Republic Doubl Exit Poll 2024: ದೇಶದಲ್ಲಿ ಮತ್ತೆ ಪ್ರಧಾನಿ ಮೋದಿ ಸರ್ಕಾರ ರಚನೆ? 'ಇಂಡಿಯಾ' ಕೂಟಕ್ಕೆ ಆಘಾತ, ವರದಿ
ನವದೆಹಲಿ, ಜೂನ್ 01: ಭಾರತದಲ್ಲಿ ಸಾರ್ವತ್ರಿಕ ಚುನಾವಣೆ- 2024ರ ಏಳು ಹಂತಗಳ ಚುನಾವಣೆ ಪೂರ್ಣಗೊಂಡಿದೆ. ಇಂದು ಶನಿವಾರ (ಜೂನ್ 01) ಏಳು ರಾಜ್ಯ ಮತ್ತು ಒಂದು ಕೇಂದ್ರಾಳಿತ ಪ್ರದೇಶ ಒಳಗೊಂಡಂತೆ ಒಟ್ಟು 57 ಕ್ಷೇತ್ರಗಳಿಗೆ 7ನೇ ಹಂತ ಚುನಾವಣೆ ನಡೆಯಿತು. ಇಂದು ಸಾರ್ವತ್ರಿಕ ಚುನಾವಣೋತ್ತರವಾಗಿ Republic TV with PMARQ and Matrize Exit Poll ಸಮೀಕ್ಷೆ ಬಿಡುಗಡೆ ಮಾಡಿದೆ.
ಪಬ್ಲಿಕ್ ಟಿವಿ ಮತ್ತು ಮ್ಯಾಟ್ರಿಜ್ ಎಕ್ಸಿಟ್ ಪೋಲ್ 2024 ಪ್ರಕಾರ, ದೇಶದ ಒಟ್ಟು ಸ್ಥಾನಗಳಲ್ಲಿ ಎನ್‌ಡಿಎ 353-368 ಸ್ಥಾನಗಳನ್ನು ಪಡೆಯಲಿದೆ. ಇಂಡಿಯಾ ಮೈತ್ರಿಕೂಟ 118-133 ಸ್ಥಾನಗಳನ್ನು ಪಡೆಯಲಿದ್ದು, ಇತರರು 43-48 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.

ಎನ್‌ಡಿಎ ಮೈತ್ರಿಕೂಟದ ವಿರುದ್ಧ ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ವಿಪಕ್ಷಗಳು 'ಇಂಡಿಯಾ' ಮೈತ್ರಿಕೂಟ ರಚಿಸಿಕೊಂಡವು. ದೇಶದಲ್ಲಿರುವ ಒಟ್ಟು 543 ಕ್ಷೇತ್ರಗಳ ಪೈಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಯ ಪಕ್ಷವು ಗರಿಷ್ಠ 368 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ರಿಪಬ್ಲಿಕ್ ಟಿವಿ ಚುನಾವಣೋತ್ತರ ಸಮೀಕ್ಷೆಯು ಮಾಹಿತಿ ನೀಡಿದೆ.
ಕೇಂದ್ರ ಮಟ್ಟದಲ್ಲಿ ಎಲ್ಲ ವಿಪಕ್ಷಗಳು ಮಾಡಿಕೊಂಡಿರುವ ಇಂಡಿಯಾ ಮೈತ್ರಿಕೂಟವು 2024ರ ಭಾರತದ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 118-133 ಸ್ಥಾನಗಳನ್ನು ಗೆಲ್ಲಲ್ಲಿದೆ. ಇನ್ನು ಇತರ ಪಕ್ಷಗಳು ಕೇವಲ 43-48 ಸ್ಥಾನ ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಾರ್ವತ್ರಿಕ ಚುನಾವಣೆಗೆ ಒಳನೋಟ
ದೇಶದಲ್ಲಿ ಒಟ್ಟು ಏಳ ಹಂತಗಳ ಪೈಕಿ ಮೊದಲ ಹಂತದ ಮತದಾನ ಏಪ್ರಿಲ್ 19ರಂದು, ಏಪ್ರಿಲ್ 26ರಂದು 2ನೇ ಹಂತದ ಚುನಾವಣೆ, ಮೇ 7ರಂದು 3ನೇ ಹಂತದಲ್ಲಿ ಮತದಾನ ನಡೆಯಿತು. ಇನ್ನೂ 4ನೇ ಹಂತದ ಮತದಾನ ಮೇ 13ರಂದು ನಡೆದರೆ, ಮೇ 20ರಂದು 5ನೇ ಹಂತದ ಮತದಾನ ಜರುಗಿತು.
ಮೇ 25ರಂದು 6ನೇ ಹಂತ ಹಾಗೂ ಇಂದು ಶನಿವಾರ ಜೂನ್ 1ರಂದು 7ನೇ ಹಂತದ ಮತದಾನದ ಮೂಲಕ ದೇಶದ ಸಾರ್ವತ್ರಿಕ ಚುನಾವಣೆ ನಡೆದಿದೆ. ಜೂನ್ 04ರಂದು ಕೇಂದ್ರ ಚುನಾವಣೆ ಆಯೋದಿಂದ ಅಧಿಕೃತ ಫಲಿತಾಂಶ ಹೊರ ಬೀಳಲಿದೆ. ಅದಕ್ಕೂ ಮೊದಲು ಇಂದು ರಿಪಬ್ಲಿಕ್ ಟಿವಿ ಸುದ್ದಿ ಎರಡು ಸಂಸ್ಥೆಗಳ ಜೊತೆಗೆ ಸಮೀಕ್ಷೆ ನಡೆಸಿ ಶನಿವಾರ ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಮಾಡಿತು.
ಇನ್ನೂ 2019ರ ಲೋಕಸಭಾ ಚುನಾವಣೆಯಲ್ಲಿ ECI ಅಧಿಕೃತ ಮಾಹಿತಿ ಪ್ರಕಾರ ಬಿಜೆಪಿ ಒಟ್ಟು 303 ಸೀಟು ಗೆದ್ದರೆ, ಕಾಂಗ್ರೆಸ್ 52 ಸ್ಥಾನ ಗೆದ್ದಿದೆ. ಡಿಎಂಕೆ 23 ಸ್ಥಾನ, ವೈಎಸ್‌ಆರ್‌ಪಿ ಪಕ್ಷ 23 ಸೀಟುಗಳನ್ನು ಗೆದ್ದಿತ್ತು.












Click it and Unblock the Notifications