Jharkhand Election 2024: ಜಾರ್ಖಂಡ್ ಚುನಾವಣೆ ಬಗ್ಗೆ ಮಹತ್ವದ ಬಗ್ಗೆ ಮಹತ್ವದ ಅಪ್ಡೇಟ್ ಇಲ್ಲಿದೆ
Jharkhand Election 2024: ಈಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯ 2 ಹಂತದ ಮತದಾನ ನಡೆದಿದ್ದು, ಮೂರನೇ ಹಂತ ಬಾಕಿಯಿದೆ. ಹರಿಯಾಣದಲ್ಲಿ ಅಕ್ಟೋಬರ್ 5ರಂದು 1 ಹಂತದಲ್ಲಿ ಮತದಾನ ನಡೆಯಲಿದೆ. ಮತ್ತೊಂದೆಡೆ ಮಹರಾಷ್ಟ್ರ & ಜಾರ್ಖಂಡ್ ವಿ ಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವುದು ಬಾಕಿಯಿದೆ. ಹಾಗಾದರೆ ಯಾವಾಗ ನಿಗದಿಯಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನವೆಂಬರ್ ಎರಡನೇ ವಾರದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೇಳಿದ್ದಾರೆ. ಇನ್ನೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಯಾವಾಗ ನಡೆಯಲಿದೆ ಎನ್ನುವ ಗೊಂದಲಗಳು ಉಂಟಾಗಿದ್ದವು. ಇದಕ್ಕೆ ಮುಖ್ಯ ಚುನಾವಾಣಾ ಆಯುಕ್ತ ರಾಜೀವ್ ಕುಮಾರ್ ಅವರು ಸ್ಪಷ್ಟನೆಯೊಂದನ್ನು ನೀಡಿದ್ದರು.

ಇತ್ತೀಚೆಗಷ್ಟೇ ಚುನಾವಣಾ ಆಯೋಗ ತಂಡ ಜಾರ್ಖಂಡ್ ಪ್ರವಾಸ ಬೆಳೆಸಿತ್ತು. ಈ ವೇಳೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನಿಗದಿತ ಸಮಯಕ್ಕೆ ಚುನಾವಣೆ ನಡೆಯಲಿದೆ ಎಂದು ಹೇಳಿದ್ದರು. ಇನ್ನು ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2-3 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳಿ ಮಾಹಿತಿ ನೀಡಿದ್ದರು.
2019ರಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 20ರ ನಡುವೆ 5 ಹಂತಗಳಲ್ಲಿ 81 ವಿಧಾನಸಭಾ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸಲಾಗಿದ್ದು, ಡಿಸೆಂಬರ್ 23ರಂದು ಫಲಿತಾಂಶಗಳನ್ನು ಘೋಷಣೆ ಮಾಡಲಾಯಿತು. ಇನ್ನು ಈ ಬಾರಿ 2024 ವರ್ಷದ ಕೊನೆಯಲ್ಲಿ ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಹಾರಾಷ್ಟ್ರ ವಿಧಾನಸಭೆಯ ಅಧಿಕಾರಾವಧಿಯು ನವೆಂಬರ್ 25ರಂದು ಕೊನೆಗೊಳ್ಳಲಿದೆ. ಆದ್ದರಿಂದ ಇಲ್ಲಿ ನವೆಂಬರ್ 2ನೇ ವಾರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿ ಎಂದು ಹೇಳಲಾಗುತ್ತಿದೆ. ಅಲ್ಲದೆ, ಜೊತೆಗೆ ಇದೇ ವೇಳೆ ಜಾರ್ಖಂಡ್‌ನಲ್ಲೂ ಚುನಾವಣೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಹುಲ್ ಗಾಂಧಿ ವಿರುದ್ಧ ಆಕ್ರೋಶ: ಉಧಮ್‌ಪುರದಲ್ಲಿ ಇಂದು (ಸೆಪ್ಟೆಂಬರ್ 26) ಜಮ್ಮು ಮತ್ತು ಕಾಶ್ಮೀರದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹಿಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ರಾಹುಲ್ ಗಾಂಧಿ 370ನೇ ವಿಧಿಯನ್ನು ವಾಪಸ್ ತರುತ್ತೇವೆ ಎಂದು ಹೇಳುತ್ತಾರೆ. ನಾನು ಈ ಹಂತದಿಂದ ಹೇಳಲು ಬಯಸುತ್ತೇನೆ, ರಾಹುಲ್ ಬಾಬಾ ಅವರೇ, ನಿಮ್ಮ ಮೂರು ತಲೆಮಾರುಗಳು ಬಂದರೂ ಸಹ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಹಿಂತಿರುಗಿಸುವಷ್ಟು ಶಕ್ತಿ ಇಲ್ಲ," ಎಂದು ಟಾಂಗ್ ಕೊಟ್ಟರು.
"ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ತರುತ್ತೇವೆ ಎಂದು ಒಮರ್ ಅಬ್ದುಲ್ಲಾ ಮತ್ತು ರಾಹುಲ್ ಬಾಬಾ ಹೇಳುತ್ತಿದ್ದಾರೆ. ಈ ಕುಟುಂಬಗಳು 70 ವರ್ಷಗಳ ಕಾಲ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿವೆ. ಈ ಹಿಂದೆ ಇಲ್ಲಿ ಚುನಾವಣೆ ನಡೆದಿದೆಯೇ? ನಮ್ಮ ನಾಯಕ ನರೇಂದ್ರ ಮೋದಿ ಈ ಕೆಲಸ ಮಾಡಿದ್ದಾರೆ. ಇಂತಹವರು ತಮ್ಮವರಿಗೇ ಟಿಕೆಟ್ ಕೊಟ್ಟು ನಾಯಕರನ್ನಾಗಿ ಮಾಡಿದ್ದಾರೆ," ಎಂದು ಆಕ್ರೊಶ ಹೊರಹಾಕಿದರು.












Click it and Unblock the Notifications