Jeet Adani Wedding: ಜೀತ್ ಅದಾನಿ - ದಿವಾ ಶಾ ಮದುವೆ ಫೋಟೊ ಹಂಚಿಕೊಂಡ ಗೌತಮ್ ಅದಾನಿ

ಕೈಗಾರಿಕೋದ್ಯಮಿ ಮತ್ತು ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿ ಅವರ ಮದುವೆ ಇಂದು (ಶುಕ್ರವಾರ) ನಡೆಯಿತು. ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಶಾರನ್ನು ಜೀತ್ ಅದಾನಿ ಮದುವೆಯಾಗಿದ್ದು, ಸರಳವಾಗಿ ಮತ್ತು ಸಂಪ್ರದಾಯಬದ್ದವಾಗಿ ಮದುವೆ ನಡೆಯಿತು. ಗೌತಮ್ ಅದಾನಿ ತಮ್ಮ ಮಗನ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಜೀತ್ ಅದಾನಿ ಮತ್ತು ದಿವಾ ಶಾ 2023ರ ಮಾರ್ಚ್ 14ರಂದು ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಅಹಮಾದಾಬಾದ್‌ನಲ್ಲಿ ಈ ಜೋಡಿ ವೈವಾವಿಕ ಜೀವನಕ್ಕೆ ಕಾಲಿಟ್ಟಿದೆ. ಫೆಬ್ರವರಿ 5ರಂದೇ ವಿವಾಹಪೂರ್ವ ಆಚರಣೆಗಳು ಪ್ರಾರಂಭವಾಗಿದ್ದವು.

Jeet Adani marries Diva Shah in a low-profile ceremony today as announced by business tycoon Adani

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದು, ಅಹಮದಾಬಾದ್‌ನ ಅದಾನಿ ಪಟ್ಟಣವಾದ ಶಾಂತಿಗ್ರಾಮದಲ್ಲಿ ಜೈನ ಮತ್ತು ಗುಜರಾತಿ ಸಂಪ್ರದಾಯಗಳ ಪ್ರಕಾರ ಮದುವೆ ನಡೆದಿದೆ.

ಸಂತಸ ಹಂಚಿಕೊಂಡ ಗೌತಮ್ ಅದಾನಿ

ಎಕ್ಸ್‌ನಲ್ಲಿ ಮಗನ ಮದುವೆ ಪೋಟೊ ಹಂಚಿಕೊಂಡಿರುವ ಗೌತಮ್ ಅದಾನಿ, "ದೇವರ ಆಶೀರ್ವಾದದಿಂದ ಜೀತ್ ಮತ್ತು ದಿವಾ ಇಂದು ವಿವಾಹದ ಪವಿತ್ರ ಬಂಧನಕ್ಕೆ ಒಳಗಾದರು. ಇಂದು ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳು ಮತ್ತು ಶುಭ ಮಂಗಳ ಭಾವದೊಂದಿಗೆ ಪ್ರೀತಿಪಾತ್ರರ ಸಮ್ಮುಖದಲ್ಲಿ ವಿವಾಹ ನಡೆಯಿತು. ಇದು ಚಿಕ್ಕದಾದ ಮತ್ತು ಅತ್ಯಂತ ಖಾಸಗಿ ಕಾರ್ಯಕ್ರಮವಾಗಿತ್ತು, ಆದ್ದರಿಂದ ನಾವು ಬಯಸಿದ್ದರೂ ಸಹ ಎಲ್ಲಾ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಮಗಳು ದಿವಾ ಮತ್ತು ಜೀತ್‌ಗೆ ನಿಮ್ಮೆಲ್ಲರಿಂದ ನನ್ನ ಹೃತ್ಪೂರ್ವಕ ಪ್ರೀತಿ ಮತ್ತು ಆಶೀರ್ವಾದಗಳನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಮದುವೆಗೆ ಮುನ್ನ ಸಮಾಜಕ್ಕೆ ಕೊಡುಗೆ

ಜೀತ್ ಅದಾನಿ ಮತ್ತು ದಿವಾ ಶಾ ಮದುವೆಯನ್ನು ಸಂಪ್ರದಾಯ, ಸೊಬಗು ಮತ್ತು ಸಾಮಾಜಿಕ ಕೆಲಸಗಳ ಮೂಲಕ ಅರ್ಥಪೂರ್ಣವಾಗಿಸಲು ನಿರ್ಧರಿಸಿದ್ದಾರೆ. ಬಾಲಿವುಡ್‌ನ ಖ್ಯಾತ ಫ್ಯಾಷನ್ ಡಿಸೈನರ್ ಆಗಿರುವ ಮನೀಶ್ ಮಲ್ಹೋತ್ರಾ ಜೀತ್ ಮತ್ತು ದಿವಾ ಅವರಿಗಾಗಿ ತಯಾರಿಸುವ ಶಾಲುಗಳಿಗಾಗಿ ಫ್ಯಾಮಿಲಿ ಆಫ್ ಡಿಸೇಬಲ್ಡ್ (FOD) ಎನ್‌ಜಿಒ ಜೊತೆ ಕೈಜೋಡಿಸಿದ್ದಾರೆ.

ಇದು ವಿಕಲಚೇತರಿಗೆ ನೆರವು ನೀಡುವುದರಲ್ಲಿ ಸದಾ ಮುಂದಾಗುವ ಜೀತ್ ಅದಾನಿಯ ಆಲೋಚನೆಯಾಗಿದೆ. ಈ ಎನ್‌ಜಿಒ ಗಾಜಿನ ವಸ್ತುಗಳು, ತಟ್ಟೆಗಳು ಮತ್ತು ಪರಿಕರಗಳು ಸೇರಿದಂತೆ ಕೈಯಿಂದ ಸಿದ್ದಪಡಿಸಿದ ಮದುವೆಗೆ ಅಗತ್ಯವಿರುವ ವಸ್ತುಗಳನ್ನು ತಯಾರಿಸಿ ಕೊಡಲಿದೆ.

ಇದಲ್ಲದೆ ಪ್ರತಿ ವರ್ಷ 500 ದಿವ್ಯಾಂಗ ಮಹಿಳೆಯರ ಮದುವೆಗಾಗಿ ತಲಾ 10 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವುದಾಗಿ ಜೀತ್ ಅದಾನಿ ಮತ್ತು ದಿವಾ ಶಾ ನಿರ್ಧರಿಸಿದ್ದಾರೆ. ಬುಧವಾರ 21 ನವ ವಿವಾಹಿತ ದಿವ್ಯಾಂಗ ಮಹಿಳೆಯರು ಮತ್ತು ಅವರ ಸಂಗಾತಿಯನ್ನು ಭೇಟಿ ಮಾಡಿದ ಜೀತ್ ಅದಾನಿ ಮತ್ತು ದಿವಾ ಶಾ ಈ ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಜೀತ್ ಅದಾನಿ ಬಗ್ಗೆ ಹೆಚ್ಚಿನ ಮಾಹಿತಿ

ಜೀತ್ ಅದಾನಿ ಭಾರತದ ಪ್ರಮುಖ ಕೈಗಾರಿಕೋದ್ಯಮಿ ಗೌತಮ್ ಅದಾನಿಯವರ ಕಿರಿಯ ಮಗ. ಅದಾನಿ ವಿಮಾನ ನಿಲ್ದಾಣ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. 2019ರಲ್ಲಿ ಅದಾನಿ ಗ್ರೂಪ್‌ನ ಸಿಎಫ್‌ಒ ಕಚೇರಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಅವರು ಪೈಲಟ್ ತರಬೇತಿ ಕೂಡ ಮುಗಿಸಿದ್ದಾರೆ.

ಜರಾತ್‌ನ ಮುಂದ್ರಾದಲ್ಲಿ ಸಣ್ಣ ಗ್ರಾಮೀಣ ಯೋಜನೆಯಿಂದ ಅದಾನಿ ಫೌಂಡೇಶನ್ ಮೂಲಕ ಸಮಾಜದಲ್ಲಿ ಬದಲಾವಣೆ ತಂದ ತಾಯಿ ಪ್ರೀತಿ ಅದಾನಿಯವರ ಸಾಮಾಜಿಕ ಸೇವೆಗಳಿಂದ ಜೀತ್ ಅದಾನಿ ಸ್ಪೂರ್ತಿ ಪಡೆದಿದ್ದು, ಅವರ ಹಾದಿಯಲ್ಲೇ ಸಾಗಲು ನಿರ್ಧರಿಸಿದ್ದಾರೆ.

ವಜ್ರದ ಉದ್ಯಮಿ ಮಗಳು ದಿವಾ ಜೈಮಿನ್ ಶಾ

ಜೀತ್ ಅದಾನಿ ಕೈ ಹಿಡಿಯುತ್ತಿರುವ ದಿವಾ ಜೈಮಿನ್ ಶಾ ಗುಜರಾತ್‌ನ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ. ಸಿ. ದಿನೇಶ್ ಮತ್ತು ಕಂಪನಿ ಪ್ರೈವೇಟ್ ಲಿಮಿಟೆಡ್‌ನ ಸಹ-ಮಾಲೀಕರು ಆಗಿದ್ದಾರೆ. ಇದು ಪ್ರಸಿದ್ಧ ವಜ್ರ ತಯಾರಿಕಾ ಸಂಸ್ಥೆಯಾಗಿದ್ದು ಸೂರತ್ ಮತ್ತು ಮುಂಬೈನಲ್ಲಿ ವ್ಯವಹಾರ ನಡೆಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+