ಸೇನೆ-ಉಗ್ರರ ಸಂಘರ್ಷದಲ್ಲಿ 2 ಸೈನಿಕರು, 4 ಭಯೋತ್ಪಾದಕರ ಸಾವು

Subscribe to Oneindia Kannada

ಶ್ರೀನಗರ, ಫೆಬ್ರವರಿ 12: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಭೀಕರ ಎನ್ಕೌಂಟರಿನಲ್ಲಿ ಇಬ್ಬರು ಸೈನಿಕರು ಪ್ರಾಣ ಕಳೆದುಕೊಂಡಿದ್ದು ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಓರ್ವ ನಾಗರಿಕನೂ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ನಾಲ್ವರು ಹಿಜ್ಬುಲ್ಲಾ ಮುಜಾಹಿದ್ದೀನ್ ಬಂಡುಕೋರರನ್ನೂ ಸೈನಿಕರು ಹೊಡೆದುರುಳಿಸಿದ್ದಾರೆ. ಕುಲ್ಗಾಮಾ ಜಿಲ್ಲೆಯ ನೌಪೊರಾ ಯಾರಿಪೊರಾ ಪ್ರದೇಶದಲ್ಲಿ ಈ ಎನ್ಕೌಂಟರ್ ನಡೆಯುತ್ತಿದೆ. [ಬಾರಾಮುಲ್ಲಾದಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ]

Jammu and Kashmir: 2 army jawans, 4 Hizbul millitants killed in an encounter

ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮುಂಜಾನೆ ಸೇನೆ ಮತ್ತು ಕಾಶ್ಮೀರ ವಿಶೇಷ ಪೊಲೀಸ್ ಪಡೆಗಳ ಅಧಿಕಾರಿಗಳು ಮೌಪೊರಾ ಗ್ರಾಮದಲ್ಲಿ ದಾಳಿ ನಡೆಸಿದ್ದರು. ಪೊಲೀಸರು ಮತ್ತು ಸೈನಿಕರು ಮನೆ ಪಕ್ಕ ಬರುತ್ತಿದ್ದಂತೆ ಬಂಡುಕೋರರು ತಾವು ಅಡಗಿಕೊಂಡಿದ್ದ ಮನೆಯಿಂದ ಗುಂಡಿನ ದಾಳಿ ಆರಂಭಿಸಿದ್ದಾರೆ. ಸ್ಥಳದಲ್ಲಿ ಸೈನಿಕರು ಮತ್ತು ಬಂಡುಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ.

ಎನ್ಕೌಂಟರಿನಲ್ಲಿ ಸಾವಿಗೀಡಾದ ಇಬ್ಬರು ಬಂಡುಕೋರರನ್ನು ಮುದಾಸಿರ್ ತಾಂತರಿ ಮತ್ತು ಮಹಮ್ಮದ್ ಹಾಶಿಮ್ ಎಂದು ಗುರುತಿಸಲಾಗಿದೆ. ಸಾವಿಗೀಡಾದವರಿಂದ ನಾಲ್ಕುರೈಫಲ್ ಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಉಗ್ರರ ಗುರುತು ಪತ್ತೆಯಾಗಿಲ್ಲ. [ಜನರ ಜೀವ ಕಸಿಯುತ್ತಿದೆ ಜಮ್ಮು-ಕಾಶ್ಮೀರದ ಹಿಮ ಕುಸಿತ!]

ಸ್ಥಳದಲ್ಲಿ ಎನ್ಕೌಂಟರ್ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Security forces killed four Hizbul Mujahideen militants in an encounter at Nowpora Yaripora area of Jammu and Kashmir’s Kulgam district. Two Army jawans were killed in the operation and one police personal from the Jammu and Kashmir police's Special Operation group have been injured.
Please Wait while comments are loading...