400 ಎಕರೆ ಅರಣ್ಯ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆಗೆ ಜೆಸಿಬಿ: ಪ್ರಾಣಿಗಳ ಆಕ್ರಂದನ, ವಿಡಿಯೋ ವೈರಲ್!

ತೆಲಂಗಾಣ ಕಾಂಗ್ರೆಸ್‌ ಸರ್ಕಾರ ಮಾಡಿರುವ ಎಡವಟ್ಟು ದೇಶವ್ಯಾಪ್ತಿ ಚರ್ಚೆ ಹಾಗೂ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಭಾರೀ ಅರಣ್ಯ ನಾಶಕ್ಕೆ ಸರ್ಕಾರವು ನಾಂದಿ ಹಾಡಿದ್ದು ಇದರಿಂದ ಸಾವಿರಾರು ವನ್ಯಜೀವಿಗಳಿಗೆ ಸಂಕಷ್ಟ ಎದುರಾಗಿದೆ. ಮೂಕ ಪ್ರಾಣಿಗಳ ಆಕ್ರಂದನ ಮುಗಿಲು ಮುಟ್ಟಿದ್ದು. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬರೋಬ್ಬರಿ 400 ಎಕರೆ ಅರಣ್ಯ ನಾಶಕ್ಕೆ ಕೈ ಹಾಕಿದ್ದ ಸರ್ಕಾರವು ಜನ ಸಾಮಾನ್ಯರು ಹಾಗೂ ವಿರೋಧ ಪಕ್ಷಗಳಿಂದ ಛೀಮಾರಿ ಹಾಕಿಸಿಕೊಂಡಿದೆ.

ನೆರೆಯ ತೆಲಂಗಾಣ ಸರ್ಕಾರವು ಪರಿಸರ ಪ್ರೇಮಿಗಳು, ವನ್ಯಜೀವಿ ಪ್ರಿಯರು ಹಾಗೂ ಜನ ಸಾಮಾನ್ಯರಿಂದ ಏಕಕಾಲಕ್ಕೆ ಆಕ್ರೋಶಕ್ಕೆ ಗುರಿಯಾಗಿದ್ದು ಕೊನೆಗೂ ಕೋರ್ಟ್‌ ಮಧ್ಯಪ್ರವೇಶ ಮಾಡಿದೆ. ಈಚೆಗೆ ಗ್ಯಾರಂಟಿ ಯೋಜನೆಗಳ ನಿರ್ವಹಣೆಯಲ್ಲಿ ಲೋಪ ಹಾಗೂ ಸರ್ಕಾರಿ ನೌಕರರಿಗೆ ವೇತನ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದರು. ಇದೀಗ ರೇವಂತ ರೆಡ್ಡಿ ಸರ್ಕಾರವು ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ( Hyderabad Central University - Hcu) ಎಚ್‌ಸಿಯದ ಸಮೀಪದಲ್ಲಿ ಬರೋಬ್ಬರಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ನಾಶಕ್ಕೆ ಕೈಹಾಕಿದ್ದು. ಮೂಕ ಪ್ರಾಣಿಗಳು ರೋಧನೆ ಮುಗಿಲು ಮುಟ್ಟಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗ್ತಿದೆ.

JCB to Set Up Industry in 400 Acres of Forest in Telangana Video of Animal Viral

ತೆಲಂಗಾಣದ ಹೈದರಾಬಾದ್ ಸೆಂಟ್ರಲ್ ಯೂನಿವರ್ಸಿಟಿ( Hyderabad Central University - Hcu) ಎಚ್‌ಸಿಯುಬಳಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯದಲ್ಲಿ ರಾತ್ರೋ ರಾತ್ರಿ ಅರಣ್ಯ ನಾಶಕ್ಕೆ ಸರ್ಕಾರ ಕೈಹಾಕಿದೆ ಎನ್ನಲಾಗಿದ್ದು. ರಾತ್ರೋ ರಾತ್ರಿ ಈ ಪ್ರದೇಶಕ್ಕೆ 30 ರಿಂದ 40 ಜೆಸಿಬಿ ಅಗೆಯುವ ಯಂತ್ರಗಳನ್ನು ಬಳಸಿಕೊಂಡು ಅರಣ್ಯನಾಶಕ್ಕೆ ಮುಂದಾಗಿದ್ದು. ಇದಕ್ಕೆ ಇಲ್ಲಿನ ವಿದ್ಯಾರ್ಥಿಗಳು ಹಾಗೂ ಜನರಿಂದ ಭಾರೀ ಆಕ್ಷೇಪ ವ್ಯಕ್ತವಾಗಿದೆ.

ತೆಲಂಗಾಣ ಸರ್ಕಾರವು ಇಲ್ಲಿನ ಅರಣ್ಯ ಪ್ರದೇಶದಲ್ಲಿ ಮೂಲಸೌಕರ್ಯ ಹಾಗೂ ಐಟಿ ಪಾರ್ಕ್‌ಗಳ ಅಭಿವೃದ್ಧಿಗೆ ಮುಂದಾಗಿತ್ತು. ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿ (ಟಿಜಿಐಐಸಿ)ಗೆ 400 ಎಕರೆ ಭೂಮಿ ಹಂಚಿಕೆ ಮಾಡಲಾಗಿತ್ತು. ಇದು ಈ ಭಾಗದಲ್ಲಿ ಅಲ್ಲೋಲ - ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಈ ಭಾಗದ ಭೂಮಿಯು ಮೀಸಲು ಅರಣ್ಯದ ಭಾಗವಾಗಿದೆ. ಅಲ್ಲದೇ ಅಳಿವಿನಂಚಿನಲ್ಲಿರುವ ನೂರಾರು ಪ್ರಭೇದಗಳು, ವೈವಿಧ್ಯಮಯ ಸಸ್ಯಗಳು ಹಾಗೂ ಪ್ರಾಣಿ ಸಂಕುಲದ ನೆಲೆಯಾಗಿದೆ. ಆದರೆ, ಇಂತಹ ಸೂಕ್ಷ್ಮ ಪ್ರದೇಶದಲ್ಲಿ ಕೈಗಾರಿಕೆ ನಿರ್ಮಾಣಕ್ಕೆ ಮುಂದಾಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಏನಿದು ಪ್ರಕರಣ ?

ತೆಲಂಗಾಣ ಸರ್ಕಾರವು ಅಲ್ಲಿನ ರಾಜ್ಯ ರಾಜಧಾನಿ ಹೈದರಾಬಾದ್‌ನಲ್ಲಿ ಸೆಂಟ್ರಲ್ ಯೂನಿವರ್ಸಿಟಿ( Hyderabad Central University - Hcu) ಎಚ್‌ಸಿಯದ ಸಮೀಪದಲ್ಲಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದಲ್ಲಿರುವ ಅರಣ್ಯ ಪ್ರದೇಶದಲ್ಲಿ ಬೃಹತ್‌ ಕಾರ್ಯಾಚರಣೆ ನಡೆಸುವುದಕ್ಕೆ ಮುಂದಾಗಿತ್ತು. ಇದೀಗ ಈ ಪ್ರಕರಣದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಮಾಡಿದೆ. ಈ ಭಾಗದಲ್ಲಿ ಭೂ ತೆರವು ಕಾರ್ಯಚರಣೆಯನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+