಿಕ ತೋಟದ ಮನೆಯಲ್ಲಿ ಶವಗಳನ್ನು ಸುಟ್ಟುಹಾಕಿರುವುದಾಗಿ ಪಾಲ್ ಹೇಳಿಕೆ ನೀಡಿದ್ದಾನೆ. ಡಾ.ಪಾಲ್ 6 ಜನರನ್ನು ಹತ್ಯೆ ಮಾಡಿದ್ದೇಕೆ? ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Maharashtra police arrested Dr.Pol (41) who murdered 6 persons and buried them on his farmhouse. It is not clear why Dr Pol allegedly killed the six people.
Please Wait while comments are loading...