ಕಮಲ್ ಹಾಸನ್‌ಗೆ ಗುಂಡಿಕ್ಕಿ ಕೊಲೆ ಮಾಡಬೇಕು: ಹಿಂದೂ ಮಹಾಸಭಾ

Subscribe to Oneindia Kannada

ಮೀರತ್, ನವೆಂಬರ್ 5: ಖ್ಯಾತ ನಟ ಕಮಲ್ ಹಾಸನ್‌ 'ಹಿಂದೂ ಭಯೋತ್ಪಾದನೆ' ಕುರಿತು ಹೇಳಿಕೆ ನೀಡಿರುವ ಬೆನ್ನಿಗೆ ಅವ ರನ್ನು ಗುಂಡಿಕ್ಕಿ ಹತ್ಯೆ ಮಾಡಬೇಕು ಅಥವಾ ಗಲ್ಲಿಗೇರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಆಕ್ರೋಶ ವ್ಯಕ್ತಪಡಿಸಿದೆ.

ಹಿಂದೂಗಳಲ್ಲಿ ಉಗ್ರವಾದ, ಭಯೋತ್ಪಾದನೆ ಇದೆ : ಕಮಲ್

"ತಮ್ಮ ಧಾರ್ಮಿಕ ನಿಲುವುಗಳನ್ನು ‍‍ಪ್ರಚುರಪಡಿಸಲು ಬಲಪಂಥೀಯ ಗುಂಪುಗಳು ಹಿಂದೂ ಭಯೋತ್ಪಾದನೆಯಲ್ಲಿ ತೊಡಗಿವೆ ಎಂದು ಹೇಳಿಕೆ ನೀಡಿರುವ ನಟ ಕಮಲಹಾಸನ್ ಹಾಗೂ ಅಂತವರನ್ನು ಗುಂಡಿಕ್ಕಿ ಕೊಲ್ಲಬೇಕು. ಆಗ ಅವರು ಪಾಠ ಕಲಿಯುತ್ತಾರೆ," ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ ಹೇಳಿದ್ದಾರೆ.

Kamal Haasan should be shot dead : Akhil Bharatiya Hindu Mahasabha

ಹಿಂದೂ ಧರ್ಮಕ್ಕೆ ಸೇರಿದವರ ವಿರುದ್ಧ ಅವಾಚ್ಯ ಭಾಷೆ ಬಳಸುವವರಿಗೆ ಈ ಪವಿತ್ರ ನೆಲದಲ್ಲಿ ಜೀವಿಸುವ ಹಕ್ಕಿಲ್ಲ. ಅವರ ಹೇಳಿಕೆಗೆ ಪ್ರತಿಯಾಗಿ ಅವರು ಸಾಯಬೇಕು ಎಂದು ಶರ್ಮಾ ಪ್ರತಿಪಾದಿಸಿದ್ದಾರೆ.

ಕಮಲಹಾಸನ್ ಚಲನಚಿತ್ರಗಳನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ. ಹಿಂದೂಗಳನ್ನು ಮತ್ತು ಅವರ ಧರ್ಮವನ್ನು ಅವಮಾನಿಸುವವರ ಚಿತ್ರಗಳನ್ನು ಈ ರೀತಿ ಬಹಿಷ್ಕರಿಸುವ ತೀರ್ಮಾನವನ್ನು ಎಲ್ಲಾ ಭಾರತೀಯರು ತೆಗೆದುಕೊಳ್ಳಬೇಕು ಎಂದು ಮೀರತ್ ಹಿಂದೂ ಮಹಾಸಭಾ ಅಧ್ಯಕ್ಷ
ಅಭಿಷೇಕ್‌ ಅಗರವಾಲ್‌ ಹೇಳಿದ್ದಾರೆ.

ನಟ ಕಮಲ್‍ಹಾಸನ್ ಹೇಳಿಕೆ ಮುರ್ಖತನದ್ದು: ಪ್ರಮೋದ್ ಮುತಾಲಿಕ್

ಹಿಂದೂ ಮಹಾ ಸಭಾ ಹೇಳಿಕೆಗೆ ಆಕ್ರೋಶ

ಹಿಂದೂ ಮಹಾಸಭಾ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, 'ಕಮಲ್ ಹಾಸನ್ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿ ಕೊಲೆ ಮಾಡುವಂತೆ ಬೆದರಿಸುವ ಹಿಂದೂ ಮಹಾಸಭಾ ಹೇಳಿಕೆಯನ್ನು ಖಂಡಿಸುವುದಾಗಿ' ಕೇಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಕಮಲ್ ಹಾಸನ್ ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವವರನ್ನು ಬಂಧಿಸಬೇಕು ಎಂದು ಪಿಣರಾಯಿ ವಿಜಯನ್ ಹಾಗೂ ಶಶಿ ತರೂರ್ ಆಗ್ರಹಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A senior leader of a Hindu outfit, Akhil Bharatiya Hindu Mahasabha on Friday said people like Kamal Hassan should be ‘shot dead’.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ