MahaKumbh Mela 2025: ಮಹಾಕುಂಭ ಮೇಳದ ಕೊನೆಯ ಪುಣ್ಯ ಸ್ನಾನದ ದಿನ ಯಾವಾಗ? ಭಕ್ತರು ಗಮನಿಸಲೇಬೇಕಾದ ಮಹತ್ವದ ಮಾಹಿತಿ ಇದು
MahaKumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಈ ದೃಶ್ಯ ಕಣ್ತುಂಬಿಕೊಳ್ಳಲಿ ಪ್ರತಿನಿತ್ಯವು ಸಾವಿರಾರು ಮಂದಿ ಭಕ್ತರು ಹರಿದುಬರುತ್ತಲೇ ಇದ್ದಾರೆ. ಈಗಾಗಲೇ 35 ಕೋಟಿಗೂ ಹೆಚ್ಚು ಮಂದಿ ಭಕ್ತರು ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಹಾಗಾದರೆ, ಮಹಾ ಕುಂಭಮೇಳದ ಕೊನೇ ಪುಣ್ಯ ಸ್ನಾನ ದಿನ ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳವು ಜನವರಿ 13, 2025ರಂದು ಪ್ರಾರಂಭ ಆಗಿದ್ದು, ಕುಂಭ ಸ್ನಾನ ಉತ್ಸವವು ಫೆಬ್ರವರಿ 26, 2025ರಂದು ಮುಕ್ತಾಯಗೊಳ್ಳುತ್ತದೆ. ಈ ವೇಳೆ ಕೋಟ್ಯಂತರ ಭಕ್ತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.

ಕುಂಭಮೇಳದಲ್ಲಿ ಅಮೃತ ಸ್ನಾನ ಮತ್ತು ಶಾಹಿ ಸ್ನಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಕೊನೆಯ ಅಮೃತ ಸ್ನಾನವನ್ನು ಫೆಬ್ರವರಿ 3ರಂದು ಬಸಂತ್ ಪಂಚಮಿಯಂದು ಮಾಡಲಾಯಿತು. ಈಗ ಮಾಘಿ ಪೂರ್ಣಿಮೆಯ ನಂತರ, ಒಂದೇ ಒಂದು ಶಾಹಿ ಸ್ನಾನ ಉಳಿದಿದೆ. ಕುಂಭಮೇಳದ ಸಮಯದಲ್ಲಿ ವಿಶೇಷ ದಿನಾಂಕಗಳಂದು ಮಾಡುವ ಸ್ನಾನವನ್ನು ಪುಣ್ಯ ಸ್ನಾನ ಎಂದು ಕರೆಯಲಾಗುತ್ತದೆ.
ಪೌಷ ಪೂರ್ಣಿಮೆ, ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ, ವಸಂತ ಪಂಚಮಿ ಮತ್ತು ಮಾಘಿ ಪೂರ್ಣಿಮೆಯ ನಂತರ, ಈಗ ಕುಂಭಮೇಳದ ಕೊನೆಯ ಪುಣ್ಯ ಸ್ನಾನವನ್ನು ಮಹಾಶಿವರಾತ್ರಿಯ ದಿನದಂದು, ಅಂದರೆ ಫೆಬ್ರವರಿ 26, 2025 ರಂದು ಮಾಡಲಾಗುತ್ತದೆ. ಫೆಬ್ರವರಿ 26ರಂದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನದ ಅಂತಿಮ ಶುಭ ಸಂದರ್ಭವನ್ನು ಆಯೋಜಣೆ ಮಾಡಲಾಗುತ್ತಿದೆ. ಅಲ್ಲದೆ, ಈ ದಿನದ ಸ್ನಾನದ ವಿಶೇಷತೆ ಎಂದರೆ ಮಹಾಶಿವರಾತ್ರಿಯಂದು ಸೂರ್ಯ, ಚಂದ್ರ ಮತ್ತು ಶನಿಯ ತ್ರಿಗ್ರಹ ಯೋಗವು ರೂಪುಗೊಳ್ಳುತ್ತದೆ. ಇದನ್ನು ಯಶಸ್ಸು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಅಷ್ಟೇ ಅಲ್ಲದೆ, ಫೆಬ್ರವರಿ 26ರಂದು ಶಿವಯೋಗ ಮತ್ತು ಸಿದ್ಧಿ ಯೋಗವೂ ಇರುತ್ತದೆ. ಈ ಶುಭ ಯೋಗಗಳು ಮತ್ತು ಮುಹೂರ್ತಗಳಲ್ಲಿ, ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಭಕ್ತರು ಪುಣ್ಯ ಮತ್ತು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಮಹಾಶಿವರಾತ್ರಿಯ ದಿನದಂದು ಭಾರೀ ಜನದಟ್ಟಣೆ ಅಥವಾ ಇನ್ನಾವುದೇ ಕಾರಣದಿಂದಾಗಿ ನೀವು ಪ್ರಯಾಗ್‌ರಾಜ್‌ಗೆ ತಲುಪಲು ಸಾಧ್ಯವಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ, ಕೆಲವು ವಿಶೇಷ ನಿಯಮಗಳನ್ನು ಅನುಸರಿಸುವ ಮೂಲಕ, ನೀವು ಮನೆಯಲ್ಲಿಯೂ ಸಹ ಶಾಹಿಸ್ನಾನದ ಪವಿತ್ರ ಫಲಗಳನ್ನು ಪಡೆಯಬಹುದಾಗಿದೆ.












Click it and Unblock the Notifications