ಕೊಚ್ಚಿ: ನವಜಾತಶಿಶುವನ್ನು ಚರ್ಚ್ ನಲ್ಲಿ ಎಸೆದಿದ್ದ ದಂಪತಿ ಅರೆಸ್ಟ್

ಕೊಚ್ಚಿ, ಜೂನ್ 03: ಕೊಚ್ಚಿಯ ಸೇಂಟ್ ಜಾರ್ಜ್ ಫೋರನ್ ಚರ್ಚ್ ನಲ್ಲಿ ಬಿಟ್ಟು ಹೋಗಿದ್ದ ದಂಪತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಶನಿವಾರದಂದು 32 ವರ್ಷದ ವ್ಯಕ್ತಿಯೊಬ್ಬ ಎಡಪಲ್ಲಿ ಚರ್ಚ್ ನಲ್ಲಿ ಮಗುವನ್ನು ಮಲಗಿಸಿ ಹೋದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದಂಪತಿಯ ನಾಲ್ಕನೇ ಮಗು ಇದಾಗಿದ್ದು, ನಾಲ್ಕು ಮಕ್ಕಳ ತಂದೆ ತಾಯಿ ಎನಿಸಿಕೊಂಡರೆ ಸಮಾಜದಲ್ಲಿ ಮರ್ಯಾದೆ ಇರುವುದಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾಗಿ ಮಗುವಿನ ತಂದೆ ಹೇಳಿಕೆ ನೀಡಿದ್ದಾನೆ.

Kerala Police arrested parents of abandoning newborn at Church

ಈ ಘಟನೆ ಬಗ್ಗೆ ಸ್ಥಳೀಯ ಟಿವಿ ಮಾಧ್ಯಮಗಳಲ್ಲಿ ಸಿಸಿಟಿವಿ ದೃಶ್ಯಗಳ ಸಮೇತ ವರದಿಯಾಗಿತ್ತು. ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಆರಂಭವಾಗಿತ್ತು. ವಿಷಯ ಪೊಲೀಸರಿಗೂ ಮುಟ್ಟಿತು. ನಂತರ ದಂಪತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮೂರು ಮಕ್ಕಳ ತಂದೆ ಎನಿಸಿಕೊಂಡ ಬಳಿಕ ಬಿಟ್ಟೂ ಅವರನ್ನು ಅವರ ಸ್ನೇಹಿತ ವರ್ಗದವರು ರೇಗಿಸಿದ್ದಾರೆ. ಪತ್ನಿ ಪ್ರತಿಭಾರನ್ನು ಕೂಡಾ ಗರ್ಭಿಣಿಯಾದಾಗಳು ಅನೇಕ ಮಂದಿ ಚೇಡಿಸಿ, ಹಾಸ್ಯ ಮಾಡಿದ್ದಾರೆ.

ಇದರಿಂದ ಮನನೊಂದ ದಂಪತಿ ತಮ್ಮ ನಾಲ್ಕನೇ ಮಗುವನ್ನು ಚರ್ಚ್ ನಲ್ಲಿ ಬಿಡಲು ನಿರ್ಧರಿಸಿದ್ದಾರೆ. ಮಗುವನ್ನು ಇಬ್ಬರು ಚರ್ಚ್ ಬಳಿ ತಂದು ಹಣೆಗೆ ಕಿಸ್ ಮಾಡಿ, ಚರ್ಚ್ ಬಾಗಿಲ ಬಳಿ ಇಟ್ಟು ಹೊರಟ್ಟಿದ್ದಾರೆ. ಆದರೆ, ಸಿಸಿಟಿವಿ ದೃಶ್ಯಗಳು ಕಂಡ ಬಳಿಕ, ಚರ್ಚ್ ಸಿಬ್ಬಂದಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ಕಂಡ ಸಾರ್ವಜನಿಕರು ಕೂಡಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+