ಅಕ್ರಮ ಆಸ್ತಿ ಕಳೆಯಲು ಸುಳ್ಳು ಸಾಲ ತೋರಿಸಿದ್ದರೆ ಜಯಾ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್, 16: ಜಯಾ ಅಕ್ರಮ ಆಸ್ತಿಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಮುಂದುವರಿದಿದೆ. ಜಯಲಲಿತಾ ಅವರ ಸಾಲವನ್ನು ಯಾವ ಆಧಾರದಲ್ಲಿ ಲೆಕ್ಕ ಹಾಕಲಾಯಿತು? ಎಂದು ಬಿವಿ ಆಚಾರ್ಯ ಪ್ರಶ್ನೆ ಮಾಡಿದ್ದಾರೆ.

ಜಯಲಲಿತಾ ಹೊಂದಿದ್ದ ಸಾಲದ ಲೆಕ್ಕಕ್ಕೂ ಅಕ್ರಮ ಆಸ್ತಿ ಗಳಿಕೆಗೂ ನಿಕಟ ಸಂಬಂಧವಿದೆ. ಸಾಲದ ಲೆಕ್ಕ ಮಾಡಿದ ವಿಧಾನವೇ ಸರಿ ಇಲ್ಲ ಎಂದು ಆಚಾರ್ಯ ವಾದ ಮುಂದಿಟ್ಟಿದ್ದಾರೆ.[ಜಯಾ ತೆರಿಗೆ ಸಲ್ಲಿಕೆ ಮಾಡಿದ್ದು ಅಕ್ರಮ ಆಸ್ತಿ ಪ್ರಕರಣ ಮುಚ್ಚಿಹಾಕಲೆ?]

jayalalithaa

ಕರ್ನಾಟಕ ಹೈಕೋರ್ಟ್ ಸಹ ಸಾಲದ ಲೆಕ್ಕವನ್ನು ಸರಿಯಾಗಿ ಹಾಕುವಲ್ಲಿ ಎಡವಿದೆ. 24.17 ಕೋಟಿ ರು. ಸಾಲದ ಲೆಕ್ಕವನ್ನು ನೀಡಿದ್ದು ಅದರ ಮೂಲ ಎಲ್ಲಿ ಎಂಬ ಉಲ್ಲೇಖವನ್ನು ಎಲ್ಲಿಯೂ ಮಾಡಿಲ್ಲ.[ಜಯಾ ಪ್ರಕರಣದ ಟೈಮ್ ಲೈನ್]

ನ್ಯಾಯಮೂರ್ತಿ ಕುಮಾರಸ್ವಾಮಿ ಅಂತಿಮ ತೀರ್ಪು ನೀಡುವ ವೇಳೆ ಈ 24.17 ಕೋಟಿ ಸಾಲದ ಉಲ್ಲೇಖ ಮಾಡಿ ಅಕ್ರಮ ಆಸ್ತಿ ಗಳಿಕೆ ಲೆಕ್ಕದಲ್ಲಿ ಕಳೆದಿದ್ದರು. ಆದರೆ ಈ ಸಾಲಕ್ಕೆ ಮೂಲವೇ ಇಲ್ಲ ಎಂದು ಆಚಾರ್ಯ ವಾದ ಮುಂದಿಟ್ಟಿದ್ದಾರೆ. ಜಯಾ ಬಳಿ ಇದ್ದ ಹಣದಲ್ಲಿ ಶೇ. 76ಕ್ಕೂ ಅಧಿಕ ಮೊತ್ತಕ್ಕೆ ಯಾವುದೇ ಆಧಾರಗಳು ಇರಲಿಲ್ಲ ಎಂಬುದನ್ನು ಹಿಂದೆಯೆ ಸಾಬೀತು ಮಾಡಲಾಗಿದೆ ಎಂದು ಆಚಾರ್ಯ ವಾದ ಮಂಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka, as per the directive of the Supreme Court, will place on record the loan details in relation to the disproportionate assets case. J Jayalalithaa, the chief minister of Tamil Nadu and three others were acquitted by the Karnataka High Court following which an appeal was preferred.
Please Wait while comments are loading...