Get Updates
Get notified of breaking news, exclusive insights, and must-see stories!

ಪತ್ನಿ ಫೋಟೋ ಅಶ್ಲೀಲ ಎಡಿಟ್‌ ಮಾಡಿ ಲೋನ್‌ ರಿಕವರಿ ಪ್ಲ್ಯಾನ್‌, ಸಾಲಕ್ಕೆ ಹೋಯ್ತು ಪ್ರಾಣ

ಇತ್ತೀಚೆಗೆ ಆನ್‌ಲೈನ್‌ ಮೂಲಕವೇ ಸಾಲ ನೀಡುವ ಇನ್‌ಸ್ಟಂಟ್ ಲೋನ್ ಆಪ್‌ಗಳು ಸಾಕಷ್ಟು ಬಂದಿವೆ. ಆದರೆ ಲೋನ್‌ ರಿಕವರಿ ಹೆಸರಿನಲ್ಲಿ ಕಿರುಕುಳ ನೀಡುತ್ತಿರುವುದು ಹಾಗೂ ಇದರಿಂದ ಸಾಲ ಪಡೆದವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಅಲ್ಲದೆ ಸಾಲ ವಸೂಲಾತಿ ಹೆಸರಲ್ಲಿ ಏಜೆಂಟ್‌ಗಳು ಮಾಡಿದ ಕೆಲಸಕ್ಕೆ ನವವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ದಾರುಣ ಘಟನೆ ನಡೆದಿದೆ ಎನ್ನಲಾಗಿದೆ. ಇನ್‌ಸ್ಟಂಟ್ ಲೋನ್ ಆಪ್ ಕಂಪನಿಯವರ ಕಿರುಕುಳದಿಂದ ಬೇಸತ್ತು 25 ವರ್ಷದ ನರೇಂದ್ರ ಎಂಬ ವ್ಯಕ್ತಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಶಾಖಪಟ್ಟಣಂನ ಮಹಾರಾಣಿಪೇಟಾ ಪ್ರದೇಶದಲ್ಲಿ ವರದಿಯಾಗಿದೆ.

Loan Recovery Agent Allegedly Edits Woman s Photo Leading to Borrower s Suicide In Andhra Pradesh

ಇನ್ನು ಮೃತ ನರೇಂದ್ರ ಇತ್ತೀಚೆಗಷ್ಟೇ ವಿವಾಹವಾಗಿದ್ದ. ಈತ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಪತ್ನಿಯೊಂದಿಗೆ ಅನ್ಯೋನ್ಯವಾಗಿ ಬದುಕು ನಡೆಸುವ ಕನಸು ಕಂಡಿದ್ದ ನರೇಂದ್ರ ಅವರ ಬಾಳಲ್ಲಿ ಇತ್ತೀಚೆಗೆ ಬರಸಿಡಿಲು ಬಡಿದಿತ್ತು. ಇತ್ತೀಚೆಗೆ ಅಲ್ಲಿ ಹವಾಮಾನ ವೈಪರೀತ್ಯದಿಂದ ನಷ್ಟ ಅನುಭವಿಸಿದ್ದ ಹಿನ್ನೆಲೆ ಆನ್‌ಲೈನ್‌ ಲೋನ್‌ ಆ್ಯಪ್ ಮೂಲಕ 2,000 ರೂಪಾಯಿ ಹಣ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ.

ಆದರೆ, ಪಡೆದ ಸಾಲದ ಅಸಲು ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿಸಿದ್ದರು. ಆದರೆ ಲೋನ್‌ ಆ್ಯಪ್ ಅವರು ಇದರ ಹೊರತಾಗಿಯೂ ಉಳಿದಿರುವ ಬಾಕಿಯನ್ನು ತೆರವುಗೊಳಿಸುವಂತೆ ಒತ್ತಡ ಹೇರಿದ್ದರು. ಅಲ್ಲದೆ ಲೋನ್ ಆ್ಯಪ್‌ನ ಸಿಬ್ಬಂದಿ ಮೃತ ನರೇಂದ್ರ ಅವರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಅಲ್ಲದೆ ಏಜೆಂಟರ್‌ ಅಸಭ್ಯ ಭಾಷೆಗಳಿಂದ ನರೇಂದ್ರ ಅವರಿಗೆ ಮೆಸೇಜ್‌ ಕಳುಹಿಸುತ್ತಿದ್ದರು. ಇಷ್ಟಕ್ಕೆ ಸುಮ್ಮನಾಗದ ಅವರು ನರೇಂದ್ರ ಅವರ ಪತ್ನಿಯ ಫೋಟೋವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ, ಅವರ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿ ವಿಕೃತಿ ಮೆರೆದಿದ್ದರು. ಕೊನೆಗೆ ಪತ್ನಿಗೂ ಈ ಫೋಟೋಗಳನ್ನು ಕಳಿಸಿದಾಗ ನರೇಂದ್ರ ಅವರಿಗೆ ವಿಷಯ ಗೊತ್ತಾಗಿದೆ.

Loan Recovery Agent Allegedly Edits Woman s Photo Leading to Borrower s Suicide In Andhra Pradesh

ನರೇಂದ್ರ ಹಾಗೂ ಅವರ ಪತ್ನಿಯ ಮಾರ್ಫ್ ಮಾಡಿದ ಫೋಟೋಗಳನ್ನು ಅವರ ಸಂಬಂಧಿಕರಿಗೆ ಕಳಿಸಿದ್ದರಿಂದ ಮನನೊಂದು ನರೇಂದ್ರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ನರೇಂದ್ರ ಅವರ ಕುಟುಂಬಸ್ಥರು ಪೊಲೀಸರು ಹಾಗೂ ವಿಶಾಖಪಟ್ಟಣಂ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಆ ಆಪ್‌ನವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸಹಾಯಕ ಪೊಲೀಸ್ ಆಯುಕ್ತ (ಪೂರ್ವ ವಿಭಾಗ) ಎಲ್.ಲಕ್ಷ್ಮಣ ಮೂರ್ತಿ ಅವರು ಸೈಬರ್ ಕ್ರೈಂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಕಿರುಕುಳಕ್ಕೆ ಕಾರಣರಾದ ಲೋನ್‌ ಆಪ್‌ನವರ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ. ನರೇಂದ್ರ ಅವರ ಸಾವಿಗೆ ನಿಖರ ಕಾರಣಗಳಲ್ಲೂ ಅವರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸಾಲ ವಸೂಲಿ ಹೆಸರಿನಲ್ಲಿ ಈ ರೀತಿಯ ಕಿರುಕುಳಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ತುರ್ತು ಸಂದರ್ಭಗಳಿಗೆ ಸುಲಭವಾಗಿ ಸಾಲ ಸಿಗುತ್ತೆ ಎಂದು ಇವರ ಜಾಲದಲ್ಲಿ ಸಿಲುಕಿ ಕೊನೆಗೆ ಪ್ರಾಣವನ್ನೇ ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ ಎಂದು ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+