Maharashtra Election 2024: 288ರಲ್ಲಿ 11 ಸ್ಥಾನಗಳ ನಿರ್ಧಾರ ಬಾಕಿ ಎಂದ ಪವಾರ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮಹಾಯುತಿ ಒಕ್ಕೂಟದ ಸೀಟು ಹಂಚಿಕೆ ಚರ್ಚೆಗಳು ಮುನ್ನೆಲೆಯಲ್ಲಿವೆ. ಮುಂಬರುವ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದ ಚರ್ಚೆಗಳು ಮುಕ್ತಾಯದ ಹಂತದಲ್ಲಿವ. 288 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ಮಾತ್ರ ಅಂತಿಮಗೊಳಿಸಬೇಕಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಇಂದು ಹೇಳಿದ್ದಾರೆ.
ನಿನ್ನೆ ಇಡೀ ದಿನ ನಾವೆಲ್ಲ ದೆಹಲಿಗೆ ತೆರಳಿ ಚರ್ಚೆ ನಡೆಸಿದ್ದೇವೆ. ಇಂದು ನಮ್ಮ ಹಿರಿಯ ನಾಯಕ ಪ್ರಫುಲ್ ಪಟೇಲ್ ಕೂಡ ಚರ್ಚೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸ್ಪಷ್ಟವಾಗಿ ಹೇಳುವುದಾದರೆ 288 ಸ್ಥಾನಗಳ ಪೈಕಿ ಯಾರಿಗೆ ಎಷ್ಟು ಸ್ಥಾನಗಳು ಸಿಗಲಿವೆ ಎಂದು ನಿರ್ಧರಿಸಲು ಕೇವಲ 11 ಸ್ಥಾನಗಳು ಮಾತ್ರ ಉಳಿದಿವೆ ಎಂದು ಪವಾರ್ ಹೇಳಿದ್ದಾರೆ.

ಅಲ್ಲದೆ ಯಾವುದೇ ವಿಚಾರವನ್ನು ಪ್ರಕಟಿಸುವ ಮುನ್ನ ಒಮ್ಮೆ ಪರಿಶೀಲಿಸಿ ಎಂದು ಮಾಧ್ಯಮಗಳಿಗೂ ಅವರು ಕಿವಿಮಾತು ಹೇಳಿದ್ದಾರೆ. ನಮ್ಮ ಚರ್ಚೆ ಇನ್ನೂ ಮುಂದುವರೆದಿದೆ, ಪರಿಶೀಲಿಸದೆ ಏನನ್ನೂ ಜನರಿಗೆ ತಲುಪಿಸಬೇಡಿ ಎಂದು ಮಾಧ್ಯಮಗಳಲ್ಲಿ ವಿನಂತಿಸಿಕೊಂಡಿದ್ದಾರೆ.
ಸದ್ಯಕ್ಕೆ ನಾವಿನ್ನೂ ಸೀಟು ಹಂಚಿಕೆಯಲ್ಲಿ ಹಂತ ಹಂತವಾಗಿ ಹೆಜ್ಜೆ ಇಡುತ್ತಿದ್ದೇವೆ. ನಾವು ಅಂತಿಮವಾಗಿ ಘೋಷಿಸುವವರೆಗೆ ಮೊದಲೇ ಮಾಧ್ಯಮಗಳು ಅವರಿಗೆ ಟಿಕೆಟ್ ನೀಡಲಾಗಿದೆ ಅಥವಾ ಇವರನ್ನು ಕಡೆಗಣಿಸಲಾಗಿದೆ ಎಂದು ಭವಿಷ್ಯ ನುಡಿಯಬೇಡಿ ಎಂದು ಕೇಳಿಕೊಂಡಿದ್ದಾರೆ.
ಪ್ರತಿ ಚುನಾವಣೆಯಲ್ಲೂ ಸವಾಲು ಇದ್ದೇ ಇರುತ್ತದೆ. ಆದರೆ ಇವತ್ತು ಇದ್ದ ವಾತಾವರಣವನ್ನು ನೋಡಿದ್ದೀರಿ. ಹಾಗಾಗಿ ರತ್ನಗಿರಿ ವಿಧಾನಸಭೆಯಲ್ಲಿ ನಾನೇ ಗೆಲ್ಲುತ್ತೇನೆ. ಇದರಿಂದ ಹೆಚ್ಚಿನ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದು ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್ ಹೇಳಿದ್ದಾರೆ.
ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಅಮಿತ್ ಶಾ, ಅಜಿತ್ ದಾದಾ ಮತ್ತು ದೇವೇಂದ್ರ ಫಡ್ನವೀಸ್ ಜಿ ಅವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ಏನು ನಡೆದರೂ ಅದು ಗೌರವದಿಂದ ನಡೆಯುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಸೋಲಲಿದೆ, ಬಿಜೆಪಿಯ ಮೈತ್ರಿಕೂಟವು ಸೋಲಲಿದೆ, ಮಹಾ-ಹರ್' ನಡೆಯಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ.
ನಿರುದ್ಯೋಗ, ಹಣದುಬ್ಬರ, ಗಡಿ ಭದ್ರತೆ, ಆಂತರಿಕ ಭದ್ರತೆ, ಅಗ್ನಿವೀರ, ಮೀಸಲಾತಿ, ಸಂವಿಧಾನದ ಬಗ್ಗೆ ಬಿಜೆಪಿಗೆ ಉತ್ತರವೇ ಇಲ್ಲ. ಈಗ ನಡೆಯುತ್ತಿರುವ ʼಬಾಟೋಗೆ ಟು ಕಟೋಗೆʼ ಬೆಳವಣಿಗೆ ಕೂಡ ಅವರ ಲ್ಯಾಬ್‌ನಲ್ಲೇ ಸಿದ್ಧಪಡಿಸಲಾಗಿದೆ. ಮೊದಲು ಅವರ ಲ್ಯಾಬ್ ಎಲ್ಲಿದೆ ಎಂದು ಕಂಡುಹಿಡಿಯಿರಿ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ಗೂ ಸಿದ್ಧತೆ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ದೆಹಲಿಯ AICC ಪ್ರಧಾನ ಕಚೇರಿಯಲ್ಲಿ ಸಿಇಸಿ ಸಭೆ ಕರೆದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಮಹಾರಾಷ್ಟ್ರದ ಪ್ರಮುಖರು ಸಭೆಯಲ್ಲಿದ್ದಾರೆ. ಸದ್ಯದಲ್ಲೇ ಕಾಂಗ್ರೆಸ್ ಮಹಾರಾಷ್ಟ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.












Click it and Unblock the Notifications