Maharashtra Assembly Elections 2024: 'ಮಹಾಯತಿ' ಮೈತ್ರಿಕೂಟದ ಸೀಟು ಹಂಚಿಕೆ

ಮುಂಬೈ, ಅಕ್ಟೋಬರ್ 07: ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ದೇಶದಲ್ಲಿ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. 288 ಸದಸ್ಯ ಬಲದ ವಿಧಾನಸಭೆಗೆ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ತಯಾರಿಯನ್ನು ನಡೆಸಿದೆ. ದೀಪಾವಳಿ ಬಳಿಕ ಮತದಾನ ನಡೆಯುವ ನಿರೀಕ್ಷೆ ಇದ್ದು, ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಬೇಕಿದೆ. ಈ ಚುನಾವಣೆ ಬಿಜೆಪಿ ಪಾಲಿಗೆ ಬಹಳ ಮುಖ್ಯವಾಗಿದೆ.

ಮಹಾರಾಷ್ಟ್ರ ರಾಜ್ಯದ ಆಡಳಿತ ಪಕ್ಷ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟ. ಮುಂದಿನ ಚುನಾವಣೆಯನ್ನು ಸಹ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ ಎದುರಿಸಲಿವೆ. 'ಮಹಾಯುತಿ' ಮೈತ್ರಿಕೂಟದಲ್ಲಿ ಯಾರಿಗೆ ಎಷ್ಟು ಸೀಟು? ಎಂಬುದು ಎಲ್ಲರ ಕುತೂಹಲವಾಗಿದೆ.

Maharashtra Assembly Elections 2024 Mahayuti Alliance Seat Sharing Almost Final

'ಮಹಾಯುತಿ' ಮೈತ್ರಿಕೂಟಕ್ಕೆ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿ. ಕಾಂಗ್ರೆಸ್ ನೇತೃತ್ವದ ಈ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ. ಈ ಮೈತ್ರಿಕೂಟದ ಸೀಟು ಹಂಚಿಕೆ ಸಹ ಇನ್ನೂ ಘೋಷಣೆಯಾಗಬೇಕಿದೆ.

'ಮಹಾಯುತಿ' ಮೈತ್ರಿಕೂಟ ಸೀಟು ಹಂಚಿಕೆ: ಎನ್‌ಡಿಎ ನೇತೃತ್ವದ 'ಮಹಾಯುತಿ' ಮೈತ್ರಿಕೂಟದ ಸೀಟು ಸಂಚಿಕೆ ಬಹುತೇಕ ಅಂತಿಮವಾಗಿದೆ. ಮೈತ್ರಿಕೂಟ ಸೀಟು ಹಂಚಿಕೆ ಮಾಡಿದರೂ ಸಹ ಮುಖ್ಯಮಂತ್ರಿ ಯಾರು? ಎಂದು ಘೋಷಣೆ ಮಾಡುವುದಿಲ್ಲ. ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿಯೇ ಚುನಾವಣಾ ಪ್ರಚಾರವನ್ನು ಮಾಡಲಾಗುತ್ತದೆ, ಚುನಾವಣೆ ಎದುರಿಸಲಾಗುತ್ತದೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯನ್ನು ಮೂರು ಭಾಗವಾಗಿ ಮೈತ್ರಿಕೂಟಗಳು ಮೂರು ಭಾಗವಾಗಿ ಮಾಡಿಕೊಂಡು ಚುನಾವಣೆ 2024 ಎದುರಿಸಲಿವೆ. ಮಹಾಯತಿ ಮೈತ್ರಿಕೂಟದ ಪಕ್ಷವಾದ ಬಿಜೆಪಿ ಮೂಲಗಳ ಪ್ರಕಾರ ಪಕ್ಷ 150 ಸೀಟುಗಳಲ್ಲಿ ಕಣಕ್ಕಿಳಿಯಲಿದೆ, ಶಿವಸೇನೆ (ಏಕನಾಥ್ ಶಿಂಧೆ) 80-90 ಮತ್ತು ಉಳಿದ ಸೀಟುಗಳಲ್ಲಿ ಎನ್‌ಸಿಪಿ (ಅಜಿತ್ ಪವಾರ್ ಬಣ) ಸ್ಪರ್ಧಿಸಲಿದೆ.

2019ರಲ್ಲಿ ಬಿಜೆಪಿ 164 ಸೀಟುಗಳಲ್ಲಿ ಕಣಕ್ಕಿಳಿದಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 2024ರ ಚುನಾವಣೆಯಲ್ಲಿ ಪಕ್ಷ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸಲಿದೆ. ಬಿಜೆಪಿ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಜೊತೆ ಸೀಟು ಹಂಚಿಕೆ ಮಾಡಿಕೊಂಡು ಕಳೆದ ಚುನಾವಣೆ ಎದುರಿಸಿತ್ತು. ಬಿಜೆಪಿ 164ರಲ್ಲಿ ಕಣಕ್ಕಿಳಿದು 105ರಲ್ಲಿ ಗೆಲುವು ಸಾಧಿಸಿತ್ತು. 126ರಲ್ಲಿ ಕಣಕ್ಕಿಳಿದಿದ್ದ ಶಿವಸೇನೆ 56 ಸೀಟುಗಳಲ್ಲಿ ಗೆದ್ದಿತ್ತು.

ಚುನಾವಣಾ ಪ್ರಚಾರದಲ್ಲಿ 'ಲಡ್ಕಿ ಬಹಿನ್ ಯೋಜನೆ' ಬಹಳ ಪ್ರಭಾವ ಬೀರುವ ನಿರೀಕ್ಷೆ ಇದೆ. ಮಹಾಯತಿ ಮೈತ್ರಿಕೂಟದ ಸರ್ಕಾರಕ್ಕೆ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವ ಈ ಯೋಜನೆ ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂಬ ಬಲವಾದ ನಿರೀಕ್ಷೆ ಇದೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ಬಹಳ ಮುಖ್ಯವಾಗಿದೆ. ಆದ್ದರಿಂದ ಪಕ್ಷ ಮತ್ತು ಆರ್‌ಎಸ್‌ಎಸ್ ನಡುವೆ ಸಮನ್ವಯತೆ ಗಟ್ಟಿಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಮಹಾಯತಿ ಮೈತ್ರಿಕೂಟಕ್ಕೆ ಎನ್‌ಸಿಪಿ (ಶರದ್ ಪವಾರ್) ಸೇರಿಸಿಕೊಂಡಿರುವುದಕ್ಕೆ ಆರ್‌ಎಸ್‌ಎಸ್‌ ಅಸಮಾಧಾನಗೊಂಡಿದೆ. ಸಮನ್ವಯತೆ ಸಾಧಿಸಲು ಆರ್‌ಎಸ್‌ಎಸ್ ಮತ್ತು ಬಿಜೆಪಿಯಿಂದ ಒಬ್ಬೊಬ್ಬ ನಾಯಕರನ್ನು ಈಗಾಗಲೇ ನೇಮಕ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+